Tuesday, February 3, 2026

ಸತ್ಯ | ನ್ಯಾಯ |ಧರ್ಮ

ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ: ಇದುವೇ ನೈಜ ಚಿತ್ರಣ

“..ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ ಸಮಯದಲ್ಲಿ ಸಂಸ್ಕೃತ ಕುತಂತ್ರಿಗಳೇ ಹೆಚ್ಚಿದ್ದು, ಸಂಸ್ಕೃತ ಹೇರಿಕೆಗೆ ಸಂವಿಧಾನದಲ್ಲಿ ಅವಕಾಶ ಬರುವ ಹಾಗೆ ಮಾಡಿಕೊಂಡಿದ್ದಾರೆ..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ಸಂಸ್ಕೃತವನ್ನು ಕುತಂತ್ರ ಭಾಷೆ, ಅನಿಷ್ಠ ತಂದೊಡ್ಡಿದ ಭಾಷೆ ಎಂದರೆ ತಪ್ಪಾಗುವುದಿಲ್ಲ ಅದುವೇ ಕರಾಳ ಸತ್ಯ. ಇಂದು ನಾವು ಅನುಭವಿಸುತ್ತಿರುವ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿನ ದೌರ್ಜನ್ಯ, ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ವರ್ಗದವರ ದಬ್ಬಾಳಿಕೆಗೆ ಸಂಸ್ಕೃತವೆ ಮೂಲ ಕಾರಣ. ಸಾಂಕ್ರಾಮಿಕ ರೋಗಗಳಾದ ಕಾಲಾರ, ರೂಬೆಲ್ಲ, ಪ್ಲೇಗ್, ಕರೋನ ಬಂದು ಆಕ್ರಮಿಸಿದರಿಂದ ಕೋಟ್ಯಾನುಕೋಟಿ ಪ್ರಾಣ ಹಾನಿಯಾದುದು, ಸಮಾಜದ ಸ್ವಾಸ್ಥ್ಯ ಹಾಳಾದದ್ದು ಲೆಕ್ಕವಿಲ್ಲದಷ್ಟು. ಅದೇ ತರಹ ಅಸ್ಪೃಶ್ಯತೆ ಎಂಬ ಸಾಂಕ್ರಾಮಿಕ ರೋಗವನ್ನು ಜನಸಾಮಾನ್ಯದ ಜನರ ತಲೆಗೆ ತುಂಬಿ, ಸಾವಿರಾರು ವರ್ಷಗಳಿಂದ ಶ್ರೀಸಾಮಾನ್ಯರನ್ನು ಕ್ರಿಮಿ ಕೀಟಗಳಂತೆ ಕಂಡು, ಅದೇ ರೀತಿ ನಡೆಸಿಕೊಳ್ಳಲು ಇದೇ ಸಂಸ್ಕೃತ ಕಾರಣ. ಇದೇ ಸಂಸ್ಕೃತದಲ್ಲಿ ರಚನೆಯಾದ ಭಗವದ್ಗೀತೆ, ವೇದಗಳು, ಶಾಸ್ತ್ರಗಳೆ ಅಕ್ಷರಸಃ ಕಾರಣ.

ಒಂದು ಕಡೆ ಹಿಂದೂ ಧರ್ಮದ ದರ್ಮಗ್ರಂಥ ಭಗವದ್ಗೀತೆಯೆಂದು  ಬಾಯಿ ಬಡೆದುಕೊಳ್ಳುತ್ತಿರುವ ಶೂದ್ರ ಅಂಧಭಕ್ತರು, ಭಗವದ್ಗೀತೆಯ ಮುಖಪುಟ ಚಿತ್ರಕ್ಕೆ ಮಾರುಹೋಗಿ ಹಾಗೆ ಹೇಳುತ್ತಿರಬೇಕು. ಚಾತುರ್ವರ್ಣ ವ್ಯವಸ್ಥೆಯೆಂಬುದು  ಭಗವದ್ಗೀತೆಯಲ್ಲಿದೆ ಎಂಬುದು ಹಿಂದೂ ಧರ್ಮದ ಶೂದ್ರ ಅಭಿಮಾನಿಗಳಿಗೆ ಗೊತ್ತಿಲ್ಲ. ಮನುಸ್ಮೃತಿಯಲ್ಲಿ ಈ ನಾಡಿನ ಮೂಲ ನಿವಾಸಿ ಜನರಿಗೆ ಕೆಳವರ್ಗದವರು ಎಂಬ ಹಣೆಪಟ್ಟಿ ಕಟ್ಟಿ ಅವರಿಗೆ ವಿಧಿಸಿದ ಕಟ್ಟುಪಾಡುಗಳು ಅಮಾನವೀಯ. ಅವುಗಳನ್ನು ಪಾಲಿಸದ್ದಿದ್ದರೆ ಅಗೋರವಾದಂತಹ ಶಿಕ್ಷೆಗಳು. ಇದೆಲ್ಲವನ್ನು ಪ್ರವಚನಗಳಲ್ಲಿ ಹೇಳುವುದಿಲ್ಲ, ಇಂತಹ ವಿಷಯಗಳನ್ನು ಬಚ್ಚಿಡಲಾಗುತ್ತದೆ. ಆದರೆ ಇಂತಹ ಅನಿಷ್ಟ ಪದ್ದತಿಗಳು ಜನಗಳ ತಲೆಯಲ್ಲಿ ಶಾಶ್ವತವಾಗಿ ಕುಳಿತು ಬಿಟ್ಟಿವೆ, ಅದರ ಪರಿಣಾಮ ತಾಯಿಯಾದವಳು ಮಗುವಿಗೆ ತನ್ನ ಎದೆಹಾಲಿನ ಜೊತೆ ಈ ಜಾತಿಯತೆ, ಅಸ್ಪೃಶ್ಯತೆಯನ್ನು ಸೇರಿಸಿ ಕುಡಿಸಿ ಆ ಮಗುವನ್ನು ಬೆಳೆಸುತ್ತಾಳೆ.

ಕನ್ನಡದಲ್ಲಿನ ಪ್ರಾಚೀನ ಸಾಹಿತ್ಯದಲ್ಲೆ ಆಗಲಿ, ಜಾನಪದ ಸಾಹಿತ್ಯದಲ್ಲೆ ಆಗಲಿ, ನವ ಸಾಹಿತ್ಯದಲ್ಲೆ ಆಗಲಿ ಮನುಷ್ಯ-ಮನುಷ್ಯರಿಗಿರುವ ಸ್ನೇಹ- ಪ್ರೀತಿ ಸಂಬಂಧದ ಬಗ್ಗೆ ಹೇಳುತ್ತದೆ ಮತ್ತು ಮಾನವರ ನಡುವೆ ಇರುವ ಪ್ರೀತಿ- ಬೆಸುಗೆಯನ್ನು ಹೆಚ್ಚಿಸುತ್ತದೆ. ಮೇಲು ಕೀಳೆಂಬ ಅನಿಷ್ಟವನ್ನು ಸೃಷ್ಟಿಸುವುದಿಲ್ಲ, ಯಾಕೆಂದರೆ ಕನ್ನಡಿಗರಿಗೆ ಅದು ಬೇಕಾಗಿರಲಿಲ್ಲ ಮತ್ತು ಆ ವಿಷಯವೇ ಗೊತ್ತಿರಲಿಲ್ಲ. ಸಂಸ್ಕೃತದವರಾದ ಕುತಂತ್ರದವರು ಕನ್ನಡದವರ ಮೇಲೆ ಹೇರಲ್ಪಟ್ಟ ಅನಿಸ್ಠವೆ ಈ ಅಸ್ಪೃಶ್ಯತೆ. ಇದು ಸಂಸ್ಕೃತದ ಕೊಡುಗೆ. ಸಂಸ್ಕೃತವನ್ನು ಉಳಿಸುವ ಬೆಳೆಸುವ ಪ್ರಮೇಯವು ಸಾವಿರಾರು ವರ್ಷಗಳ ಕಾಲದ ಹಿಂದೆಯೂ ಇಲ್ಲ, ಇಗಲೂ ಬೇಕಿಲ್ಲ, ಅದು ಅಪ್ರಸ್ತುತ.

12ನೇ ಶತಮಾನದಲ್ಲಿನ ಕನ್ನಡ ಕವಿ ನಯಸೇನ, ತನ್ನ ಧರ್ಮಾಮೃತ ಕೃತಿಯಲ್ಲಿ ಹೀಗೆ ಹೇಳುತ್ತಾನೆ:- “ಕನ್ನಡದಲ್ಲಿ ತಿಳಿದು ತನ್ನೊಳು ತನ್ನ ಮೋಕ್ಷವಗಳಿಸಿಕೊಂಡರೆ ಸಾಲದೇ, ಸಂಸ್ಕೃತದಲ್ಲಿನೇನು”? ಮತ್ತೆ ಇನ್ನು ಮುಂದುವರೆದು, “ಕನ್ನಡದ ತುಪ್ಪದಲ್ಲಿ ಸಂಸ್ಕೃತದ ಎಣ್ಣೆಯನ್ನು ಬೆರೆಸಬೇಡಿ” ಎಂದು ಕನ್ನಡ ನುಡಿಯಲ್ಲಿ ಸಂಸ್ಕೃತ ಪದಗಳ ಬಳಕೆಯನ್ನು ಮತ್ತು ಅತಿಯಾದ ಬಳಕೆಯನ್ನು ವಿರೋಧಿಸಿ ಈ ಮಾತನ್ನು ಹೇಳುತ್ತಾನೆ.

“ಕನ್ನಡವೆಂಬ ಕರಿಮಣಿ ಸರದಲ್ಲಿ ಸಂಸ್ಕೃತವು ಕೆಂಪು ಮಣಿಯ ತರ ಇರಬೇಕು” ಎಂಬುದು ಕನ್ನಡದ ಖ್ಯಾತ ಬರಹಗಾರರಾದ ಬಿ. ಎಂ. ಶ್ರೀಕಂಠಯ್ಯ ಅವರ ಪ್ರಸಿದ್ಧ ಮಾತು. ಈ ಮಾತಿನ ಒಳ ಮರ್ಮವನ್ನು ಅರಿಯುವುದಾದರೆ ಅದು ಸಂಸ್ಕೃತ ಪುತ್ರರಾದ ಬಿ ಎಂ ಶ್ರೀಕಂಠಯ್ಯನವರು ಕರಿಮಣಿ ಸರದಲ್ಲಿ ಕೆಂಪು ಮಣಿ ಸ್ಥಾನವನ್ನು ಸಂಸ್ಕೃತಕ್ಕೆ ನೀಡಿ ಸಂಸ್ಕೃತ ಏರಿಕೆ ತೋರಿಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಕನ್ನಡವನ್ನು ಕರಿಮಣಿಸರ ಮಾಡಿ ಆ ಸರದಲ್ಲಿ ಸಂಸ್ಕೃತ ಎಂಬ ಕೆಂಪು ಮಣಿ ಇಲ್ಲದಿದ್ದರೆ ಅದು ಕ್ಷೋಭಿಸದು ಸಂಸ್ಕೃತ ಪ್ರಯೋಗ ಕನ್ನಡದಲ್ಲಿ ಇರಲೆಬೇಕೆಂಬ ಕೆಟ್ಟ ಮನಸ್ಥಿತಿಯನ್ನು ಸಮರ್ಥಿಸುವ ಮಾತಿದು.

