Friday, January 9, 2026

ಸತ್ಯ | ನ್ಯಾಯ |ಧರ್ಮ

ಲೈಂಗಿಕ ದೌರ್ಜನ್ಯ ಪ್ರಕರಣ‌, ಮ್ಯೂಸಿಕ್ ಮೈಲಾರಿಗೆ ಜೈಲು ಫಿಕ್ಸ್

ಬಾಗಲಕೋಟೆ : ಜಾನಪದ ಗಾಯಕ (Folk Singer) ಮ್ಯೂಸಿಕ್ ಮೈಲಾರಿ (Music Mailari) ಜಾಮಿನು ಅರ್ಜಿ ತಿರಸ್ಕೃತಗೊಂಡಿದೆ. ಇದರಿಂದ ಮೈಲಾರಿಗೆ ಜೈಲೇ ಗತಿಯಾಗಿದೆ.

15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ಮೈಲಾರಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಬಾಗಲಕೋಟೆ (Bagalkot) ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶೆ ಪ್ರೀತಿ ಸಗರ ಜೋಷಿ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ (Social Media) ಬಾಗಲಕೋಟೆ ಬಸ್ ಸ್ಟ್ಯಾಂಡ್‌ನಾಗ ಹಾಡಿನ ಮೂಲಕ ಮ್ಯೂಸಿಕ್‌ ಮೈಲಾರಿ ಹಾಡಿನ ಮೂಲಕ ಫೆಮಸ್‌ ಆಗಿದ್ದರು.

ಘಟನೆಯ ವಿವರ
ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತ ಬಾಲಕಿಯ (Minor Girl) ಮೇಲೆ ಅತ್ಯಾಚಾರ ಎಸಗಿದ (Crime) ಆರೋಪಕ್ಕೆ ಸಂಬಂಧಪಟ್ಟಂತೆ ಆರೋಪಿ ಮ್ಯೂಸಿಕ್ ಮೈಲಾರಿಯನ್ನು (Music Mailari) ಮಹಾಲಿಂಗಪುರ ಪೊಲೀಸರು ಬಂಧಿಸಿದ್ದರು.ಕಳೆದ ಅಕ್ಟೋಬರ್ 24, 2025 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಜಾಗನೂರು ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ಕಾರ್ಯಕ್ರಮದ ಪ್ರಯುಕ್ತ ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ.

ಈ ಕಾರ್ಯಕ್ರಮಕ್ಕೆ ಅಪ್ರಾಪ್ತ ಬಾಲಕಿಯನ್ನ ಡ್ಯಾನ್ಸ್ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದ, ಕಾರ್ಯಕ್ರಮ ಮುಗಿದ ಬಳಿಕ ಮಹಾಲಿಂಗಪುರ ಬಳಿಯ ಲಾಡ್ಜ್ ಗೆ ಕರೆದೊಯ್ದಿದ್ದ. ಈ ವೇಳೆ ನನ್ನ ಜೊತೆ ರಿಲೇಷನ ಶಿಪ್ ನಲ್ಲಿರು ನಿನ್ನ ಫೇಮಸ್ ಮಾಡ್ತೀನಿ ಕಾರ್ಯಕ್ರಮಕ್ಕೆ ಕರೆಸುತ್ತೇನೆ ಎಂದು ಹೇಳಿದ್ದ. ಆದರೆ ಇದಕ್ಕೆ ಬಾಲಕಿ ಒಪ್ಪದಿದ್ದಾಗ ಜೊತೆಗಿದ್ದ ಮೈಲಾರಿ ಸ್ನೇಹಿತ ಆಕೆಯ ಮೇಲೆ ಹಲ್ಲೆ ಮಾಡಿ ಮೈಲಾರಿ ರೂಮಿಗೆ ಕಳಿಸಿದ್ದ. ಈ ವೇಳೆ ನಾನು ಇನ್ನೂ ಬಾಲಕಿ ಇದ್ದೀನಿ ಎಂದು ಮನವಿ ಮಾಡಿದರೂ ಕೂಡ ಕೇಳದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು.ಅಲ್ಲದೇ ಅತ್ಯಾಚಾರ ಮಾಡಿದ ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ, ವಿಡಿಯೋ ಮಾಡಿಕೊಂಡಿದ್ದೇವೆ ವೈರಲ್ ಮಾಡುತ್ತೇವೆ ಎಂದು ಹೇಳಿದ್ದಾನೆ. ಈ ಸಂಬಂಧ ಸಂತ್ರಸ್ತ ಬಾಲಕಿಯಿಂದ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಘಟನಾ ಸ್ಥಳ ಮಹಾಲಿಂಗಪುರ ವ್ಯಾಪ್ತಿಗೆ ಬರುವುದರಿಂದ ಡಿಸೆಂಬರ್ 15 ರಂದು ಪ್ರಕರಣವನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಗೆ ವರ್ಗಾಯಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page