Saturday, March 7, 2026

ಸತ್ಯ | ನ್ಯಾಯ |ಧರ್ಮ

ಮದ್ಯಪ್ರಿಯರಿಗೆ ಶಾಕ್ – ಮದ್ಯದ ಮೇಲೆ ಹೊಸ ರೂಪದ ತೆರಿಗೆ

ಬೆಂಗಳೂರು :  2026-27 ನೇ ಸಾಲಿನ ಬಜೆಟ್​ನಲ್ಲಿ (Karnataka Budget 2026) ಸಿಎಂ ಸಿದ್ದರಾಮಯ್ಯ (Cm Siddaramaiah) ಮದ್ಯಪ್ರಿಯರಿಗೆ  ಬಿಗ್​ ಶಾಕ್ ನೀಡಿದ್ದಾರೆ. ಮದ್ಯದ ಮೇಲೆ ಹೊಸ ರೂಪದ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. 

ಏಪ್ರಿಲ್ 2026ರಿಂದ ಪಾನೀಯ ಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡು ಅಬಕಾರಿ ಸುಂಕ ವ್ಯವಸ್ಥೆ ಜಾರಿಗೆ ತರುವ ಘೋಷಣೆ ಮಾಡಲಾಗಿದೆ. ಮದ್ಯಪಾನ ದುಷ್ಪರಿಣಾಮಗಳು, ಸಮಾಜದಲ್ಲಿ ಉಂಟು ಮಾಡುವ ಹಾನಿಯ ಕಾರಣ, ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ಪದ್ದತಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ತೆರಿಗೆ ಪದ್ದತಿಯು ಗೋಲ್ಡ್ ಸ್ಟ್ಯಾಂಡರ್ಡ್ ಆಗಿದೆ.

2026ರ ಕರ್ನಾಟಕ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. 

ಇನ್ನು ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಧಾರವಾಡ ನಿಮ್ಹಾನ್ಸ್ ಸಂಸ್ಥೆಗಳಲ್ಲಿ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಮಾದಕ ವ್ಯಸನಕ್ಕೆ ಒಳಗಾದ 18 ವರ್ಷದೊಳಗಿನ ಮಕ್ಕಳಿಗಾಗಿ ಪ್ರಾಯೋಗಿಕವಾಗಿ ಈ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. 

Related Articles

ಇತ್ತೀಚಿನ ಸುದ್ದಿಗಳು

You cannot copy content of this page