Friday, November 28, 2025

ಸತ್ಯ | ನ್ಯಾಯ |ಧರ್ಮ

ಸೌದಿ ಅರೇಬಿಯಾದಲ್ಲಿ ಉದ್ಯೋಗದ ಸ್ಥಳದಲ್ಲಿ ಏಕರೂಪ ವಸ್ತ್ರ ಸಂಹಿತೆಗೆ ಚಿಂತನೆ

ರಿಯಾದ್, ನವೆಂಬರ್ 28: ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು (HRSD) ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರರ ಧರಿಸಬೇಕಾದ ಉಡುಪು ಮತ್ತು ಅನುಸರಿಸಬೇಕಾದ ನಡವಳಿಕೆ ಕುರಿತಂತೆ ಹೊಸ ನಿಯಮಾವಳಿ ಪ್ರಕಟಣೆ ಮಾಡಲು ಸಿದ್ಧವಾಗಿದೆ. ನ.25ರಿಂದ ಡಿ.25ರೊಳಗೆ ಈ ಕರುಡಿನ ಮೇಲೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯಾದ ಬಳಿಕ, 30 ದಿನಗಳ ಒಳಗೆ ಅಧಿಕೃತವಾಗಿ ಜಾರಿಗೆ ತರಲಿರುವುದು ಈ ನಿಯಮದ ತೀರ್ಮಾನವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ನಿಯಮಗಳ ಪ್ರಕಾರ, ಸೌದಿ ಪುರುಷ ಉದ್ಯೋಗಿಗಳು ಕಡ್ಡಾಯವಾಗಿ ನ್ಯಾಷನಲ್ ಥೋಬ್ ಹಾಗೂ ಘುತ್ರಾ ಅಥವಾ ಶೆಮಾಗ್ ಧರಿಸಬೇಕಾಗಿದೆ. ವಿದೇಶಿ ನೌಕರರು ತಮ್ಮ ಉದ್ಯೋಗ ಸ್ಥಳ, ಅಧಿಕೃತ ಕಾರ್ಯಗಳು ಹಾಗೂ ಮಾಧ್ಯಮಗಳಲ್ಲಿ ಬಿಸಿನೆಸ್ ಸೂಟ್ ಧರಿಸುವುದು ಕಡ್ಡಾಯವಾಗಿದೆ. ಮಹಿಳಾ ನೌಕರರು, ಸೌದಿ ಹಾಗೂ ವಿದೇಶೀ ಮಹಿಳೆಯರು, ದೇಹವನ್ನು ಸಂಪೂರ್ಣ ಮುಚ್ಚುವ, ಬಿಗಿಯಾಗದ ಮತ್ತು ಪಾರದರ್ಶಕವಲ್ಲದ ಉಡುಪುಗಳನ್ನು ಧರಿಸಬೇಕು.

ನಿಯಮಾವಳಿ ಉದ್ಯೋಗಸ್ಥಳದಲ್ಲಿ ವೃತ್ತಿಪರತೆ, ಗೌಪ್ಯತೆ, ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸುವಂತಹ ನಡವಳಿಕೆಯನ್ನು ಕೂಡ ಬಲವಂತಪಡಿಸುತ್ತದೆ. ರಾಜಕೀಯ ಅಥವಾ ಪಂಥೀಯ ಉದ್ವಿಗ್ನತೆಗಳನ್ನುಂಟುಮಾಡುವ ಯಾವುದೇ ಕಾರ್ಯ ಅಥವಾ ವಸ್ತ್ರಗಳ ಧರಣೆಯನ್ನು ತಡೆಹಿಡಿಯಲು ಈ ನಿಯಮಗಳನ್ನು ತರಲು ಚಿಂತನೆ ನಡೆಸಿದೆ.

ಅಕಸ್ಮಾತ್ ಈ ನಿಯಮ ಜಾರಿಯ ನಂತರ ಉಲ್ಲಂಘನೆ ಮಾಡಿದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ HRSD ಇಲಾಖೆ ತಿಳಿಸಿದ್ದಾರೆ. ಸಂಸ್ಥೆಗಳು ಲಿಖಿತ ಉಡುಪು ನೀತಿಗಳನ್ನು ರೂಪಿಸಬೇಕಾಗಿದ್ದು, ನಿಯಮ ಪಾಲನೆ ಇಲ್ಲದ ಸಂಸ್ಥೆಗಳು ಕಾನೂನಿನ ಅಡಿಯಲ್ಲಿ ದಂಡ ಮೊತ್ತ ಮುಗಿಸಬೇಕಾಗಬಹುದು. ನೌಕರರು ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಒಳಗಾಗುವ ಸಾಧ್ಯತೆ ಇದೆ.

ಈ ಹೊಸ ನಿಯಮಾವಳಿಗಳು ಸೌದಿ ಅರೇಬಿಯಾದ ರಾಷ್ಟ್ರೀಯ ಗುರುತನ್ನು ಬಲಪಡಿಸುವುದನ್ನು ಮತ್ತು ಉದ್ಯೋಗಿಗಳಿಗೆ ಒಳ್ಳೆಯ ವ್ಯವಸ್ಥೆ ಹಾಗೂ ಭದ್ರತೆ ಒದಗಿಸುವ ಮುನ್ಸೂಚನೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page