Friday, April 11, 2025

ಸತ್ಯ | ನ್ಯಾಯ |ಧರ್ಮ

ಮೋದಿ ಕಾರಿನ ಮೇಲೆ ಚಪ್ಪಲಿ ಎಸೆತ: ರಾಹುಲ್‌ ಗಾಂಧಿ ಪ್ರತಿಕ್ರಿಯೆ

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಾಹನದ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ನಡೆದಿದೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಅವರು ಮೊದಲ ಬಾರಿಗೆ ವಾರಣಾಸಿಗೆ ಭೇಟಿ ನೀಡಿದ್ದರು.

ಮೋದಿಯವರ ವಾಹನ ಸಾಗುತ್ತಿದ್ದರು. ಆ ಸಮಯದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರೆಡೆಯಿಂದ ಏಕಾಏಕಿ ಮೋದಿಯವರ ಕಾರಿನ ಮೇಲೆ ಅಪರಿಚಿತ ವಸ್ತು ಬಿದ್ದಿತ್ತು. ಈ ನಡುವೆ ಈ ಘಟನೆಗೆ ಗುರುವಾರ ಜೂನ್ 20ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಜನರು ಈಗ ಮೋದಿಗೆ ಹೆದರುತ್ತಿಲ್ಲ. ಈಗ ದೇಶದಲ್ಲಿ ಪ್ರಬಲ ಪ್ರತಿಪಕ್ಷಗಳಿರುವುದರಿಂದ ಮೊದಲಿನಂತೆ ಜನರು ಮೋದಿಗೆ ಹೆದರುತ್ತಿಲ್ಲ ಎಂದರು. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮೋದಿ ಮಾನಸಿಕವಾಗಿ ಕುಸಿದಿದ್ದಾರೆ ಎಂದು ರಾಹುಲ್ ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page