ರಾಬರ್ಟ್ ವಾದ್ರಾರನ್ನು ಗುಂಡಿಟ್ಟು ಕೊ*ಲ್ಲಿ: ಶಿವಮೊಗ್ಗ ಶಾಸಕ ಚನ್ನಬಸಪ್ಪ

ಪಹಲ್ಗಾಮ್ ದಾಳಿಯ ಕುರಿತಾಗಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಅವರು ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ವಿವಾದಾತ್ಮಕವಾಗಿ ನೀಡಿದ್ದಾರೆ.

ಪಹಲ್ಗಾಮ್ ಉಗ್ರ ದಾಳಿಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಹಿಂದುತ್ವ ರಾಜಕಾರಣ ಮತ್ತು ಉಗ್ರ ಚಟುವಟಿಕೆಗೆ ನೇರ ಸಂಬಂಧವಿದೆ. ಭಾರತದಲ್ಲಿ ಹಿಂದುತ್ವ ರಾಜಕಾರಣದ ಅತಿಯಾದ ಬೆಳವಣಿಗೆಯೇ ಉಗ್ರ ಚಟುವಟಿಕೆ ಹೆಚ್ಚಲು ಕಾರಣ ಎಂದು ಇತ್ತೀಚೆಗೆ ರಾಬರ್ಟ್ ವಾದ್ರಾ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರು ಉದ್ಯಮಿ ರಾಬರ್ಟ್ ವಾದ್ರಾರನ್ನು ಗುಂಡಿಟ್ಟು ಕೊಲ್ಲುವಂತೆ ಹೇಳಿದ್ದಾರೆ.

ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮಡಿದವರಿಗೆ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಸಮಯದಲ್ಲಿ ವಾದ್ರಾ ನೀಡಿರುವ ಹೇಳಿಕೆ ಸಹಿಸಲಾಗದು. ಉಗ್ರವಾದಿಗಳಿಗೆ ಶಕ್ತಿ ತುಂಬುವ ರೀತಿಯಲ್ಲಿ ಮಾತನಾಡಿರುವ ವಾದ್ರಾ ದೇಶ ದ್ರೋಹಿ. ಅವರು ಭೂಮಿ ಮೇಲಿರಲು ನಾಲಾಯಕ್ಕು ಎಂದು ಹೇಳಿದ್ದಾರೆ.

ರಾಬರ್ಟ್‌ ವಾದ್ರಾನಂತವರು ಉಗ್ರಗಾಮಿಗಳಿಗೆ ಶಕ್ತಿ ನೀಡುವಂತಹ ಹೇಳಿಕೆ ಕೊಡುತ್ತಿದ್ದಾರೆ. ಇಡೀ ದೇಶ ಭಯೋತ್ಪಾದನೆ ವಿರುದ್ಧ ಮಾತನಾಡುತ್ತಿದ್ದರೆ ಈತ ಮಾತ್ರ ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆ ನೀಡುತ್ತಾನೆ ಎಂದರು.

Related Articles

ಇತ್ತೀಚಿನ ಸುದ್ದಿಗಳು