Thursday, March 5, 2026

ಸತ್ಯ | ನ್ಯಾಯ |ಧರ್ಮ

ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ, ಮತ್ತೆ ಮಿಂಚಿದ ಸಂಜು – ಫೈನಲ್‌ ತಲುಪಿದ ಭಾರತ

ಮುಂಬೈ : ಮುಂಬೈನ ವಾಂಖೆಡೆಯಲ್ಲಿ ನಡೆದ 2026ರ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡದ ಇಂಗ್ಲೆಂಡ್ ವಿರುದ್ಧ 7 ರನ್​ಗಳ ರೋಚಕ  ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಭಾರತ 4ನೇ ಬಾರಿಗೆ ಚುಟುಕು ವಿಶ್ವಕಪ್​ ಫೈನಲ್ ಪ್ರವೇಶಿಸಿದೆ. ಅಲ್ಲದೆ ಟಿ20 ವಿಶ್ವಕಪ್​​ನಲ್ಲಿ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿ ಹೊಸ ದಾಖಲೆ ಬರೆಯಿತು. ಈ ಹಿಂದೆ ಪಾಕಿಸ್ತಾನ ಮಾತ್ರ ಈ ಸಾಧನೆ ಮಾಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 253 ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 246 ರನ್​ಗಳಿಸಿತು. ಜಾಕೋಬ್ ಬೆಥೆಲ್ 105 ರನ್​ಗಳಿಸಿ ನಡೆಸಿದ ಹೋರಾಟ ಆಂಗ್ಲರಿಗೆ ಫಲನೀಡಲಿಲ್ಲ.

254 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್(5) ಹಾಗೂ ನಾಯಕ ಬ್ರೂಕ್(7) ವಿಕೆಟ್ ಒಪ್ಪಿಸಿದರು.  ಇವರಿಬ್ಬರನ್ನ ಹಾರ್ದಿಕ್ ಪಾಂಡ್ಯ ಹಾಗೂ ಬುಮ್ರಾ ಪೆವಿಲಿಯನ್​ಗಟ್ಟಿದರು. ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಇಂದು 17 ಎಸೆತಗಳಲ್ಲಿ 25 ರನ್​ಗಳಿಸಿ ವರುಣ್ ಚಕ್ರವರ್ತಿಗೆ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. 5ನೇ ಕ್ರಮಾಂಕದಲ್ಲಿ ಬಂದ ಟಾಮ್ ಬಾಂಟನ್ 5 ಎಸೆತಗಳಲ್ಲಿ 2 ಸಿಕ್ಸರ್, 1 ಬೌಂಡರಿ ಸಹಿತ 17 ರನ್​ಗಳಿಸಿ ಅಕ್ಷರ್ ಪಟೇಲ್​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page