Friday, June 20, 2025

ಸತ್ಯ | ನ್ಯಾಯ |ಧರ್ಮ

ಟೆನಿಸ್‌ ಕ್ರೀಡೆಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್‌

ನ್ಯೂಯಾರ್ಕ್‌: ಅಂತರರಾಷ್ಟ್ರೀಯ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಶನಿವಾರ ತಮ್ಮ ಟೆನಿಸ್‌ ಕ್ರೀಡೆಗೆ ವಿದಾಯ ಹೇಳಿದ್ದಾರೆ.

ತನ್ನ ತವರು ನಾಡಿನಲ್ಲಿ ನಡೆಯುತ್ತಿರುವ ಅಮೇರಿಕ ಒಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಸೋಲು ಕಂಡ ನಂತರ ತಮ್ಮ ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ.

1995 ರಲ್ಲಿ ತಮ್ಮ 14 ವಯಸ್ಸಿನಲ್ಲಿ ವೃತ್ತಿ ಜೀವನಕ್ಕೆ ಬಂದ ಸೆರೆನಾ, 1999 ರಲ್ಲಿ ಮೊದಲ ಅಮೇರಿಕ ಒಪನ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದರು.

ಈಗ 40 ವರ್ಷದ ಸೆರೆನಾ ಟೆನಿಸ್‌ ಕ್ರೀಡೆಯಲ್ಲಿ 23 ಗ್ರ್ಯಾನ್‌ಸ್ಲಾನ್‌ ಪ್ರಶಸ್ತಿಯನ್ನು ತಮ್ಮ ಮೂಡಿಗೆರಿಸಿಕೊಂಡಿದ್ದಾರೆ. ಈ ಮೂಲಕ ಮಹಿಳಾ ಸಿಂಗಲ್ಸ್‌ ಹಾಗೂ ಡಬಲ್ಸ್‌ ವಿಭಾಗದಲ್ಲಿ ʼಕೆರಿಯರ್‌ ಗ್ರ್ಯಾನ್‌ಸ್ಲಾಮ್‌ʼ ಸಾಧನೆ ಮಾಡಿರುವ ವಿಶ್ವದ ಮೊದಲ ಆಟಗಾರ್ತಿ ಎಂಬ ಬಿರುದು ಪಡೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page