Sunday, June 23, 2024

ಸತ್ಯ | ನ್ಯಾಯ |ಧರ್ಮ

ಭಾರತ ಧರ್ಮದ ಆಧಾರದ ಮೇಲೆ ವಿಭಜನೆ ಆಗಬೇಕಿದೆ ಎಂದು ಹೇಳಿದ್ದು ಸಾವರ್ಕರ್: ಪ್ರಿಯಾಂಕ್‌ ಖರ್ಗೆ

ಮೈಸೂರು: ಭಾರತ ದೇಶ ಧರ್ಮದ ಆಧಾರದ ಮೇಲೆ ವಿಭಜನೆ ಆಗಬೇಕಿದೆ ಎಂದು ಹೇಳಿದ್ದು ಸಾವರ್ಕರ್ ಹೊರತು ಜವಹಾರ ಲಾಲ್‌ ನೆಹರು ಅವರಲ್ಲ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

ದೇಶ ವಿಭಜನೆ ಕುರಿತು ಬಿಜೆಪಿಯ ಜಾಹೀರಾತು ನೀಡಿರುವ ಬಗ್ಗೆ ಮಾಧ್ಯಮದವರು  ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮೊದಲಿನಿಂದಲೂ ಬಿಜೆಪಿಗೆ ಸಾವಲು ಹಾಕುತ್ತಿದ್ದೇನೆ. ಈ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಲು ಮೊದಲು ಧ್ವನಿ ಎತ್ತಿದ್ದು ಯಾರು ಎಂದು ಚರ್ಚೆಗೆ ಬರಲಿ ಉತ್ತರ ನಾನು ನೀಡುತ್ತೆನೆ ಎಂದು ಸವಾಲ್‌ ಹಾಕಿದರು.

1937ರಲ್ಲಿ ಅಹಮದಾಬಾದ್ ನಲ್ಲಿ ನಡೆದ ಹಿಂದೂಮಹಾಸಭಾ ಅಧಿವೇಶನದಲ್ಲಿ ಈ ದೇಶ ಧರ್ಮದ ಆಧಾರದ ಮೇಲೆ ವಿಭಜನೆ ಆಗಬೇಕಿದೆ ಎಂದು ಹೇಳಿದ್ದು, ಸಾವರ್ಕರ್‌ ಹೊರತು ನೆಹರೂ ಅವರಲ್ಲ. ಇದಕ್ಕೆ ಅಂಬೇಡ್ಕರ್ ಅವರು ಸಾವರ್ಕರ್‌ ಅವರ ಮಾತು ಆಘಾತ ತಂದಿದೆ. ಅವರು ಜಿನ್ನಾ ಅವರ ನಿಲುವಿನ ವಿರುದ್ಧವಾಗಿ ಇರಬೇಕಿತ್ತು, ಆದರೆ ಒಳಒಪ್ಪಂದವಾಗಿದೆಯೇ ಎಂದು ಹೇಳಿಕೆ ನೀಡುತ್ತಾರೆ. ಈ ಬಗ್ಗೆ ಬಿಜೆಪಿಯವರಿಗೆ ಗೊತ್ತಿಲ್ಲವಾದರೆ ಅವರಿಗೆ ಸೂಕ್ತ ದಾಖಲೆ, ಪುಸ್ತಕ ನೀಡುತ್ತೇನೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು