Sunday, July 6, 2025

ಸತ್ಯ | ನ್ಯಾಯ |ಧರ್ಮ

ಸಾವರ್ಕರ್‌ ಬ್ಯಾನರ್‌ ತೆರವು: ಸೆಕ್ಷನ್‌ 144 ಜಾರಿ

ಶಿವಮೊಗ್ಗ: ನಗರದ ಅಮೀರ್‌ ಅಹ್ಮದ್‌ ವೃತ್ತದಲ್ಲಿ ವಿ.ಡಿ. ಸಾವರ್ಕರ್‌ ಬ್ಯಾನರ್‌ ತೆರವುಗೊಳಿಸಲಾಗಿದ್ದು, ಘಟನೆ ವಿರೋಧಿಸಿ ಹಿಂದೂಪರ ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಗರ ಉದ್ವಿಗ್ನಗೊಂಡಿರುವ ಕಾರಣ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು  ಸಾವರ್ಕರ್ ಭಾವಚಿತ್ರ ಹಾಕಿದ್ದರು. ಆದರೆ ಸಾವರ್ಕರ್ ಅವರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಕೆಲವರು ಬ್ಯಾನರ್‌ ತೆರವುಗೊಳಿಸಿದ್ದಾರೆ, ಇದರಿಂದ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು , ವೃತ್ತವನ್ನ ಸುತ್ತವರಿದಿದ್ದ ಎರಡು ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು.

ಸ್ಥಳಕ್ಕೆ ನಗರದ ಎಸ್ ಪಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸೂಚಿಸಿದ್ದು. ವಾತಾವರಣ ಗಂಭೀರವಾಗಿರುವ ಹಿನ್ನೆಲೆ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page