Tuesday, March 3, 2026

ಸತ್ಯ | ನ್ಯಾಯ |ಧರ್ಮ

ಬಾಂಬ್ ಹಾಕ್ತೀನಿ ಹುಷಾರ್ ಎಂದ ಶಂಕರ್‌ ಎಂಬಾತ – ಎಫ್‌ಐಆರ್ ದಾಖಲು

ಉಳ್ಳಾಲ : ಉಳ್ಳಾಲದ (Ullal ) ಬಳಿ ಬಾಂಬ್ ಸ್ಫೋಟದ (Bomb blast ) ಬೆದರಿಕೆವೊಡ್ಡಿದ ಕಿಡಿಗೇಡಿಯ ವಿರುದ್ಧ FIR ದಾಖಲಾಗಿದೆ.

ಬಾಂಬ್ ಸ್ಫೋಟಿಸುವುದಾಗಿ ಇನ್ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ವಿರುದ್ಧ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತವಾಗಿ FIR ದಾಖಲಿಸಿಕೊಂಡಿದ್ದಾರೆ.

‘shankar11916’ ಎಂಬ ಖಾತೆಯಿಂದ ಸಾರ್ವಜನಿಕ ಶಾಂತಿ ಕದಡುವ ನಿಟ್ಟಿನಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಸದ್ಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಆರೋಪಿಯೂ ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ ಸಪೋರ್ಟ್ ಮಾಡಿ ಎಂಬ ಆಘಾತಕಾರಿ ಸಂದೇಶವನ್ನು ಹಂಚಿಕೊಂಡಿದ್ದನು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ತಕ್ಷಣ ಕ್ರಮಕ್ಕೆ ಆದೇಶಿಸಿದ್ದು, ಕಿಡಿಗೇಡಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page