ಶಿಮ್ಲಾ-ಕಲ್ಕಾ ಹೆರಿಟೇಜ್ ರೈಲು ಹಳಿಯಲ್ಲಿ ಭೂಕುಸಿತ, ಸಮಯಕ್ಕೆ ಸರಿಯಾಗಿ ಚಾಲಕ ಬ್ರೇಕ್..!

ಚಂಡೀಗಢ: ಹಿಮಾಚಲ ಪ್ರದೇಶದಲ್ಲಿ ಇಂದು (ಗುರುವಾರ) ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಶಿಮ್ಲಾ-ಕಲ್ಕಾ ಹೆರಿಟೇಜ್ ರೈಲು ಹಳಿಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.
50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ರೈಲು ಸೋಲನ್ ಜಿಲ್ಲೆಯ ಪಟ್ಟಾ ಮೋರ್ ಬಳಿ ತಲುಪಿದಾಗ, ಬೆಟ್ಟದಿಂದ ದೊಡ್ಡ ಕಲ್ಲುಗಳು ಬೀಳಲು ಪ್ರಾರಂಭಿಸಿದವು.
ತಕ್ಷಣವೇ ಎಚ್ಚೆತ್ತ ಚಾಲಕ ಸಕಾಲದಲ್ಲಿ ಬ್ರೇಕ್ ಹಾಕಿದ್ದರಿಂದ  ದೊಡ್ಡ ಅಪಘಾತ ತಪ್ಪಿಸಿದ್ದು, ಅಷ್ಟುಜನರ ಪ್ರಾಣ ಉಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು