Friday, April 11, 2025

ಸತ್ಯ | ನ್ಯಾಯ |ಧರ್ಮ

ನಟನ ಮೇಲೆ ಲೈಂಗಿಕ ದೌರ್ಜನ್ಯ: ನಿರ್ದೇಶಕ ರಂಜಿತ್ ವಿರುದ್ಧ ಎರಡನೇ ಎಫ್‌ಐಆರ್

ನಟನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಕೇರಳ ಪೊಲೀಸರು ಚಲನಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಎರಡನೇ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಶನಿವಾರ ವರದಿ ಮಾಡಿದೆ.

ಕೋಳಿಕ್ಕೋಡ್‌ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣವು ಇತ್ತೀಚಿನ ಹೇಮಾ ಸಮಿತಿ ವರದಿಯ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ಮಾಪಕರ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣವಾಗಿದೆ.

ತನಿಖಾ ತಂಡ ನಿನ್ನೆ ದೂರುದಾರರ ಹೇಳಿಕೆ ದಾಖಲಿಸಿಕೊಂಡಿದೆ.

ಶುಕ್ರವಾರ, ಯುವ ನಟನೊಬ್ಬ ಕೇರಳದ ಚಲನಚಿತ್ರ ನಿರ್ಮಾಪಕ ರಂಜಿತ್ ವಿರುದ್ಧ ದೂರು ನೀಡಿದ್ದರು, ನಿರ್ದೇಶಕರು 2012ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಬಲವಂತವಾಗಿ ವಿವಸ್ತ್ರಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.

ರಂಜಿತ್ ಸಂತ್ರಸ್ತನನ್ನು ಬೆಂಗಳೂರಿನ ಹೊಟೇಲ್‌ಗೆ ಆಡಿಷನ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ಆಡಿಷನ್‌ನ ಭಾಗ ಎಂದು ತಾನು ಭಾವಿಸಿದ್ದಾಗಿ ದೂರುದಾರರು ಹೇಳಿದ್ದಾರೆ.

ರಂಜಿತ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮರುದಿನ ಬೆಳಿಗ್ಗೆ ಹಣವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ನಟ ಡಿಜಿಪಿಗೆ ದೂರು ನೀಡಿದ್ದು, ಎಸ್‌ಐಟಿ ಆ ದೂರನ್ನು ಗಣನೆಗೆ ತೆಗೆದುಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page