Saturday, March 8, 2025

ಸತ್ಯ | ನ್ಯಾಯ |ಧರ್ಮ

ಎಲ್ಲಾ ಹಿಂದೂಗಳು ಹೇಳಿದ್ದನ್ನೇ ಹೇಳಿರುವ ದೂತ ಸಮೀರ್..!

ರಾಜ್ಯದ ಜನರ ಮುಂದೆ ಬೆತ್ತಲಾದ ಅಧರ್ಮಿಗಳು..!
ಹಿಂದೂಗಳೇ ಅಲ್ಲದವರಿಗೆ ಹಿಂದೂ ಸಂಘಟನೆಯ ಬೆಂಬಲ..!?
ಹಿಂದೂ ಸಂಘಟನೆಯ ಮುಖವಾಣಿ ಹೊಸದಿಗಂತಕ್ಕೆ ಬೆಂಕಿ ಇಟ್ಟವರಿವರು..!
ಎಲ್ಲಾ ಹಿಂದೂಗಳು ಹೇಳಿದ್ದನ್ನೇ ಹೇಳಿರುವ ದೂತ ಸಮೀರ್..!

ಸಮೀರ್ ಎಂಬ ಮುಸ್ಲಿಂ ಯುವಕ ಸೌಜನ್ಯ ಪರ ಮಾಡಿರುವ ವಿಡಿಯೋ ಭಾರಿ ಸಂಚಲನ ಮೂಡಿಸಿದ್ದು, ಆತ ಆರೋಪಿತರನ್ನಾಗಿಸಿದವರು ಇನ್ನಿಲ್ಲದಂತೆ ಬೆವತು ಹೋಗಿದ್ದಾರೆ. ಹಾಗಂತ ಈ ವಿಡಿಯೋದಿಂದ ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆ ಅಥವಾ ಮತ್ತೊಂದು ಸುತ್ತಿನ ತನಿಖೆ ನಡೆಯಬಹುದು ಎಂಬ ನಿರೀಕ್ಷೆ ಇಲ್ಲ. ಆದ್ರೆ ಇಲ್ಲಿ ಒಂದು ಹಂತದಲ್ಲಿ ಸೌಜನ್ಯಳ ಸಹಿತ ವೇದವಲ್ಲಿ, ಪದ್ಮಲತ, ನಾರಾಯಣ ಸೇರಿದಂತೆ ನೇತ್ರಾವತಿ ನದಿಯಲ್ಲಿ ತೇಲಾಡಿದ ಅದೆಷ್ಟೋ ಹೆಣ್ಣುಮಕ್ಕಳ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು.

ಎಐ ತಂತ್ರಜ್ಞಾನ ಬಳಸಿ ಸಮೀರ್ ಮಾಡಿರುವ ವಿಡಿಯೋ ಕೋಟ್ಯಾಂತರ ಜನರು ವೀಕ್ಷಣೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಹಿಂದೂ ಸಂಘಟನೆಗಳು ಸಮೀರ್ ಎಂಬ ಅನ್ಯಮತೀಯನಿಗೆ ಯಾಕೆ ಹಿಂದೂ ಧರ್ಮದ ವಿಚಾರ ಅಂತ ತಗಾದೆ ತೆಗೆದ್ರೆ , ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಮೀರ್ ವಿರುದ್ಧ ಇನ್ನಿಲ್ಲದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇಲ್ಲಿ ಗಮನಿಸಬೇಕಾಗಿರುವುದು ಏನು ಅಂದ್ರೆ ಸಮೀರ್ ಯಾವುದೇ ಹೊಸ ವಿಚಾರವನ್ನು ಇಲ್ಲಿ ಹೇಳಿಕೊಂಡಿಲ್ಲ. ಈ ಹಿಂದೆಯೂ ಥರ್ಡ್ ಐ, ಕುಡ್ಲಾ ರ್ಯಾಂಪೇಜ್ , ಸೇರಿದಂತೆ ಕೆಲವೊಂದು ಯೂಟ್ಯೂಬರ್ ಗಳೂ ಕೂಡಾ ಇದೇ ಕಥೆ ಹೇಳಿದ್ದಾರೆ. ಆದ್ರೆ ಇಲ್ಲಿ ಸಮೀರ್ ವಿಚಾರವನ್ನು ಜನರಿಗೆ ಅರ್ಥವಾಗಿಸುವ ರೀತಿಯಲ್ಲಿ ಎಐ ಬಳಸಿ ಒಂದು ಶಾರ್ಟ್‌ ಫಿಲಂ ತರ ಪ್ರಸ್ತುತ ಪಡಿಸಿದ್ದಾನೆ. ಹೀಗಾಗಿ ಇದು ಕೋಟ್ಯಾಂತರ ಜನರಿಗೆ ತಲುಪಿದ್ದು, ಆರೋಪಿ ಸ್ಥಾನದಲ್ಲಿರುವವರು ನಕಶಿಖಾಂತ ಕುಸಿದು ಹೋಗಿದ್ದಾರೆ. ಬಿಳಿ ಬಣ್ಣದ ನಿಲುವಂಗಿಯ ಒಳಗೆ ಇವರ ಮೈತುಂಬಾ ನೆತ್ತರು ಮೆತ್ತಿಕೊಂಡಿದೆ ಎಂಬ ಸತ್ಯ ರಾಜ್ಯದ ಜನತೆಯ ಮುಂದೆ ಬಟ್ಟಾಬಯಲಾಗಿದೆ.

ಇಲ್ಲಿ ಸಮೀರ್ ಮಾಡಿರುವ ವಿಡಿಯೋ ಕೋಟ್ಯಾಂತರ ಜನರಿಗೆ ತಲುಪಿ ಜನರು ಸೌಜನ್ಯಳ ಪರ ದನಿ ಎತ್ತುತ್ತಿದ್ದಾರೆ. ಆದ್ರೆ ಎಲ್ಲದರಲ್ಲೂ ಧರ್ಮದ ವಾಸನೆ ಹಿಡಿದು ಹೋಗಿ ಅಭ್ಯಾಸ ಆಗಿರುವವರಿಗೆ ಸಮೀರ್ ಎಂಬ ಯುವಕನ ಏನು ಹೇಳಿದ್ದಾನೆ ಅನ್ನೋದು ಅರ್ಥ ಆಗಿಲ್ಲ. ಆದ್ರೆ ಆತನ ಧರ್ಮ ಮುಂದಿಟ್ಟುಕೊಂಡು ಮುಸ್ಲಿಮನೊಬ್ಬ ನಮ್ಮ ಧರ್ಮದ ಬಗ್ಗೆ ಮಾತಾಡಿದ ಅಂತ ರಕ್ತ ಕುದಿಯಲು ಆರಂಭಿಸಿದೆ. ಧರ್ಮದ ಅಮಲಿನಲ್ಲಿರುವವರಿಗೆ ಸಮೀರ್ ಒಬ್ಬ ಹಿಂದೂ ಹೆಣ್ಣು ಮಗುವಿನ ಅನ್ಯಾಯದ ಸಾವಿಗಾಗಿ ಧ್ವನಿ ಎತ್ತುವ ದೈರ್ಯ ಮಾಡಿದ್ದಾನೆ ಅನ್ನೋದು ಮರೆತು ಹೋಗಿದೆ. ಅಸಲಿಗೆ ರಕ್ತ ಕುದಿಯಬೇಕಾಗಿದ್ದು, ಅನ್ಯಾಯದ ಪರಮಾವದಿ ದಾಟಿ ಎಲ್ಲರನ್ನೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವವರ ಮೇಲಾಗಬೇಕಾಗಿತ್ತು. ಅಷ್ಟಕ್ಕೂ ಹಿಂದೂ ಹಿಂದೂ ಅಂತ ಬೊಬ್ಬೆ ಹೊಡೆಯುವ ಮೊದಲು ಆರೋಪಿತರೆಂದು ಉಲ್ಲೇಖಿತರಾದವರು ಹಿಂದೂ ಧರ್ಮೀಯರೇ ಅಲ್ಲಾ ಅನ್ನೋ ಸಾಮಾನ್ಯ ಪ್ರಜ್ಞೆಯಾದ್ರೂ ಇವರಿಗೆ ಬೇಕಿತ್ತು.

ಸೌಜನ್ಯ ವಿಚಾರದಲ್ಲಿ ಬೆಳ್ತಂಗಡಿಯಲ್ಲಿ ಹನ್ನೆರಡು ವರ್ಷಗಳ ಹಿಂದೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಎಲ್ಲರೂ ಭಾಗವಹಿಸಿದ್ರು ಅನ್ನೋದು ಇವರಿಗೆ ಗೊತ್ತಿಲ್ಲ. ಇಲ್ಲಿ ಸೌಜನ್ಯ ನೆಪಮಾತ್ರವಾಗಿದ್ದು, ಅನ್ಯಾಯಕ್ಕೆ ಒಳಗಾದವರ ದೊಡ್ಡ ದಂಡು ಈ ಅಧರ್ಮಿಗಳ ವಿರುದ್ಧ ತೊಡೆ ತಟ್ಟಿದ್ದಾರೆ. ಸರ್ವ ಧರ್ಮವನ್ನು ಪ್ರೀತಿಸುತ್ತೇನೆ ಎನ್ನುತ್ತಲೇ ಇವರು ಸರ್ವ ಧರ್ಮೀಯರಿಗೂ ಇಲ್ಲಿ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಸಮೀರ್ ಎಂಬ ಯೂಟ್ಯೂಬರ್ ನಲ್ಲಿ ಹಿಂದೂ ಸಂಘಟನೆಗಳಿಗೆ ಧರ್ಮ ಕಾಣಬಹುದೇ ಹೊರತು ಸೌಜನ್ಯ ಹೋರಾಟದ ಪರ ಇರುವ ಅಸಂಖ್ಯಾತ ಹಿಂದುಗಳಿಗೆ ಆತ ಹೆಸರಿಗೆ ತಕ್ಕಂತೆ ದೂತನಾಗಿ ಕಾಣಸಿಕೊಂಡಿದ್ದಾನೆ. ಇಷ್ಟು ವರ್ಷಗಳು ನಡೆದ ಹೋರಾಟ ಯಾಕೆ ಅಂತ ಗೊತ್ತಾಗದೆ ಇದ್ದ ಜನರಿಗೆ ಮನ ಮುಟ್ಟುವಂತೆ ಈ ದೂತ ತಿಳಿಸಿಕೊಟ್ಟಿದ್ದಾನೆ, ಇದೇ ಕಾರಣದಿಂದ ನ್ಯಾಯದೇವತೆ ಕೂಡಾ ಸಮೀರ್ ಕೈ ಹಿಡಿದಿದ್ದು, ಸುಮೋಟೋ ಕೇಸ್ ದಾಖಲಿಸಿ ಸಮೀರ್ ಗೆ ನೊಟೀಸ್ ನೀಡಿದ ಪೊಲೀಸ್ ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡಿದೆ.

ಹಿಂದೂ ಮುಸ್ಲಿಂ ಅನ್ನೋ ವಿಚಾರ ಬಿಟ್ಟು ಇಲ್ಲಿ ಸೌಜನ್ಯ ಸಹಿತ ಅದೆಷ್ಟೋ ಸಾವಿನ ನ್ಯಾಯದ ಬಗ್ಗೆ ಯೋಚಿಸಿ. ಈ ಹೋರಾಟದಿಂದ ಸೌಜನ್ಯಳ ಕರುಣಾಜನಕ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗದೇ ಇರಬಹುದು. ಆದ್ರೆ ಮುಂದೆ ಅದೆಷ್ಟೋ ಹೆಣ್ಣು ಮಕ್ಕಳ ಬಾಳು ಉಳಿಯಬಹುದು ಅನ್ನುವುದು ಸತ್ಯ. ಸದ್ಯ ಸತ್ಯದ ಅನಾವರಣವಾಗಿದ್ದು ಜನರು ಅಧರ್ಮಿಗಳ ವಿರುದ್ಧ ಸಿಡಿದೆದ್ದಿದ್ದಾರೆ ಅನ್ನೋದನ್ನು ಸಮೀರ್ ನನ್ನು ವಿರೋಧಿಸುವವರು ಅರ್ಥ ಮಾಡಿಕೊಳ್ಳಬೇಕಾಗಿದೆ.

ಆ ಗ್ರಾಮದಲ್ಲಿ 2002 ಇಸವಿಯಿಂದ 2012 ನೇ ಇಸವಿಯ ತನಕ ಸುಮಾರು ನಾನೂರಕ್ಕೂ ಹೆಚ್ಚು ಅಸಹಜ ಸಾವುಗಳು ನಡೆದಿತ್ತು. ಕೆಲವು ದೇಹಗಳು ನದಿಯಲ್ಲಿ ತೇಲಾಡಿದ್ದರೆ ಇನ್ನೂ ಕೆಲವು ದೇಹಗಳು ಇಲ್ಲಿನ ವಸತಿ ಗೃಹಗಳಲ್ಲಿ ನೇತಾಡಿದ್ದವು. ಆದ್ರೆ ಸೌಜನ್ಯ ಪ್ರಕರಣಕ್ಕೆ ಜಾನಾಕ್ರೋಶ ವ್ಯಕ್ತವಾದ ಬಳಿಕದ ಹತ್ತು ವರ್ಷಗಳಲ್ಲಿ ಇಲ್ಲಿ ಹತ್ತಿಪ್ಪತ್ತು ಅಸಹಜ ಸಾವುಗಳು ಮಾತ್ರ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ಏನು ಅನ್ನೋದನ್ನು ಆಲೋಚನೆ ಮಾಡಿದ್ರೆ ಸಿಗುವ ಉತ್ತರ ಏನು ಅಂತ ನೀವೇ ಆಳವಾಗಿ ಯೋಚಿಸಿ.

ಕೊನೆಯದಾಗಿ ಹಿಂದುತ್ವದ ವಿಚಾರ ಮುಂದಿಟ್ಟು ಸಮೀರ್‌ನನ್ನು ಧ್ವೇಶಿಸುತ್ತಿರುವವರಿಗಾಗಿ.. ಕೆಲ ವರ್ಷಗಳ ಹಿಂದೆ ಹಿಂದೂ ಸಂಘಟನೆಗಳ ಮುಖವಾಣಿ ಎಂದೇ ಬಿಂಬಿತವಾಗಿರುವ ಹೊಸದಿಗಂತ ಪತ್ರಿಕೆಯನ್ನು ಸರ್ಕ್ಯೂಲೇಟ್ ಆಗಲು ಬಿಡದೆ ಹೊತ್ತಿಸಿ ಹಾಕಿದವರು ಇವರು ಎಂಬುದು ಮರೆತು ಹೋಗಿದೆ. ಅಷ್ಟಕ್ಕೇ ಬಿಡದೆ ಹೊಸದಿಗಂತ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ್ದೂ ಇವರದ್ದೇ ಚೇಲಗಳು ಅನ್ನೋದು ಕೂಡಾ ಮರೆತು ಹೋಗಿದೆ. ಹೊಸದಿಂಗತ ಪತ್ರಿಕೆಯ ಬಗ್ಗೆ ಇಷ್ಟೋಂದು ಆಕ್ರೋಶ ತೋರಿಸಿದ ಅದೇ ಜನಗಳ ಪರವಾಗಿ ಹಿಂದೂ ಸಂಘಟನೆಗಳು ನಿಂತಿರುವುದು ಹಾಸ್ಯಸ್ಪದ ಅಲ್ಲದೆ ಮತ್ತೇನೂ ಅಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page