Home ರಾಜ್ಯ ಮೈಸೂರು ಸಿದ್ಧರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ; ಸಂಸದ ಯದುವೀರ್‌ಗೆ ಪ್ರತಾಪ ಸಿಂಹ ಟಕ್ಕರ್!‌

ಸಿದ್ಧರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ; ಸಂಸದ ಯದುವೀರ್‌ಗೆ ಪ್ರತಾಪ ಸಿಂಹ ಟಕ್ಕರ್!‌

0

ಮೈಸೂರು – ಕೊಡಗು ಕ್ಷೇತ್ರದ ಟಿಕೆಟ್‌ ಕಳೆದುಕೊಂಡ ಹತಾಶೆಯಲ್ಲಿರುವ ಮಾಜಿ ಸಂಸದ ಪ್ರತಾಪ ಸಿಂಹ ಅವರು ಇತ್ತೀಚೆಗೆ ಪಕ್ಷದ ನಾಯಕತ್ವದ ಕುರಿತು ಒಂದಲ್ಲ ಒಂದು ವಿಮರ್ಶಾತ್ಮಕ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಇದೀಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಿರ್ಧಾರವೊಂದನ್ನು ಹಾಡಿ ಹೊಗಳಿದ್ದಾರೆ.

ಚಾಮುಂಡಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ ಸಿಂಹ ಹಾಲಿ ಸಂಸದ ಯದುವೀರ್‌ ಒಡೆಯರ್‌ ಅವರಿಗೆ ಪರೋಕ್ಷವಾಗಿ ಕಾಲೆಳೆದಿದ್ದಾರೆ.

ಚಾಮುಂಡಿ ಬೆಟ್ಟದ ಪ್ರಾಧಿಕಾರ ಸ್ಥಾಪನೆಗೆ ರಾಜಮನೆತನ ವಿರೋಧಿಸುತ್ತಿರುವ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಕೆಲವು ಸೈದ್ದಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ. ಬೆಟ್ಟದ ಮೇಲಿನ ವಿಪರೀತ ಬೆಳವಣಿಗೆಗಳನ್ನು ನಿಯಂತ್ರಿಸಲು ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರ ರಚಿಸುವ ಅಗತ್ಯವಿದೆ. ಬೆಟ್ಟದ ವ್ಯಾಪ್ತಿಯಲ್ಲಿ ಪೋಲಿಸ್‌‍ ಠಾಣೆ ಹಾಗೂ ಆಸ್ಪತ್ರೆ ಆಗಬೇಕು. ಇದೆಲ್ಲಾ ಆಗಲು ಒಂದು ಪ್ರಾಧಿಕಾರ ಬೇಕೇ ಬೇಕು ಎಂದು ಅವರು ಮುಖ್ಯಮಂತ್ರಿಯವರ ನಿರ್ಧಾರವನ್ನು ಸಮರ್ಥಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ನಾವು ಪ್ರಾಧಿಕಾರ ಬೇಕೆಂದು ಕೇಳಿದ್ದೆವು. ಸಿದ್ದರಾಮಯ್ಯನವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಖಂಡಿತ ಇದು ಒಳ್ಳೆಯ ಕೆಲಸ. ಆಸ್ತಿ ಹೊಡೆದಾಟದ ಬಗ್ಗೆ ಮಾತನಾಡುವುದಿಲ್ಲ. ಆದರೆ ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂದರು.

ಅಮೃತ ಯೋಜನೆಯಡಿ ಕುಡಿಯುವ ನೀರು ಚಾಮುಂಡಿ ಬೆಟ್ಟಕ್ಕೆ ತಲುಪದಿರಲು ಕಾರಣ ಯಾರು ಎನ್ನುವುದನ್ನು ನಾನು ಮಾತಿನ ಮೂಲಕ ಹೇಳಿದರೆ ವಿವಾದವಾಗುತ್ತದೆ. ಪೈಪ್‌ಲೈನ್‌ ಕೆಲಸ ಪ್ರಸ್ತುತ ಎಲ್ಲಿ ನಿಂತಿದೆ ಎಂದು ನೀವೆ ಹೋಗಿ ಹುಡುಕಿ ಎನ್ನುವ ಮೂಲಕ ಪರೋಕ್ಷವಾಗಿ ಹೆಸರು ಹೇಳದೆ ಸಂಸದ ಯದುವೀರ್‌ ಒಡೆಯರ್‌ ಅವರನ್ನು ಪ್ರತಾಪ್‌ ಸಿಂಹ ಟೀಕಿಸಿದರು.

You cannot copy content of this page

Exit mobile version