ಶಿವಮೊಗ್ಗ ಗಲಭೆ: ಆರೋಪಿ ಕಾಲಿಗೆ ಗುಂಡೇಟು

ಶಿವಮೊಗ್ಗ: ಸೋಮವಾರ ಬಟ್ಟೆ ಅಂಗಡಿ ಕೆಲಸಗಾರ ಪ್ರೇಮ್ ಸಿಂಗ್‌ ಅವರಿಗೆ ಚೂರಿ ಇರಿದ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಎನ್.ಟಿ.ರಸ್ತೆಯ ಫಲಕ್ ಪ್ಯಾಲೇಸ್ ಬಳಿ ಆರೋಪಿ ಇರುವ ಮಾಹಿತಿ ತಿಳಿದ ಪೊಲೀಸರ ತಂಡ ಮಂಗಳವಾರ ಮುಂಜಾನೆ ಬಂಧಿಸಲು ತೆರಳಿತ್ತು. ಈ ವೇಳೆ  ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾನೆ, ಈ ವೇಳೆ ನಗರದ ವಿನೋಬ‌ನಗರ ಠಾಣೆ ಪಿಎಸ್ಐ ಮಂಜುನಾಥ ಕುರಿ, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಗಾಯಗೊಂಡ ಆರೋಪಿಯನ್ನು ಮೆಗ್ಗಾನ್ ಆಸ್ಲತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಗೊಂಡಿರುವ ಆರೋಪಿ ಮಾರ್ನಮಿಬೈಲು ನಿವಾಸಿ ಚರ್ಬಿ ಅಲಿಯಾಸ್ ಮೊಹಮ್ಮದ್ ಜಬಿ (30) ಎಂದು ತಿಳಿದುಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು