Sunday, July 27, 2025

ಸತ್ಯ | ನ್ಯಾಯ |ಧರ್ಮ

ಶಿಂಧೆ ಯುಗ ಮುಗಿಯಿತು. ಬಿಜೆಪಿ ಅವರನ್ನು ಕಾಲಾಳಿನಂತೆ ಬಳಸಿ ಎಸೆಯಿತು: ಸಂಜಯ್ ರಾವತ್

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ. ಶಿಂಧೆ ಅವರ ಯುಗ ಮುಗಿದಿದ್ದು, ಅವರು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಹಾಯುತಿ ಮೈತ್ರಿಕೂಟವು ದೇವೇಂದ್ರ ಫಡ್ನವಿಸ್ ಅವರನ್ನು ಮುಂದಿನ ಮುಖ್ಯಮಂತ್ರಿ ಮತ್ತು ಶಿಂಧೆ ಅವರನ್ನು ಉಪಮುಖ್ಯಮಂತ್ರಿ ಎಂದು ಬುಧವಾರ ಘೋಷಿಸಿದ ನಂತರ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಶಿಂಧೆಯವರನ್ನು ಬಿಜೆಪಿಯವರು ಕಾಲಾಳಿನಂತೆ ಬಳಸಿಕೊಂಡಿದ್ದು, ಈಗ ಅವರನ್ನು ಪಕ್ಕಕ್ಕೆ ಎಸೆಯಲಾಗಿದೆ ಎಂದು ಸಂಜಯ್ ರಾವುತ್ ದೂರಿದ್ದಾರೆ. ಶಿಂಧೆ ಯುಗ ಮುಗಿದು ಎರಡು ವರ್ಷವಾಗಿದ್ದು, ಈಗ ಬಿಜೆಪಿಗೆ ಅವರ ಅವಶ್ಯಕತೆ ಇಲ್ಲ ಎಂದರು. ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದಾರೆ.

ಅಗತ್ಯ ಬಿದ್ದ ಶಿಂಧೆಯವರ ಪಕ್ಷವನ್ನೇ ಬಿಜೆಪಿ ಒಡೆಯಬಹುದು. ಇದು ಪ್ರಧಾನಿ ಮೋದಿಯವರ ರಾಜಕೀಯ ನಿಲುವು. ಸ್ಪಷ್ಟ ಬಹುಮತವಿದ್ದರೂ 15 ದಿನವಾದರೂ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಅಂದರೆ ಅವರ ಮೈತ್ರಿಯಲ್ಲಿ ಏನೋ ತಪ್ಪಾಗಿದೆ. ಇವತ್ತಲ್ಲದಿದ್ದರೆ ಮುಂದೆಯಾದರೂ ಇದು ಬಯಲಿಗೆ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page