Monday, July 28, 2025

ಸತ್ಯ | ನ್ಯಾಯ |ಧರ್ಮ

ಎಸ್ ಡಿ ಪಿ ಐ, ಪಿಎಫ್ ಐ ಸಂಘಟನೆಗಳನ್ನು ಪೋಷಿಸಿದ್ದು ಬಿಜೆಪಿ: ಹಿಂದೂ ಮಹಾಸಭಾ ಗಂಭೀರ ಆರೋಪ

ಕಾಂಗ್ರೆಸ್ ಪಕ್ಷವನ್ನು ಮಣಿಸುವ ಸಲುವಾಗಿ ಮುಸ್ಲಿಮರ ಮತ ಕೀಳಲು ಎಸ್ ಡಿಪಿಐ ಪಕ್ಷವನ್ನು ಮತ್ತು ಅದರ ಮಾತೃ ಸಂಘಟನೆ ಪಿಎಫ್ ಐ ಬೆಳೆಸಿದ್ದು, ಪೋಷಿಸಿದ್ದು ಬಿಜೆಪಿ ಎಂದು ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.

ವಾಟ್ಸಾಸ್ ಗುಂಪೊಂದರಲ್ಲಿ ಧರ್ಮೇಂದ್ರ ಹಂಚಿಕೊಂಡಿರುವ ಆಡಿಯೋ ಈಗ ವೈರಲ್ ಆಗಿದ್ದು, ಎಸ್ ಡಿಪಿಐ, ಪಿಎಫ್ ಐ ಪೋಷಿಸುವ ಬದಲು ಭಾರತೀಯ ಜನತಾ ಪಕ್ಷವು ಹಿಂದೂ ಕಾರ್ಯಕರ್ತರ ಕೈ ಬಲಪಡಿಸುವ ಕೆಲಸ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಹಿಂದೂ ಕಾರ್ಯಕರ್ತರ ಕೊಲೆಯಲ್ಲಿ ಬಿಜೆಪಿ ನಾಯಕರ ಕೈವಾಡ ಇರುವ ಬಗ್ಗೆ ತಮಗೆ ಅನುಮಾನ ಇರುವುದಾಗಿಯೂ ಧರ್ಮೇಂದ್ರ ಹೇಳಿದ್ದಾರೆ.

ಎಸ್ ಡಿಪಿಐ ಹೇಗೆ ಹಿಂದೂ ವಿರೋಧಿ ಪಕ್ಷವೋ ಹಾಗೆಯೇ ಬಿಜೆಪಿ ಕೂಡ ಹಿಂದೂ ವಿರೋಧಿ ಪಕ್ಷವಾಗಿದೆ ಎಂದು ಧರ್ಮೇಂದ್ರ ಹೇಳಿದ್ದು, ಹಿಂದೂ ಕಾರ್ಯಕರ್ತರು ಬಿಜೆಪಿಗೆ ಹೊರತಾಗಿ ಒಂದು ರಾಜಕೀಯ ಶಕ್ತಿಯಾಗಿ ಗುರುತಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page