ಸಿದ್ದರಾಮಯ್ಯರನ್ನು ನಿಂದಿಸಿದ್ದ ಮುಖ್ಯಪೇದೆ ಅಮಾನತು

ವಿಜಯಪುರ : ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ನಿಂದಿಸಿದಂತೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದ ಮುಖ್ಯಪೇದೆಯನ್ನು ಅಮಾನತುಗೊಳಿಸಲಾಗಿದೆ.

ವಿಜಯಪುರ ಗ್ರಾಮಾಂತರ ಠಾಣೆಯ  ರಾಜಶೇಖರ ಖಾನಾಪುರ ಎನ್ನುವ ಪೊಲೀಸ್‌ ಪೇದೆಯೊಬ್ಬರು ವಿಪಕ್ಪ ನಾಯಕ ಸಿದ್ದರಾಮಯ್ಯನವರನ್ನು ಹಿಯಾಳಿಸುವಂತೆ ಒಂದು ವೀಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇದರಿಂದ ಪೋಲಿಸ್‌ ಪೇದೆಯ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದ ಮುಖ್ಯಪೇದೆ ರಾಜಶೇಖರ್‌ನನ್ನು ಅಮಾನತುಗೊಳಿಸುವಂತೆ ವಿಜಯಪುರದ ಜಿಲ್ಲಾ ವರಿಷ್ಠಾಧಿಕಾರಿ ಆನಂದ್‌ ಆದೇಶ ಹೊರಡಿಸಿದ್ದಾರೆ. ಎಸ್‌ಪಿ ಅವರ ಈ ಆದೇಶವನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ರವರು ಸ್ವಾಗತಿಸಿದ್ದಾರೆ.

ಇದನ್ನೂ ನೋಡಿ : ಬಹುತ್ವದ ನೆಲೆಯಾಗಿದ್ದ ತುಳುನಾಡು ಸಂಘರ್ಷದ ಕುಲುಮೆಯಾಗಿದ್ದು ಹೇಗೆ? ಈ ಕುರಿತು ವಿವರಿಸಿದ್ದಾರೆ ಜೆ.ಎನ್.ಯು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಪುರುಷೋತ್ತಮ ಬಿಳಿಮಲೆಯವರು. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

https://www.facebook.com/peepaltvkannada/videos/1304271730409022

Related Articles

ಇತ್ತೀಚಿನ ಸುದ್ದಿಗಳು