Wednesday, June 19, 2024

ಸತ್ಯ | ನ್ಯಾಯ |ಧರ್ಮ

ಚಿಕ್ಕಮಗಳೂರು: ಮಟನ್ ಬದಲು ದನದ ಮಾಂಸ ಬಡಿಸಿದ ಆರೋಪದಡಿ ಇಬ್ಬರು ಹೋಟೆಲ್ ಮಾಲೀಕರ ಬಂಧನ

ಚಿಕ್ಕಮಗಳೂರು: ತಮ್ಮ ಹೋಟೆಲ್‌ಗಳಲ್ಲಿ ಮಟನ್ ಬದಲಿಗೆ ದನದ ಮಾಂಸವನ್ನು ಗ್ರಾಹಕರಿಗೆ ನೀಡುತ್ತಿದ್ದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೋಟೆಲ್ ಮಾಲೀಕರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಂಧಿತರನ್ನು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರು ಹೋಟೆಲ್ ಮಾಲೀಕ ಶಿವರಾಜ್ ಎಂದು ಗುರುತಿಸಲಾಗಿದೆ.

ಎವರೆಸ್ಟ್ ಮತ್ತು ಬೆಂಗಳೂರು ಎರಡೂ ಚಿಕ್ಕಮಗಳೂರು ನಗರದಲ್ಲಿ ಜನಪ್ರಿಯ ಹೋಟೆಲ್‌ಗಳಾಗಿವೆ. ಎರಡೂ ಹೋಟೆಲ್‌ಗಳು ಮಟನ್ ತಿನಿಸುಗಳು ಎಂದು ಹೇಳಿಕೊಂಡು ದನದ ಮಾಂಸದ ವಿವಿಧ ಖಾದ್ಯಗಳನ್ನು ನೀಡುತ್ತಿದ್ದವು ಎಂದು ಆರೋಪಿಸಲಾಗಿದೆ.

ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು ದಾಳಿ ನಡೆಸಿದ್ದರು.

ಇನ್ನೊಂದು ಪ್ರಕರಣದಲ್ಲಿ ಚಿಕ್ಕಮಗಳೂರಿನ ನ್ಯಾಮತ್ ಹೋಟೆಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20 ಕೆಜಿ ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹೋಟೆಲ್ ಮಾಲೀಕ ಇರ್ಷಾದ್ ಅಹ್ಮದ್ ಎನ್ನುವವರನ್ನು ಬಂಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು