Thursday, September 12, 2024

ಸತ್ಯ | ನ್ಯಾಯ |ಧರ್ಮ

ಸಿಜೆ ಚಂದ್ರಚೂಡ್‌ ಅವರಿಂದ ನಮಗೆ ನ್ಯಾಯ ಸಿಗುವುದು ಅನುಮಾನ: ಸಂಜಯ್‌ ರಾವತ್

ಮುಂಬೈ: ಪ್ರಧಾನಿ ಮೋದಿ ಅವರು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮನೆಗೆ ತೆರಳಿ ಗಣಪತಿ ಪೂಜೆಯಲ್ಲಿ ಪಾಲ್ಗೊಂಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವತ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿಜೆ ತಮ್ಮ ಪಕ್ಷದ ವಿಷಯದಲ್ಲಿ ಸೂಕ್ತ ನ್ಯಾಯ ಒದಗಿಸುತ್ತಾರೆ ಎನ್ನುವುದರ ಬಗ್ಗೆ ನನಗೆ ಅನುಮಾನವಿದೆ ಎಂದು ರಾವತ್ ಹೇಳಿದ್ದಾರೆ. ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದು ಆ ಪ್ರಕರಣದಲ್ಲಿ ಪ್ರಧಾನಿ ಮತ್ತೊಬ್ಬ ಕಕ್ಷಿದಾರ ಎಂದು ರಾವತ್ ಹೇಳಿದರು. ಸಾಮಾನ್ಯವಾಗಿ ಗಣಪತಿ ಪೂಜೆಯ ವೇಳೆ ಒಬ್ಬರ ಮನೆಗೆ ಒಬ್ಬರು ಹೋಗುತ್ತಾರೆ ಎಂದ ಸಂಜಯ್ ರಾವುತ್, ಪ್ರಧಾನಿ ಮೋದಿ ಎಷ್ಟು ಜನರ ಮೆನೆಗೆ ಹೋಗಿದ್ದರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಮೋದಿ ಅವರು ಸಿಜೆಐ ಮನೆಗೆ ತೆರಳಿ ಹರಟಿ ಪೂಜೆಯಲ್ಲಿ ಪಾಲ್ಗೊಂಡರು. ಸಂವಿಧಾನದ ಪಾಲಕರಾಗಿರುವ ವ್ಯಕ್ತಿ ರಾಜಕೀಯ ಮುಖಂಡರನ್ನು ಭೇಟಿ ಮಾಡುವುದರಿಂದ ಜನರ ಮನಸ್ಸಿನಲ್ಲಿ ಅನುಮಾನ ಮೂಡುತ್ತದೆ ಎಂದು ಆರೋಪಿಸಿದರು.

ತಮ್ಮ ಪಕ್ಷದ ಪ್ರಕರಣದಲ್ಲಿ ಕೇಂದ್ರ ಸರ್ಕಾರವೇ ಪ್ರತಿವಾದಿಯಾಗಿದ್ದು, ಮುಖ್ಯ ನ್ಯಾಯಮೂರ್ತಿ ಅವರು ಎದುರಾಳಿ ಪಕ್ಷದ ವ್ಯಕ್ತಿಯನ್ನು ಭೇಟಿಯಾದ ಕಾರಣ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ರಾವತ್ ಹೇಳಿದ್ದಾರೆ.

ಆ ಪ್ರಕರಣದಲ್ಲಿ ಸಿಜೆಐ ನ್ಯಾಯ ಒದಗಿಸುವರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ತಮ್ಮ ಪ್ರಕರಣದಲ್ಲಿ ವಾಯಿದೆಗಳನ್ನು ಬದಲಾಯಿಸಲಾಗುತ್ತಿದೆ, ಶಿವಸೇನೆ-ಎನ್‌ಸಿಪಿ ಸಂಬಂಧ ಹದಗೆಟ್ಟಿದೆ, ಅವರಿಗೆ ನ್ಯಾಯ ಸಿಗುತ್ತಿಲ್ಲ ಮತ್ತು ಮಹಾರಾಷ್ಟ್ರದ ಅಕ್ರಮ ಸರ್ಕಾರವನ್ನು ರಕ್ಷಿಸಲು ಪ್ರಧಾನಿ ಮೋದಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page