Wednesday, April 16, 2025

ಸತ್ಯ | ನ್ಯಾಯ |ಧರ್ಮ

ಕೃಷಿಹೊಂಡಕ್ಕೆ ಕಾಲು ಜಾರಿ‌ ಬಿದ್ದು ಅಕ್ಕ ತಂಗಿಯರ ಸಾವು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಅಕ್ಕತಂಗಿಯರ ದಾರುಣ ಅಂತ್ಯಕಂಡಿದ್ದಾರೆ.ಕೃಷಿಹೊಂಡದಲ್ಲಿ ಕಾಲು ಜಾರಿ‌ಬಿದ್ದು ಅಕ್ಕ ತಂಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಕುರಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರಾಧಾ(17), ಸಾಹಿತಿ(14) ಮೃತ ದುರ್ದೈವಿಗಳು. ಬೇಸಿಗೆ ರಜೆ ಇದ್ದ ಕಾರಣ ತಾಯಿಯ ಜೊತೆ ತೋಟದಲ್ಲಿ ಕೆಲಸ ಮಾಡುವಾಗ ಕೃಷಿ ಹೊಂಡಕ್ಕೆ ಆಳವಡಿಸಿದ್ದ ಪೈಪ್‌ ಸರಿ ಮಾಡಲು ಹೋಗಿ ಅಕ್ಕ ತಂಗಿ ಇಬ್ಬರು ಕಾಲು ಜಾರಿ ಬಿದ್ದಿದ್ದಾರೆ.

ಇಬ್ಬರು ಮಕ್ಕಳೇ ಜೀವನಾಧಾರ ಅಂತ ಬದುಕು ಕಟ್ಟಿಕೊಂಡಿದ್ದ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಚೇಳೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page