ಕನ್ನಡದಲ್ಲೇ ಸಾಕಷ್ಟು ಒಳನುಡಿ ಆಡುನುಡಿಗಳು ಇವೆ. ಅವುಗಳನ್ನೇ ಕನ್ನಡದ ಕರಿಮಣಿ ಸರದಲ್ಲಿ ಕೆಂಪು ಮಣಿ ಮಾಡಿಕೊಳ್ಳೋಣ ಬೇರೆ ಬೇರೆ ಸೀಮೆಯ ಕನ್ನಡಿಗರು ಇದನ್ನು ಅನುಸರಿಸಲಿ, ಸಂಸ್ಕೃತದಿಂದ ಎರವಲು ಪಡೆಯುವ ದರಿದ್ರ ಕನ್ನಡಕ್ಕೆನಿದೆ, ಕನ್ನಡ ನುಡಿಯಲ್ಲಿ ಕಮ್ಮಿಯಾಗಿರುವುದಾದರೂ ಏನು? ಸಂಸ್ಕೃತ ಪುತ್ರರು ತಲೆ ಮರೆಸಿಕೊಂಡು ಒಳಸಂಚಿನಿಂದ ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಜನ ತೂರಿಕೊಂಡಿದ್ದಾರೆ, ಕನ್ನಡಿಗರಿಗೆ ಸಿಗಬೇಕಾದ ಸೌಕರ್ಯ, ಸೌಲಭ್ಯವನ್ನೆಲ್ಲ ನುಂಗಿ ನೀರು ಕುಡಿದಿದ್ದಾರೆ. ಇಂಥವರು  ಕನ್ನಡಕ್ಕೆ ದೊರೆತಿರುವ ಜ್ಞಾನಪೀಠ ಪ್ರಶಸ್ತಿಗಳನ್ನು ಕಬಳಿಸಿದ್ದಾರೆ, ಮತ್ತೆ ಈ ಕುತಂತ್ರದವರು ಕನ್ನಡಕ್ಕಿಂತ ಸಂಸ್ಕೃತಕ್ಕೆ ಅತಿ ಹೆಚ್ಚು ನಿಷ್ಠೆ ತೋರಿಸಿದ್ದಾರೆ.

ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ ಸಮಯದಲ್ಲಿ ಸಂಸ್ಕೃತ ಕುತಂತ್ರಿಗಳೇ ಹೆಚ್ಚಿದ್ದು, ಸಂಸ್ಕೃತ ಹೇರಿಕೆಗೆ ಸಂವಿಧಾನದಲ್ಲಿ ಅವಕಾಶ ಬರುವ ಹಾಗೆ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಆಗಿನ ಸಮಯದಲ್ಲಿ ಅವರ ಒತ್ತಾಯಕ್ಕೆ ಮಣಿದು ಸಂಸ್ಕೃತ ಹೇರಿಕೆಗೆ ಅವಕಾಶ ಕೊಡಲೇಬೇಕಾದ ಕೆಟ್ಟ ಪರಿಸ್ಥಿತಿ ರೂಪುಗೊಂಡಿತ್ತು.

ಸಂಸ್ಕೃತ ಹೇರಿಕೆ ಕನ್ನಡಿಗರ ಮೇಲೆ ಸಾವಿರಾರು ವರ್ಷಗಳಿಂದ ಆಗುತ್ತಲೆ ಬಂದಿದೆ, ಅದಕ್ಕೆ ಪ್ರತಿರೋಧವಾಗಿ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ಮೃತಭಾಷೆ(ಸತ್ತೋಗಿರೋ ಭಾಷೆ) ಎಂಬ ಪ್ರಸ್ತಾಪವು ಬಂದಿದೆ, ಈ ಮಾತು ವಾಸ್ತವನು ಕೂಡ ಹೌದು.

ಸಂಸ್ಕೃತ ಸತ್ತೆ ಸಾವಿರಾರು ವರ್ಷಗಳಾಗಿರಬೇಕಾದರೆ ಇಂದಿಗೂ ಸಹ ಒಕ್ಕೂಟ ಸರ್ಕಾರ ಸಂಸ್ಕೃತಕ್ಕಾಗಿ ಖರ್ಚು ಮಾಡುತ್ತಿರುವ ಅಂದರೆ ನಿಜವಾದ ಅರ್ಥದಲ್ಲಿ 
ದುಂದುವೆಚ್ಚ ಮಾಡುತ್ತಿರುವ ಹಣ ಸಂಸ್ಕೃತ ಭಾಷೆಯನ್ನು ಬೆಳೆಸಲಿಕ್ಕಲ್ಲ ಬದಲಾಗಿ ಸತ್ತೋಗಿರೋ ಸಂಸ್ಕೃತ ಭಾಷೆಗೆ ಅದ್ದೂರಿಯಾಗಿ ವರ್ಷದ ತಿಥಿ ಮಾಡಲಿಕ್ಕೆ ಎಂಬುದೇ ಸತ್ಯ.

