Saturday, June 15, 2024

ಸತ್ಯ | ನ್ಯಾಯ |ಧರ್ಮ

ಸೆ.22 ರಂದು ಪಂಜಾಬ್ ನಲ್ಲಿ ಮುಖ್ಯಮಂತ್ರಿ ಭಗವಂತ ಮಾನ್ ವಿಶ್ವಾಸಮತ ಯಾಚನೆ

ದೆಹಲಿಯ ಕೇಜ್ರಿವಾಲ್ ಸರ್ಕಾರದ ನಂತರ ಪಂಜಾಬ್ ನಲ್ಲಿ ಭಗವಂತ ಮಾನ್ ನೇತೃತ್ವದ ಸರ್ಕಾರ ವಿಶ್ವಾಸಮತ ಯಾಚನೆಗೆ ಮುಂದಾಗಿದೆ‌. ಬರುವ ಗುರುವಾರ ಸೆ.22 ಕ್ಕೆ ಪಂಜಾಬಿನ ಎಎಪಿ ಸರ್ಕಾರ ವಿಧಾನ ಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದೆ. ಈ ಬಗ್ಗೆ ಮುಖ್ಯಮಂತ್ರಿ ಭಗವಂತ ಮಾನ್ ಟ್ವಿಟ್ ಮೂಲಕ ತಿಳಿಸಿದ್ದಾರೆ.

ದೆಹಲಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ, ಆಡಳಿತಾರೂಢ ಎಎಪಿ ಶಾಸಕರಿಗೆ ನಾನಾ ರೀತಿಯಲ್ಲಿ ಒತ್ತಡ ತಂದರೂ ಯಾರೊಬ್ಬ ಎಎಪಿ ಶಾಸಕರೂ ಬೇರೆ ಪಕ್ಷದ ಕಡೆಗೆ ಅತ್ತಿತ್ತ ಕದಲಿರಲಿಲ್ಲ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಂತೂ ದೆಹಲಿಯಲ್ಲಿ ವಿಶ್ವಾಸಮತ ಯಾಚನೆ ಮಾಡಿ ಬಹುಮತ ಸಾಭೀತುಪಡಿಸಿಯೇ ಬಿಟ್ಟರು.

ಕೆಲವು ದಿನಗಳ ಹಿಂದೆ ಪಂಜಾಬಿನಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಕೂಡಾ ಬಿಜೆಪಿ ಶಾಸಕರಿಗೆ ತಲಾ 25 ಕೋಟಿ ಆಫರ್ ಮಾಡಿರುವ ಬಗ್ಗೆಯೂ ಮಾಹಿತಿ ಹೊರಹಾಕಿದ್ದರು. ಪಂಜಾಬ್ ನ ಹಣಕಾಸು ಸಚಿವರು ಈ ಬಗ್ಗೆ ಪತ್ರಿಕಾಗೋಷ್ಠಿ ಕೂಡಾ ನಡೆಸಿ ಬಿಜೆಪಿ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಪೊಲೀಸರಿಗೆ ದೂರನ್ನೂ ಸಹ ದಾಖಲಿಸಿದ್ದರು.

ಹಾಗಾಗಿ ಬಿಜೆಪಿ ಎಷ್ಟೇ ಹರಸಾಹಸ ಪಟ್ಟರೂ ಒಬ್ಬೇ ಒಬ್ಬ ಶಾಸಕರನ್ನು ಕೊಳ್ಳಲಾಗದ ಬಗ್ಗೆ, ಎಎಪಿಯ ಯಾವ ಶಾಸಕರನ್ನೂ ಮುಟ್ಟಲಾಗದ ಬಗ್ಗೆ ಪಂಜಾಬ್ ಸರ್ಕಾರ ಈಗ ವಿಶ್ವಾಸಮತ ಸಾಭೀತುಪಡಿಸಿ ನಮ್ಮ ಸರ್ಕಾರ ಸುಭದ್ರವಾಗಿದೆ ಎಂಬ ಸಂದೇಶ ಕೊಡಲಿದೆ.

ಪಂಜಾಬ್‌ನಲ್ಲಿ ಒಟ್ಟು 117 ವಿಧಾನಸಭಾ ಸ್ಥಾನಗಳಿದ್ದು ಇದರಲ್ಲಿ ಆಮ್ ಆದ್ಮಿ ಪಕ್ಷ 92 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ತೋರಿಸಿಕೊಂಡಿದೆ. ಆ ನಂತರದ್ದು ಕಾಂಗ್ರೆಸ್ 18 ಸ್ಥಾನ ಗೆದ್ದಿದ್ದರೆ, ಬಿಜೆಪಿ ಗೆದ್ದಿರುವುದು ಕೇವಲ 2 ಸ್ಥಾನ ಮಾತ್ರ. ಆದರೂ ಬಿಜೆಪಿ ಹಣಬಲದ ಮೂಲಕ ಹಂತಹಂತವಾಗಿ ಸರ್ಕಾರ ಅಸ್ತಿರಗೊಳಿಸುವ ಬಗ್ಗೆ ಎಎಪಿ ಗಂಭೀರವಾಗಿ ಆರೋಪಿಸಿತ್ತು. ಈಗ ವಿಶ್ವಾಸಮತದ ಮೂಲಕ ತಾವು ಸ್ಥಿರವಾಗಿ ಇರುವುದನ್ನ ಸಾಭೀತುಪಡಿಸಲಿದೆ.

Related Articles

ಇತ್ತೀಚಿನ ಸುದ್ದಿಗಳು