Friday, March 6, 2026

ಸತ್ಯ | ನ್ಯಾಯ |ಧರ್ಮ

ಯುವನಿಧಿಗೆ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ರೂಪಾಯಿ ಹಣ ನೀಡಿಲ್ಲ – ಯೋಜನೆ ರದ್ಧಾಗಬಹುದ

ಬೆಂಗಳೂರು : ಯುವನಿಧಿ (Yuva nidhi) ಯೋಜನೆಯು ಕರ್ನಾಟಕ ಸರ್ಕಾರವು ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಸಿಗುವವರೆಗೆ ಆರ್ಥಿಕ ನೆರವು ನೀಡುವ 5ನೇ ಗ್ಯಾರಂಟಿ ಯೋಜನೆ. 2023-24ರಲ್ಲಿ ಉತ್ತೀರ್ಣರಾಗಿ, 6 ತಿಂಗಳು ಕಳೆದರೂ ಕೆಲಸ ಸಿಗದ ಪದವೀಧರರಿಗೆ ₹3,000 ಮತ್ತು ಡಿಪ್ಲೋಮಾ ದಾರರಿಗೆ ₹1,500 ಮಾಸಿಕ ಭತ್ಯೆಯನ್ನು ಗರಿಷ್ಠ 2 ವರ್ಷಗಳವರೆಗೆ ಡಿಬಿಟಿ ಮೂಲಕ ನೀಡಲಾಗುತ್ತದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಇಂದಿನ ಬಜೆಟ್​​ನಲ್ಲಿ (Karnataka budget) ಯುವನಿಧಿಗೆ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ರೂಪಾಯಿ ಹಣ ನೀಡಿಲ್ಲ.

ಒಟ್ಟು 4.48 ಲಕ್ಷ ಕೋಟಿ ರೂಪಾಯಿ ಗಾತ್ರದ ಈ ಬೃಹತ್ ಬಜೆಟ್‌ನಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಿಂಹಪಾಲು ಅನುದಾನ ಮೀಸಲಿಡಲಾಗಿದೆ. ಮಹಿಳೆಯರು ಮತ್ತು ಬಡ ವರ್ಗದ ಜನರಿಗೆ ನೇರ ಲಾಭ ತಲುಪಿಸುವ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿರುವುದು ಸ್ಪಷ್ಟವಾಗಿದೆ. ಆದರೆ, ಯುವನಿಧಿಗೆ ಈ ಬಾರಿ ಯಾವುದೇ ಅನುದಾನ ನೀಡದಿರುವುದು ಪ್ರಶ್ನಾರ್ಹವಾಗಿದೆ.

ಸಿದ್ದರಾಮಯ್ಯ ಸರ್ಕಾರಕ್ಕೆ ಗ್ಯಾರಂಟಿಯಿಂದ ಸಾಲು ಸಾಲು ಸಮಸ್ಯೆ ಆಗುತ್ತಿದೆ. ಆದ್ದರಿಂದ ನಿರೀಕ್ಷೆಯಂತೆಯೇ ಒಂದು ಗ್ಯಾರಂಟಿಗೆ ಬ್ರೇಕ್ ಹಾಕಲಾಗಿದೆ. ನಿರುದ್ಯೋಗಿಗಳಿಗೆ ಸಹಾಯ ಮಾಡಲೆಂದೇ ಇದ್ದ ಯುವನಿಧಿ ಯೋಜನೆಗೆ ಬ್ರೇಕ್ ಹಾಕಲಾಗಿದೆ. ಈ ಬಾರಿ ಯುವನಿಧಿ ಯೋಜನೆಗೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page