Thursday, July 24, 2025

ಸತ್ಯ | ನ್ಯಾಯ |ಧರ್ಮ

‘ಅನಿಮಲ್’ ನಿರ್ದೇಶಕನ ಮುಂದಿನ ಚಿತ್ರದಲ್ಲಿ ‘ಎ’ ರೇಟೆಡ್ ದೃಶ್ಯಗಳು; ದೀಪಿಕಾ ಪಡುಕೋಣೆ ವಿರುದ್ಧ ಕಿಡಿಕಾರಿದ ಸಂದೀಪ್ ರೆಡ್ಡಿ ವಾಂಗಾ

ಅರ್ಜುನ್ ರೆಡ್ಡಿ ಮತ್ತು ಅನಿಮಲ್ ನಂತಹ ಔಟ್ ಅಂಡ್ ಔಟ್ ರಾ ಸಿನೆಮಾ ಕೊಟ್ಟ ನಿರ್ದೇಶಕ ತನ್ನ ಮುಂದಿನ ಚಿತ್ರದ ವಿಚಾರವಾಗಿ ಮಾಹಿತಿ ಹೊರಬಿಟ್ಟ ದೀಪಿಕಾ ಪಡುಕೋಣೆ ವಿರುದ್ಧ ಕಿಡಿಕಾರಿದ್ದಾರೆ. ಪ್ರಭಾಸ್ ನಾಯಕರಾಗಿ ನಟಿಸುತ್ತಿರುವ ‘ಸ್ಪಿರಿಟ್’ ಎಂಬ ಹೊಸ ಸಿನಿಮಾದಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿರುವ ಕಾರಣ ತಾನು ಆ ಸಿನೆಮಾದಲ್ಲಿ ನಟಿಸುತ್ತಿಲ್ಲ ಎಂದು ದೀಪಿಕಾ ಪಡುಕೋಣೆ ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ.

ಅನಿಮಲ್ ಚಿತ್ರದ ಅದ್ಭುತ ಯಶಸ್ಸಿನ ನಂತರ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ‘ಸ್ಪಿರಿಟ್‌’ ಎಂಬ ಚಿತ್ರವನ್ನು ಘೋಷಿಸಿದ್ದರು. ಸಧ್ಯ ಸಂದೀಪ್ ತಾರಾಗಣದ ಆಯ್ಕೆ ಹಾಗೂ ಇನ್ನಿತರ ಕೆಲಸಗಳಲ್ಲಿ ನಿರತರಾಗಿದ್ದಾರೆ. ನಾಯಕನಾಗಿ ಪ್ರಭಾಸ್, ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಿ ಇಬ್ಬರ ಜೊತೆಗೂ ಕಥೆಯ ಮಾತುಕತೆ ಕೂಡ ನಡೆದಿತ್ತು.

ಆದರೆ ಇತ್ತೀಚಿನ ಕೆಲ ದಿನಗಳ ಹಿಂದೆ ಸ್ಪಿರಿಟ್‌ ಚಿತ್ರದಿಂದ ದೀಪಿಕಾ ಹೊರಬಂದಿದ್ದು, ಬದಲಿ ನಾಯಕಿಯಾಗಿ ಅನಿಮಲ್‌ ಖ್ಯಾತಿಯ ತೃಪ್ರಿ ದಿಮ್ರಿಯನ್ನು ಆಯ್ಕೆ ಮಾಡಲಾಗಿತ್ತು.

ದೀಪಿಕಾ ಪಡುಕೋಣೆ ಚಿತ್ರದ ಕುರಿತ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದು, ಚಿತ್ರದಲ್ಲಿ ಎ ರೇಟೆಡ್‌ ವಯಸ್ಕ ದೃಶ್ಯಗಳಿರುವುದರಿಂದ ಚಿತ್ರದಿಂದ ಹೊರಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ನಿರ್ದೇಶಕ ಸಂದೀಪ್‌ ರೆಡ್ಡಿ ವಾಂಗಾ ಟ್ವೀಟ್‌ ಮಾಡಿದ್ದು, ಚಿತ್ರದ ಮಾಹಿತಿಗಳನ್ನು ಎಲ್ಲಿಯೂ ಹಂಚಿಕೊಳ್ಳಬಾರದು ಎಂದು ಒಪ್ಪಂದವಾಗಿದ್ದರೂ ಸಹ ನಾಲಿಗೆಹರಿಬಿಟ್ಟಿರುವ ದೀಪಿಕಾ ಮಾಡಿದ್ದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ.

ʼನಾನು ಯಾರಾದರೂ ಕಲಾವಿದರಿಗೆ ಕಥೆ ಹೇಳಿದರೆ ಅವರ ಮೇಲೆ ನಾನು 100% ನಂಬಿಕೆ ಇಟ್ಟಿರುತ್ತೇನೆ. ನಮ್ಮಿಬ್ಬರ ನಡುವೆ ನಾನ್‌ ಡಿಸ್ಕ್ಲೋಷರ್‌ ಅಗ್ರೀಮೆಂಟ್‌ ಆಗಿತ್ತು. ಆದರೆ ಇದನ್ನು ಹೊರಹಾಕುವ ಮೂಲಕ ನಿನ್ನನ್ನು ನೀನು ಎಂತಹ ವ್ಯಕ್ತಿ ಎಂಬುದನ್ನು ಬಿಚ್ಚಿಟ್ಟಿದ್ದೀಯ. ಓರ್ವ ಯುವ ನಟಿಯನ್ನು ಕೆಳಮಟ್ಟದಲ್ಲಿ ಕಂಡು, ನನ್ನು ಕಥೆಯನ್ನು ಹೀಯಾಳಿಸಿದ್ದೀಯ. ಇದೇನಾ ನಿನ್ನ ಮಹಿಳಾವಾದ? ಓರ್ವ ನಿರ್ದೇಶಕನಾಗಿ ನಾನು ಕಷ್ಟಪಟ್ಟು ಕಥೆ ಮಾಡಿರುತ್ತೇನೆ. ನಿನಗದು ಅರ್ಥವಾಗುವುದಿಲ್ಲ, ನಿನಗದು ಎಂದಿಗೂ ಅರ್ಥವಾಗುವುದಿಲ್ಲ. ಮುಂದಿನ ಬಾರಿ ಪೂರ್ತಿ ಕಥೆಯನ್ನು ಬೇಕಿದ್ದರೆ ಹೇಳು’ ಎಂದು ಬರೆದುಕೊಂಡು ಕಿಡಿಕಾರಿದ್ದಾರೆ.

https://twitter.com/imvangasandeep/status/1927064054515867817?t=cU1zxGQ2DduXcqHgnk4qtA&s=19

ಆದರೆ ಸಂದೀಪ್ ರೆಡ್ಡಿ ವಾಂಗಾ ಎಲ್ಲಿಯೂ ಸಹ ದೀಪಿಕಾ ಪಡುಕೋಣೆ ಹೆಸರು ಪ್ರಸ್ತಾಪಿಸಧೇ ಅಷ್ಟು ಬರೆದಿದ್ದು ಹಲವರಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page