Saturday, June 29, 2024

ಸತ್ಯ | ನ್ಯಾಯ |ಧರ್ಮ

ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ಜಾಮೀನು

ನವದೆಹಲಿ: ಹತ್ರಾಸ್ ನಲ್ಲಿ ನಡೆದ ಹತ್ತೊಂಬತ್ತು ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದ ವರದಿಗಾಗಿ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

ಕಳೆದ ಎರಡು ವರ್ಷಗಳಿಂದ ಪೊಲೀಸ್ ಬಂಧನದಲ್ಲಿ ಇದ್ದ ಎಸ್ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಬೇಲ್ ನೀಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರು ಸಿದ್ದೀಕ್ ಅವರಿಗೆ ಮುಂದಿನ ಮೂರು ವಾರಗಳ ಕಾಲ ದೆಹಲಿ ಪೊಲೀಸರಿಗೆ, ಆ ನಂತರ ಕೇರಳ ಪೊಲೀಸರಿಗೆ ವರದಿ ಮಾಡಲು ಆದೇಶ ನೀಡಿದ್ದಾರೆ.

ಸಪ್ಟೆಂಬರ್ 14, 2020 ರಂದು ಹತ್ತೊಂಬತ್ತು ವರ್ಷದ ದಲಿತ ಬಾಲಕಿಯ ಮೇಲೆ ನಾಲ್ಕು ಮಂದಿಯಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಎರಡು ವಾರಗಳ ನಂತರ ಬಾಲಕಿ ಸಾವನ್ನಪ್ಪಿ, ಹೆಣವನ್ನು ಕುಟುಂಬದ ಅನುಮತಿ ಇಲ್ಲದೆ ಬಲವಂತವಾಗಿ ಪೊಲೀಸರು ದಹನ ಮಾಡಿದ್ದರು. ಪ್ರಕರಣದಲ್ಲಿ ಸರ್ಕಾರದ ಪ್ರಭಾವವನ್ನು ವಿರೋಧಿಸಿ ಆದಿತ್ಯನಾಥ್ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದವು.

ಈ ಪ್ರಕರಣವನ್ನು ವರದಿ ಮಾಡಲು ಉತ್ತರ ಪ್ರದೇಶಕ್ಕೆ ಹೋಗಿದ್ದ ಮಲಯಾಳಂ ಸುದ್ದಿ ಮಾಧ್ಯಮ ಅಳಿಮುಖಂನ ವರದಿಗಾರ ಸಿದ್ದೀಕ್ ಕಪ್ಪನ್ ಅವರನ್ನು ಯುಎಪಿಎ ಕಾಯ್ದೆಯಡಿ ಎರಡು ವರ್ಷಗಳ ವರೆಗೆ ಬಂಧಿಸಿಡಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು