Home ಇನ್ನಷ್ಟು ಕೋರ್ಟು - ಕಾನೂನು ಗೇ ಸೇರಿದಂತೆ ಪ್ರತಿಯೊಬ್ಬರಿಗೂ ನೈತಿಕವಾಗಿ ಬದುಕುವ ಹಕ್ಕಿದೆ – ಸುಪ್ರೀಂ ಕೋರ್ಟ್

ಗೇ ಸೇರಿದಂತೆ ಪ್ರತಿಯೊಬ್ಬರಿಗೂ ನೈತಿಕವಾಗಿ ಬದುಕುವ ಹಕ್ಕಿದೆ – ಸುಪ್ರೀಂ ಕೋರ್ಟ್

0

ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. ಇದು ಹಿಂದೂ ವಿವಾಹ ಕಾಯ್ದೆ ಅಥವಾ ವೈಯಕ್ತಿಕ ಕಾನೂನುಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಕ್ವೀರ್‌ (ಗೇ-ಲೆಸ್ಬಿಯನ್….)‌ ಎಂಬುದು ನಗರ ಕೇಂದ್ರಿತ ಇಲೀಟ್‌ನೆಸ್‌ ಅಲ್ಲ. ಸಲಿಂಗಕಾಮ ಅಥವಾ ಕ್ವೆರ್ನೆಸ್ ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಉನ್ನತ ವರ್ಗಗಳಿಗೆ ಸೀಮಿತವಾಗಿಲ್ಲ – ಸುಪ್ರೀಂ ಕೋರ್ಟ್‌

ಗೇ – ಕ್ವೀರ್‌ ವ್ಯಕ್ತಿ ಸೇರಿದಂತೆ ಪ್ರತಿಯೊಬ್ಬನಿಗೂ ತನ್ನ ಜೀವನದ ನೈತಿಕ ಗುಣಮಟ್ಟವನ್ನು ಪ್ರಶ್ನಿಸುವ ಹಕ್ಕಿದೆ – ಸಿಜೆಐ ಡಿವೈ ಚಂದ್ರಚೂಡ್

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನ ಕ್ರಮದ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಆರ್ಟಿಕಲ್ 21 ರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಬರುತ್ತದೆ – ಸರ್ವೋಚ್ಚ ನ್ಯಾಯಾಲಯ

You cannot copy content of this page

Exit mobile version