Thursday, July 17, 2025

ಸತ್ಯ | ನ್ಯಾಯ |ಧರ್ಮ

ಸೆಪ್ಟಂಬರ್‌ 20ಕ್ಕೆ ʼಭಾರತೀಯ ನಾಗರಿಕತೆಗಳ ಪ್ರಮುಖ ಲಕ್ಷಣಗಳುʼ ಕುರಿತು ಸಾರ್ವಜನಿಕ ಉಪನ್ಯಾಸ

ಬೆಂಗಳೂರು : ಸೆಪ್ಟಂಬರ್‌ 20ರಂದು   ಸಂಜೆ 6 ಗಂಟೆಗೆ ನಗರದ ಎನ್‌ ಆರ್‌ ಕಾಲೋನಿಯಲ್ಲಿರುವ ʼಎಂವಿ ಸೀತಾರಾಮಯ್ಯ ಸಭಾಂಗಣದಲ್ಲಿ ಹೈಯ್ಯರ್‌ ಲೈಫ್‌ ಇನ್ಸ್ಟಿಟ್ಯೂಟ್‌ ವತಿಯಿಂದ ʼಭಾರತೀಯ ನಾಗರಿಕತೆಗಳ ಪ್ರಮುಖ ಲಕ್ಷಣಗಳುʼ ಎಂಬ ವಿಷಯದ ಕುರಿತು ಸಾರ್ವಜನಿಕ ಉಪನ್ಯಾಸವನ್ನು ಏರ್ಪಡಿಸಲಾಗಿದೆ. 

ಹೆಸರಾಂತ ವಿಮರ್ಶಕ ಹಾಗೂ ಭಾರತೀಯ ಭಾಷಾ ಪ್ರಾಧ್ಯಾಪಕರಾದ ಪ್ರೊ. ಗಣೇಶ ಎನ್‌ ದೇವಿಯವರು “ಭಾರತೀಯ ನಾಗರಿಕತೆಯ ಪ್ರಮುಖ ಅಂಶಗಳುʼ ವಿಷಯುದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ  ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಜೇಂದ್ರ ಚೆನ್ನಿ ಅವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. 

ಆಸಕ್ತಿ ಉಳ್ಳವರು ಹೆಚ್ಚಿನ ಮಾಹಿತಿ ಬೇಕಾದಲ್ಲಿ www.higherlife.institute ಮತ್ತು ಇಮೇಲ್‌ ವಿಳಾಸ : higherlifeinstituteteorg@gmail.com ಮೊಬೈಲ್‌ ಸಂಖ್ಯೆ: 9538820473, 9880135767, 9900210517 ಈ ಮಾಹಿತಿಗಳಿಂದ ಸಂಸ್ಥೆಯವರನ್ನು ಸಂಪರ್ಕಿಸಬಹುದಾಗಿದೆ.

ಉಪನ್ಯಾಸವನ್ನು ʼಹೈಯರ್‌ಲೈಫ್ ಇನ್‌ಸ್ಟಿಟ್ಯೂಟ್ʼ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ ಎಂದು ಸಂಸ್ಥೆಯವರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page