Thursday, September 5, 2024

ಸತ್ಯ | ನ್ಯಾಯ |ಧರ್ಮ

ಶಿವಾಜಿ ಪ್ರತಿಮೆ ಕುಸಿತ: ಮಹಾರಾಷ್ಟ್ರದ ಥಾಣೆಯಲ್ಲಿ ಶಿಲ್ಪಿ ಜಯದೀಪ್ ಆಪ್ಟೆ ಬಂಧನ

ಮುಂಬೈ: ಕಳೆದ ತಿಂಗಳು ಮಹಾರಾಷ್ಟ್ರದ ರಾಜ್‌ಕೋಟ್ ಕೋಟೆಯಲ್ಲಿ ಕುಸಿದು ಬಿದ್ದ ಛತ್ರಪತಿ ಶಿವಾಜಿ ಪ್ರತಿಮೆಯನ್ನು ಕಟೆದಿದ್ದ ಶಿಲ್ಪಿ ಮತ್ತು ಗುತ್ತಿಗೆದಾರ ಜಯದೀಪ್ ಆಪ್ಟೆಯನ್ನು ಬುಧವಾರ ರಾತ್ರಿ ಥಾಣೆ ಜಿಲ್ಲೆಯ ಕಲ್ಯಾಣ್‌ ಎನ್ನುವಲ್ಲಿ ಬಂಧಿಸಲಾಗಿದೆ.

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪೊಲೀಸರು ಶಿಲ್ಪಿ ಮತ್ತು ಗುತ್ತಿಗೆದಾರ ಜಯದೀಪ್ ಆಪ್ಟೆಯನ್ನು ಪತ್ತೆಹಚ್ಚಲು ಏಳಕ್ಕೂ ಹೆಚ್ಚು ತಂಡಗಳನ್ನು ರಚಿಸಿದ್ದರು. ಆಗಸ್ಟ್‌ 26ರಂದು ಈ ಪ್ರತಿಮೆ ಕುಸಿದು ಬಿದ್ದಿತ್ತು. ಅಂದಿನಿಂದ ಪೊಲೀಸರು 24 ವರ್ಷದ ಆತನನ್ನು ಹುಡುಕುವ ಪ್ರಯತ್ನದಲ್ಲಿದ್ದರು.

ಆಪ್ಟೆ ವಿವಿಧ ಮೂಲಗಳ ಮೂಲಕ ದೇಶ ತೊರೆಯದಂತೆ ನೋಡಿಕೊಳ್ಳಲು ಸಿಂಧುದುರ್ಗ ಪೊಲೀಸರು ಆಪ್ಟೆ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ (ಎಲ್‌ಒಸಿ) ಹೊರಡಿಸಿದ್ದರು.

ಸಿಂಧುದುರ್ಗ ಪೊಲೀಸರ ತಂಡಗಳು ಮುಂಬೈ, ಥಾಣೆ, ಸಿಂಧುದುರ್ಗ ಮತ್ತು ಕೊಲ್ಲಾಪುರ ಸೇರಿದಂತೆ ಸ್ಥಳಗಳಲ್ಲಿ ಆರೋಪಿಗಾಗಿ ಶೋಧ ನಡೆಸುತ್ತಿದ್ದವು. ಆರೋಪಿಗಯನ್ನು ಬಂಧಿಸಲು ಕೆಲವು ತಂಡಗಳು ತಾಂತ್ರಿಕ ಸಹಾಯವನ್ನು ಬಳಸಿದ್ದವು ಅಧಿಕಾರಿ ತಿಳಿಸಿದ್ದಾರೆ. ಪೊಲೀಸ್ ತಂಡವು ಥಾಣೆ ಜಿಲ್ಲೆಯ ಕಲ್ಯಾಣ್‌ ಪ್ರದೇಶದಲ್ಲಿರುವ ದೂಧನಾಕಾದಲ್ಲಿರುವ ಆಪ್ಟೆಯ ಮನೆಗೂ ಪೊಲೀಸ್‌ ತಂಡ ಹೋಗಿತ್ತು. ಆದರೆ ಮನೆಗೆ ಬೀಗ ಹಾಕಲಾಗಿತ್ತು.

ಕಳೆದ ವರ್ಷ ಡಿಸೆಂಬರ್ 4 ರಂದು ನೌಕಾಪಡೆಯ ದಿನದಂದು ಮಾಲ್ವಾನ್ ತೆಹಸಿಲ್‌ನಲ್ಲಿರುವ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ ಮರಾಠ ರಾಜನ 35 ಅಡಿ ಪ್ರತಿಮೆಯನ್ನು ಮಾಡುವ ಒಪ್ಪಂದವನ್ನು ಆಪ್ಟೆ ಕಾರ್ಯಗತಗೊಳಿಸಿದ್ದ.

ಪ್ರತಿಮೆ ಕುಸಿದ ನಂತರ, ಮಾಲ್ವಾನ್ ಪೊಲೀಸರು ಆಪ್ಟೆ ಮತ್ತು ಪ್ರತಿಮೆಯ ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ನಿರ್ಲಕ್ಷ್ಯ ಮತ್ತು ಇತರ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ. ಪಾಟೀಲನನ್ನು ಕಳೆದ ವಾರ ಕೊಲ್ಲಾಪುರದಿಂದ ಬಂಧಿಸಲಾಗಿತ್ತು.

ಈ ಪ್ರತಿಮೆಯ ಕುಸಿತವು ಮಹಾರಾಷ್ಟ್ರದ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page