Sunday, January 11, 2026

ಸತ್ಯ | ನ್ಯಾಯ |ಧರ್ಮ

ಹಿರಿಯ ಪತ್ರಕರ್ತ ಶಶಿಧರ ಹೆಮ್ಮಣ್ಣ ನಿಧನ

ಉಡುಪಿ: ಪತ್ರಕರ್ತ ಶಶಿಧರ ಹೆಮ್ಮಣ್ಣ ಅವರು ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ.

ನಿನ್ನೆ ಬೆಳಗ್ಗೆ (ಗುರುವಾರ) ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಉಡುಪಿಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅಲ್ಲಿ ಹೃದಾಯಾಘಾತವಾಗಿರುವುದು ದೃಢಪಟ್ಟ ನಂತರ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಶಶಿಧರ ಅವರನ್ನು ಕರೆದುಕೊಂಡು ಹೋಗಲಾಯಿತು. ಮಣಿಪಾಲದಲ್ಲಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಂಬುಲೆನ್ಸ್‌ ಮೂಲಕ ಮಣಿಪಾಲಕ್ಕೆ ಹೋಗುವಾಗಲೇ ಬಹಳಷ್ಟು ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಪತ್ರಕರ್ತನಾಗಿ ಕುಂದಪ್ರಭ ಪತ್ರಿಕೆಗೆ ದುಡಿದಿದ್ದ ಅವರು ನಂತರ ದಿನಗಳಲ್ಲಿ ಈಟಿವಿ ಕನ್ನಡ, ಡಿಡಿ ಕನ್ನಡ ವಾಹಿನಿಗೆ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ್ದರು. ನಾಡಿನ ಪ್ರಮುಖ ಪತ್ರಿಕೆಗಳಿಗೆ ಹಲವು ಲೇಖನಗಳನ್ನು ಕೂಡಾ ಬರೆದಿದ್ದಾರೆ.

ಪರಿಸರ ಪ್ರೇಮಿಯಾಗಿದ್ದ ಶಶಿಧರ ಹೆಮ್ಮಣ್ಣ ಅವರು ಕರಾವಳಿಗೆ ಕಾಂಡ್ಲಾ ಯೋಜನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀರ ಸಮೀಕ್ಷೆಗಳಲ್ಲೂ ಅವರದು ಎತ್ತಿದ ಕೈ.

ಮೃತರು ಅಪ್ಪ, ಅಮ್ಮ, ಮಗ, ಮಗಳು ಸೇರಿದಂತೆ ಹಲವು ಬಂಧು-ಮಿತ್ರರನ್ನು ಅಗಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page