Sunday, June 16, 2024

ಸತ್ಯ | ನ್ಯಾಯ |ಧರ್ಮ

ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್ ನಿಧನ

ಬೆಂಗಳೂರು: ಕನ್ನಡದ ಹಿರಿಯ ಪತ್ರಕರ್ತ ಹಾಗೂ ಲೇಖಕ, ಅನುವಾದಕರಾದ ಜಿ.ಎನ್. ರಂಗನಾಥ ರಾವ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು. ಇಂದು ಅವರು ಬೆಂಗಳೂರಿನ ಬಸವನಗುಡಿಯ ಬಿಎಂಎಸ್​ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ.

ಕನಪುರದ ಬಳಿಯ ಹಾರೋಹಳ್ಳಿಯಲ್ಲಿ 1942ರಲ್ಲಿ ಹುಟ್ಟಿದ ಅವರು, ಹೊಸಕೋಟೆ ಹಾಗೂ ಬೆಂಗಳೂರಿನಲ್ಲಿ ತಮ್ಮ ಓದನ್ನು ಮುಗಿಸಿದರು. 1962ನೇ ಇಸವಿಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯೆ ಬೆಂಗಳೂರು ಆವೃತ್ತಿಯ ಉಪಸಂಪಾದಕರಾಗಿ ತಮ್ಮ ಪತ್ರಿಕೋದ್ಯಮ ಜೀವನ ಆರಂಭಿಸಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಷ್ಟಿತ ಪತ್ರಿಕೆ ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ದುಡಿದಿದ್ದರು. ಮುಂದಿನ ದಿನಗಳಲ್ಲಿ ಕಾರ್ಯನಿರ್ವಾಹಕ ಸಂಪಾದಕ ಹುದ್ದೆ ನಿರ್ವಹಿಸುವುದರೊಂದಿಗೆ ಅವರು ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದರು.

ಹಿರಿಯರ ಸಾವಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

https://x.com/CMofKarnataka/status/1711277424384856457?s=20

ಜಿ.ಎನ್. ರಂಗನಾಥ ರಾವ್ ಅವರಿಗೆ 2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ, 2010ರ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಟಿಎಸ್ಸಾರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿದ್ದವು.

ತಮ್ಮ ಕನ್ನಡದ ಪತ್ರಿಕೋದ್ಯಮದ ಅನುಭವಗಳನ್ನು ‘ಆ ಪತ್ರಿಕೋದ್ಯಮ’ ಕೃತಿಯಲ್ಲಿ ಬರೆದಿರುವ ಅವರು. ಹಲವು ನಾಟಕ, ಪ್ರಬಂಧ ಹಾಗೂ ವಿಮರ್ಶೆಗಳ ಪುಸ್ತಕಗಳನ್ನು ಸಹ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ ಹೆಜ್ಜೆ, ಅನ್ಯೋನ್ಯ, ಗುಣ ದೋಷ ಅವರು ಬರೆದಿರುವ ಕೃತಿಗಳಲ್ಲಿ ಕೆಲವು. ಶೇಕ್ಸ್‌ಪಿಯರ್‌ನ ರೋಮಿಯೋ ಜೂಲಿಯೆಟ್, ಆಂಟನಿ ಕ್ಲಿಯೋಪಾತ್ರ, ಬರ್ಟೋಲ್ಟ್ ಬ್ರೆಕ್ಟ್‌ನ ಕಕೇಷಿಯನ್ ಚಾಕ್ ಸರ್ಕಲ್, ರಾಮಚಂದ್ರ ಗುಹಾ ಅವರ ಗಾಂಧಿ ಬಿಫೋರ್‌ ಇಂಡಿಯಾ ಮುಂತಾದ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು