Saturday, June 15, 2024

ಸತ್ಯ | ನ್ಯಾಯ |ಧರ್ಮ

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿರುವ ವಿಹಿಂಪ, ಬಜರಂಗದಳ ಮುಖಂಡರು

ಮಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಉಡುಪಿ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮತ್ತು ಬಜರಂಗದಳ ದ.ಕ. ಜಿಲ್ಲಾಧ್ಯಕ್ಷ ದಿನೇಶ್ ಮೆಂಡನ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 438ರ ಅಡಿಯಲ್ಲಿ ಅರ್ಜಿಯನ್ನು ಆಗಸ್ಟ್ 10ರಂದು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಸರ್ಕಾರಿ ಅಭಿಯೋಜಕರ ಆಕ್ಷೇಪಣೆಗಾಗಿ ಪ್ರಕರಣವನ್ನು ಆಗಸ್ಟ್ 16ಕ್ಕೆ ಮುಂದೂಡಿದ್ದಾರೆ.

ಮೂವರು ಅರೆವೈದ್ಯಕೀಯ ಡಿಪ್ಲೊಮಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಆಗಸ್ಟ್ 3ರಂದು ಉಡುಪಿಯಲ್ಲಿ ವಿಹಿಂಪ ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಮೆರವಣಿಗೆಯ ನಂತರ ಮಾತನಾಡಿದ ಪಂಪ್ವೆಲ್, “ಅಡುಗೆ ಮತ್ತು ಇತರ ಮನೆಕೆಲಸಗಳನ್ನು ಮಾಡುವ ಮಹಿಳೆಯರು ಅವರ ಸಹೋದರಿಯರು ಅಪಾಯದಲ್ಲಿದ್ದಾಗ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು” ಎಂದು ಹೇಳಿದ್ದರು.

ಪುನೀತ್ ಕೆರೆಹಳ್ಳಿ ಬಂಧನ : ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು

ಮುಸ್ಲಿಂ ನಾಯಕರು ತಮ್ಮ ಸಮುದಾಯದವರಿಗೆ ಇನ್ನೊಂದು ಸಮುದಾಯದೊಡನೆ ಬೆರೆಯಲು ಬಿಡಬಾರದು. “ಒಂದು ವೇಳೆ ನೀವು ಬಿಟ್ಟಲ್ಲಿ, ಆದಿ ಉಡುಪಿಯ ಘಟನೆ (ಮಾರ್ಚ್ 2005ರಲ್ಲಿ ಇಬ್ಬರು ಮುಸ್ಲಿಮರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ). ಬ್ರಹ್ಮಾವರ, ಹಿರಿಯಡ್ಕ ಮತ್ತು 2017ರಲ್ಲಿ ಪೆರ್ಡೂರಿನಲ್ಲಿ ಹಸನಬ್ಬ ವಿರುದ್ಧ ನಡೆದ ಘಟನೆಗಳು ಮರುಕಳಿಸಬಹುದು.” ಎಂದು ಮೆಂಡನ್‌ ಹೇಳಿದ್ದರು.

ಈ ಕುರಿತು ಉಡುಪಿ ನಗರ ಪೊಲೀಸರು ಶರಣ್ ಮತ್ತು ಮೆಂಡನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (1) (ಬಿ) (ಸಾರ್ವಜನಿಕ ಶಾಂತಿಗೆ ಧಕ್ಕೆ ತರಲು ಯಾವುದೇ ವ್ಯಕ್ತಿಯನ್ನು ಪ್ರಚೋದಿಸುವ ಕೃತ್ಯ), 505 (1) (ಸಿ) (ಇತರ ಯಾವುದೇ ವರ್ಗ ಅಥವಾ ಸಮುದಾಯದ ವಿರುದ್ಧ ಯಾವುದೇ ಅಪರಾಧ ಮಾಡಲು ಯಾವುದೇ ವರ್ಗ ಅಥವಾ ಸಮುದಾಯವನ್ನು ಪ್ರಚೋದಿಸುವ ಉದ್ದೇಶದಿಂದ ಮಾಡಿದ ಕೃತ್ಯ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆಗಸ್ಟ್ 3ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು