Monday, February 17, 2025

ಸತ್ಯ | ನ್ಯಾಯ |ಧರ್ಮ

ಮೇ ತಿಂಗಳಲ್ಲಿ ತಾಪಂ-ಜಿಪಂ ಚುನಾವಣೆ, ನಾವ್‌ ರೆಡಿ ಎಂದ ಸಿದ್ದರಾಮಯ್ಯ

ಬೆಂಗಳೂರು : ಬಸ್ ಟಿಕೆಟ್​ ದರ, ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ… ಹಾಲು ಹೀಗೆ ಸಾಲು ಸಾಲು ದರ ಏರಿಕೆ ಬಿಸಿ ನಡುವೆಯೇ ಜನಸಾಮಾನ್ಯರಿಗೆ ವಿದ್ಯುತ್ ದರ ಬಿಲ್ ಶಾಕ್ ನೀಡಲು ಸರ್ಕಾರ ಮುಂದಾಗಿದೆ.

ಏಪ್ರಿಲ್​​ನಿಂದಲೇ ವಿದ್ಯುತ್ ದರ ಏರಿಕೆ ಬಹುತೇಕ ಫಿಕ್ಸ್​ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿರುವ ಎಲ್ಲಾ ಎಸ್ಕಾಂಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್​ ತಿಂಗಳಿನಿಂದ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಆಘಾತ ಎದುರಾಗಲಿದ್ದು, ಒಂದು ಯುನಿಟ್ ಗೆ ರೂ.1 ರಿಂದ ಒಂದೂವರೆ ರೂಪಾಯಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಏಪ್ರಿಲ್​​​ನಿಂದಲೇ ಹೊಸ ಏರಿಕೆ ದರ ಅನ್ವಯವಾಗುವ ಸಾಧ್ಯತೆ ಇದೆ.

ವಿದ್ಯುತ್ ಖರೀದಿ, ಪೂರೈಕೆಗೆ ಅಧಿಕ ವೆಚ್ಚ, ಕಲ್ಲಿದ್ದಲು ಸಂಗ್ರಹಣೆ ವೆಚ್ಚ ಸೇರಿ ಸರ್ಕಾರಕ್ಕೆ ಹೆಚ್ಚುವರಿ ಹಣಕಾಸಿನ ಹೊಡೆತ ಬೀಳುತ್ತಿದೆ. ಹೀಗಾಗಿ ಆರ್ಥಿಕ ಒತ್ತಡ ಸರಿ ದೂಗಿಸಲು ವಿದ್ಯುತ್ ದರ ಹೆಚ್ಚಳಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ ಎಂದು ಹೇಳಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page