Thursday, November 27, 2025

ಸತ್ಯ | ನ್ಯಾಯ |ಧರ್ಮ

ಶೇಕ್ ಹಸೀನಾ ಬಾಂಗ್ಲಾ ಮಾಜಿ ಪ್ರಧಾನಿಗೆ 21 ವರ್ಷ ಜೈಲು ಶಿಕ್ಷೆ

ಪೂರ್ವಾಚಲ್ ನ್ಯೂ ಸಿಟಿ ಯೋಜನೆಯಲ್ಲಿ ಜಮೀನು ಹಂಚಿಕೆಯಲ್ಲಿ ಅಕ್ರಮ (Fraud) ನಡೆದಿದೆ ಎನ್ನುವ ಆರೋಪದಲ್ಲಿ ಬಾಂಗ್ಲಾದೇಶದ ಭ್ರಷ್ಟಾಚಾರ ನಿಗ್ರಹ ಆಯೋಗ (ACC) ದಾಖಲಿಸಿದ್ದ ಮೂರು ಪ್ರಕರಣಗಳಲ್ಲಿ, ಮಾಜಿ ಪ್ರಧಾನಿ ಶೇಖ್ ಹಸೀನಾಗೆ (Sheikh Hasina) ಬಾಂಗ್ಲಾದೇಶದ ನ್ಯಾಯಾಲಯವು 21 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಕಳೆದ ನವೆಂಬರ್ 17 ರಂದು ನಡೆದ ಇನ್ನೊಂದು ಪ್ರಕರಣದ ಮರಣದಂಡನೆಯ ತೀರ್ಪಿನ ಕೆಲವೇ ದಿನಗಳ ಬಳಿಕ ಈ ತೀರ್ಪು ಬಂದಿದೆ. ಆ ಜಾಮೀನು ಹಂಚಿಕೆ ಅಕ್ರಮ ಪ್ರಕರಣದಲ್ಲಿ, 2023ರ ಜುಲೈ ತಿಂಗಳ ಪ್ರತಿಭಟನೆಗಳ ವೇಳೆ ನಡೆದ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಹಸೀನಾವನ್ನು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ಈಗ ನೀಡಲಾದ ತೀರ್ಪಿನಲ್ಲಿ ಹಸೀನಾ ಅವರ ಆಪ್ತ ಸಹಾಯಕರಾದ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಇವರಿಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ಢಾಕಾ ವಿಶೇಷ ನ್ಯಾಯಾಧೀಶರ ನ್ಯಾಯಾಲಯ -5 ರ ನ್ಯಾಯಾಧೀಶ ಮೊಹಮ್ಮದ್ ಅಬ್ದುಲ್ಲಾ ಅಲ್ ಮಾಮುನ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಾಂಗ್ಲಾದೇಶದ ನ್ಯಾಯಾಲಯವು ಶೇಖ್ ಹಸೀನಾ ಅವರಿಗೆ ತಲಾ ಏಳು ವರ್ಷಗಳಂತೆ ಒಟ್ಟು 21 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣಗಳಲ್ಲಿ ಅವರ ಮಗ ಸಜೀಬ್ ವಾಜೆದ್ ಜಾಯ್ ಮತ್ತು ಮಗಳು ಸೈಮಾ ವಾಜೆದ್ ಪುತುಲ್ ಮೇಲೂ ಆರೋಪಗಳಿದ್ದವು. ಮೂವತ್ತೊಂದು ಪ್ರಕರಣಗಳಲ್ಲಿ ಒಂದರಲ್ಲಿ ಇವರಿಬ್ಬರಿಗೂ ತಲಾ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಒಟ್ಟು 20 ಇತರ ಆರೋಪಿಗಳ ಪೈಕಿ 19 ಮಂದಿಗೆ ಬೇರೆ ಬೇರೆ ಅವಧಿಯ ಜೈಲು ಶಿಕ್ಷೆ ನೀಡಲಾಗಿದ್ದು, ಒಬ್ಬ ವ್ಯಕ್ತಿ ಮಾತ್ರ ಎಲ್ಲಾ ಮೂರು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ ಎಂದು ವರದಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page