Thursday, July 3, 2025

ಸತ್ಯ | ನ್ಯಾಯ |ಧರ್ಮ

ಕೊನೆಗೂ ಚುನಾವಣಾ ಬಾಂಡ್ ನ ಸಂಪೂರ್ಣ ವಿವರ ಸಲ್ಲಿಸಿದ ಎಸ್.ಬಿ.ಐ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಖಡಕ್ ಎಚ್ಚರಿಕೆ ನಂತರ ಚುನಾವಣಾ ಬಾಂಡ್ ಸಂಖ್ಯೆಗಳ ವಿವರಗಳು ಸೇರಿದಂತೆ ಚುನಾವಣಾ ಬಾಂಡ್ ಗಳ ಸಂಪೂರ್ಣ ಮಾಹಿತಿಗಳನ್ನು ಎಸ್ ಬಿ ಐ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

ಹಲವು ದಿನಗಳ ಹಗ್ಗಜಗ್ಗಾಟದ ನಂತರ ಎಸ್ ಬಿ ಐ ಈಗ ಸಂಪೂರ್ಣ ವಿವರ ಸಲ್ಲಿಸಿದೆ. ಈ ಹಿಂದೆ ಅಪೂರ್ಣ ವಿವರ ಸಲ್ಲಿಸಿ ಸುಪ್ರೀಂಕೋರ್ಟ್ ನಿಂದ ಚಾಟಿ ಬೀಸಿದ ನಂತರ ಈಗ ಈ ಬೆಳವಣಿಗೆ ನಡೆದಿದೆ.

ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಆಯ್ದ ಮಾಹಿತಿಯ ನೀಡುವುದನ್ನು ನಿಲ್ಲಿಸಿ ಸಂಪೂರ್ಣ ಮಾಹಿತಿಯನ್ನು ಮಾರ್ಚ್ 21ರೊಳಗೆ ಬಹಿರಂಗಪಡಿಸುವಂತೆ ಎಸ್.ಬಿ.ಐ.ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ತಾಕೀತು ಮಾಡಿತ್ತು. ಚುನಾವಣಾ ಬಾಂಡ್ ಖರೀದಿದಾರರು ಮತ್ತು ಅದನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಸಂಬಂಧ ಬಹಿರಂಗಪಡಿಸುವ ವಿಶಿಷ್ಟ ಬಾಂಡ್ ನಂಬರ್ ಗಳ ಸಮಗ್ರ ಮಾಹಿತಿ ಕೂಡ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠದಿಂದ ನಿರ್ದೇಶನ ನೀಡಲಾಗಿತ್ತು.

ಮಾರ್ಚ್ 18 ರಂದು ಸುಪ್ರೀಂ ಕೋರ್ಟ್ ಎಸ್ಬಿಐಗೆ ತನ್ನ ಬಳಿ ಇರುವ ಚುನಾವಣಾ ಬಾಂಡ್ಗಳ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಕೇಳಿತ್ತು. ಇದರೊಂದಿಗೆ, ಚುನಾವಣಾ ಬಾಂಡ್ ಗಳ ಬಗ್ಗೆ ಈಗ ಐದು ವಿಚಾರಗಳು ತಿಳಿಯುತ್ತವೆ –

  • ಬಾಂಡ್ ಖರೀದಿಸುವವರ ಹೆಸರು,
  • ಮುಖಬೆಲೆ ಮತ್ತು ಬಾಂಡ್ ನ ನಿರ್ದಿಷ್ಟ ಸಂಖ್ಯೆ,
  • ಬಾಂಡ್ ಅನ್ನು ನಗದೀಕರಿಸಿದ ಪಕ್ಷದ ಹೆಸರು,
  • ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು,
  • ಮುಖಬೆಲೆ ಮತ್ತು ನಗದೀಕರಿಸಿದ ಬಾಂಡ್ ಗಳ ಸಂಖ್ಯೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page