ಸಂಸ್ಕೃತವನ್ನು ಬೆಳೆಸಬೇಕೆಂದು ಹೂಳಿಡುವ ನಾಯಿಗಳು ಅರ್ಥಮಾಡಿಕೊಳ್ಳಬೇಕದದ್ದು, ಪ್ರಾಚೀನ ಕಾಲದಿಂದಲೂ  ಸಂಸ್ಕೃತ ದೇವಭಾಷೆ, ಅದು ಶ್ರೀಸಾಮಾನ್ಯರು ಕಲಿಯುವುದಕ್ಕಲ್ಲ ಕೇಳಿಸಿಯುಕೊಳ್ಳಲುಬಾರದು ಎಂಬ ಕಟ್ಟಾಜ್ಞೆ ಈ ಸಮಾಜದಲ್ಲಿ ರೂಢಿಯಲ್ಲಿತ್ತು. ದೇವ ಭಾಷೆ ದೇವರಿಗೆ ಇರಲಿಬಿಡಿ ಮಾನವರಿಗ್ಯಾಕೆ? ಅದರಲ್ಲೂ ಕನ್ನಡ ನಾಡಿನಲ್ಯಾಕೆ? ಇತ್ತೀಚಿಗೆ ತಿರುವನಂತಪುರಂನಲ್ಲಿರುವ ಕೇರಳ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಪಿಎಚ್ ಡಿ ಗೈಡ್ ವಿಜಯ ಕುಮಾರಿ ತಮ್ಮ ವಿದ್ಯಾರ್ಥಿಗೆ ನೀನು ದಲಿತ ನಿನಗೆ ಸಂಸ್ಕೃತ ಕಲಿಯುವ ಹಕ್ಕಿಲ್ಲ, ಸಂಸ್ಕೃತದಲ್ಲಿ ಪಿಹೆಚ್ ಡಿ ಪಡೆಯುವ ಅರ್ಹತೆ ಇಲ್ಲ ಎಂದು ವಿದ್ಯಾರ್ಥಿಯನ್ನು ಅಪಮಾನಿಸಿದ್ದರು.

ಆದರೂ ಸಹ ಮಾನ ಮರ್ಯಾದೆ ಇಲ್ಲದಿರುವ ಒಕ್ಕೂಟ ಸರ್ಕಾರ ಸಂಸ್ಕೃತದ ವರ್ಷದ ತಿಥಿ ಮಾಡಲು, ಸಂಸ್ಕೃತ ವಿಶ್ವವಿದ್ಯಾಲಯಗಳಿಗೆ, ರಾಷ್ಟ್ರೀಯ ಸಂಸ್ಕೃತ ದಿವಸಕ್ಕೆ
ನೂರಾರು ಕೋಟಿ ಅನುದಾನವನ್ನು ಸೇರಿದಂತೆ ಒಕ್ಕೂಟ ಸರ್ಕಾರವು 2014ರಿಂದ ಇಲ್ಲಿಯವರೆಗೆ 2532.59 ಕೋಟಿಯಷ್ಟು ಅನುದಾನ ನೀಡಿದೆ, ಇದೆಲ್ಲವೂ ಏನನ್ನು ಸಾಧಿಸಲಿಕ್ಕೆ?

ಮೊದಲಿಗೆ ಸಂಸ್ಕೃತ ಭಾಷೆಗೆ ಮುಕ್ತ ಮನಸ್ಸಿಲ್ಲ, ಪ್ರಾಚೀನ ಕಾಲದಿಂದಲೂ ಸಂಸ್ಕೃತ ಭಾಷೆ ಎಲ್ಲರಿಗೂ ಮುಕ್ತವಾಗಿ ದೊರಕಿಲ್ಲ, ಅದು ಕೇವಲ ಒಂದು ವರ್ಗಕ್ಕಷ್ಟೇ ಸೀಮಿತವಾದ ಖಾಸಗಿ ಭಾಷೆ. ಸಂಸ್ಕೃತ ಭಾಷೆ ಸತ್ತಿದೆ ಎಂಬುದಕ್ಕೆ ಒಂದು ಉದಾಹರಣೆ ನೋಡುವುದಾದರೆ, ಕನ್ನಡ ಬದುಕಿದೆ ಇನ್ನು ಉನ್ನತ ಮಟ್ಟದಲ್ಲಿ ಬೆಳೆಯಬೇಕಿದೆ ಹಾಗಾಗಿ ಕನ್ನಡ ನುಡಿಯಲ್ಲಿ ನೂರಾರು ಬಗೆಯ ಆಡುನುಡಿ (ಸ್ಲ್ಯಾಂಗ್) ಗಳಿವೆ, ಮಂಡ್ಯ ಕನ್ನಡ, ಮಳವಳ್ಳಿ ಕನ್ನಡ, ಮೈಸೂರು ಕನ್ನಡ, ಚಾಮರಾಜನಗರ ಕನ್ನಡ, ಕೊಳ್ಳೇಗಾಲ ಕನ್ನಡ, ಉತ್ತರ ಕರ್ನಾಟಕ ಕನ್ನಡ, ಇದೇ ರೀತಿ ಸಂಸ್ಕೃತಕ್ಕೆ ಎಷ್ಟು ಬಗೆಯ ಆಡುನುಡಿ (ಸ್ಲ್ಯಾಂಗ್) ಗಳಿವೆ ಹೇಳಿ. ಕನ್ನಡದಲ್ಲಿ ವರ್ಶಕ್ಕೆ ಇನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ ಅದೇ ತರಹ ಸಂಸ್ಕೃತದಲ್ಲಿ ಎಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆ ಮತ್ತು ಸಂಸ್ಕೃತದಲ್ಲಿ ಎಷ್ಟು ಜನರಿಗೆ ಮನರಂಜನೆ ಸಿಗುತ್ತದೆ ಹೇಳಿ?

ಸಂಸ್ಕೃತಕ್ಕೆ ಸ್ವಂತ ಲಿಪಿಯೆ ಇಲ್ಲದಿದ್ದರೂ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ‌ ಎಂಬುದು ಎಂತಹ ಧಾರುಣ ಸ್ಥಿತಿ. ದಿನದಲ್ಲಿ ಎಷ್ಟು ಜನ ಸಂಸ್ಕೃತದಲ್ಲಿ ಮಾತುಕತೆ ನಡೆಸುತ್ತಾರೆ? ಸಂಸ್ಕೃತ ಹೇರಿಕೆ, ತೂರಿಕೆ ಪ್ರತಿದಿನ ನಡೆಯುವ ಕೆಲಸ, ನಾನು ಕೇಳುತ್ತಿರುವುದು ಪೂರ್ಣವಾಗಿ ಸಂಸ್ಕೃತದಲ್ಲಿ ಮಾತುಕತೆ ನಡೆಸುವವರು ಎಷ್ಟು ಜನ ಇದ್ದಾರೆ ಅಂತ? ಸಂಸ್ಕೃತ ಏರಿಕೆ ಮಾಡುವವರು ಸಹ ಸಂಸ್ಕೃತದಲ್ಲಿ ಸಂವಹನದ ಮಾಡುವುದಿಲ್ಲ. 24,000 ಜನ ಅಧಿಕೃತವಾಗಿ ಸಂಸ್ಕೃತದವರು ಎಂದು ಗುರುತಿಸಿಕೊಂಡಿದ್ದಾರೆ, ಅವರಿಗೆ ಒಕ್ಕೂಟ ಸರ್ಕಾರದ ವತಿಯಿಂದ 2532.59 ಕೋಟಿ ಅನುದಾನ ದೊರತಿದೆ, ಅದೇ ಕನ್ನಡ ನಾಡಿನ ನುಡಿಗಳಾದ ಕನ್ನಡ, ತುಳು, ಬ್ಯಾರಿ, ಕೊಡವ ನುಡಿಗಳಿಗೆ ಇದೇ ಒಕ್ಕೂಟ ಸರ್ಕಾರದಿಂದ ಎಷ್ಟು ಅನುದಾನ ದೊರತಿದೆ ? ಅದನ್ನು ಅನುಪಾತದ ದೃಷ್ಟಿಯಲ್ಲಿ ನೋಡುವುದಾದರೆ 206.24 : 1‌.

ಆರು ಕೋಟಿ ಜನರ ಜೀವನಾಡಿಯಾದ ಕನ್ನಡಕ್ಕೆ ಒಂದು ರೂಪಾಯಿಯಷ್ಟು, ಕೇವಲ 24 ಸಾವಿರ ಜನ ವರ್ಷಕ್ಕೆ ನಾಲ್ಕೈದು ಬಾರಿ ಸಂಸ್ಕೃತ ಮಾತನಾಡುವುದಕ್ಕೆ ಕೊಟ್ಟದ್ದು 206.64 ರೂಪಾಯಿಗಳಷ್ಟು. ಇನ್ನು ಮಿಕ್ಕ ಭಾಷೆಗಳಾದ ಬ್ಯಾರಿ ಕೊಡವ ತುಳು ಇವುಗಳಿಗೆ ಯಾವುದೇ ಅನುದಾನ ಸಿಕ್ಕಿಲ್ಲ.

ಮುಕ್ತ ಮನಸ್ಸಿಲ್ಲದ, ಸತ್ತೋಗಿರೋ ಸಂಸ್ಕೃತಕ್ಕೆ ಇಷ್ಟೊಂದು ವಿಜೃಂಭಣೆಯಿಂದ ಸಮಾಧಿ ಮಾಡಿ, ವರ್ಷದ ತಿಥಿ ಮಾಡುವ ಅವಶ್ಯಕತೆ ಇಲ್ಲ. ಬದಲಾಗಿ ಮಾಡಬೇಕಾದ ಕೆಲಸ  ಕೋಟ್ಯಾನು ಕೋಟಿ ಜನರ ತಾಯಿನುಡಿಯಾಗಿರುವ ಕನ್ನಡದಿಂದ ಪ್ರೀತಿ, ಸಹನೆ, ಮಮಕಾರ, ವಾತ್ಸಲ್ಯ ಹುಟ್ಟುತ್ತದೆ ಆದರೆ ಅನ್ನ ಹುಟ್ಟುತ್ತಿಲ್ಲ. ಅನ್ನವೆಲ್ಲ ಹಿಂದಿ ಮತ್ತು ಸಂಸ್ಕೃತದವರ ಪಾಲಾಗಿ ಕನ್ನಡ, ಕನ್ನಡಿಗರು ಭಿಕಾರಿಯಾಗುವ ಹಂತ ತಲುಪಿದೆ.

ಶಿಕ್ಷಣದಲ್ಲಿ ಮೊದಲ ನುಡಿ ಕನ್ನಡ, ಈ ಪದ್ಧತಿ ಇರುವುದು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ. ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ, ಕನ್ನಡಕ್ಕೆ ಎರಡನೆಯ,ಮೂರನೇ ಸ್ಥಾನ ಅಥವಾ ಕನ್ನಡಕ್ಕೆ ಸ್ಥಾನವೇ ಇಲ್ಲ. ಇದು ಕನ್ನಡ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಪರಿ.

ಒಕ್ಕೂಟ ಸರ್ಕಾರವು ನಡೆಸುವ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶವಿಲ್ಲ, ಕನ್ನಡದಲ್ಲಿ ನಡೆಸುವ ಕೆಪಿಎಸ್ಸಿ ಪರೀಕ್ಷೆಯಲ್ಲಿಯು ಪ್ರಶ್ನೆ ಪತ್ರಿಕೆ ತಪ್ಪಾಗಿ ಬಂದ ನಿದರ್ಶನಗಳಿವೆ. ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ ಕನ್ನಡಿಗರಿಗೆ ಎಲ್ಲಿ? ಎಷ್ಟರ ಮಟ್ಟಿಗೆ ನ್ಯಾಯ ಸಿಕ್ಕಿದೆಯೆಂದು? ಕನ್ನಡಿಗರಿಗೆ ಆಗುತ್ತಿರುವುದೆಲ್ಲ ಬರಿ ಅನ್ಯಾಯ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page