Wednesday, September 3, 2025

ಸತ್ಯ | ನ್ಯಾಯ |ಧರ್ಮ

ಮತ್ತೆ ಮರುಜೀವ ಪಡೆಯುವತ್ತ ಸೌಜನ್ಯ ಪ್ರಕರಣ!; ಸಾಕ್ಷಿ ದೂರುದಾರ ಚಿನ್ನಯ್ಯರನ್ನು ಮತ್ತೆ ಕಸ್ಟಡಿಗೆ ತೆಗೆದುಕೊಂಡ ಎಸ್ಐಟಿ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಜನರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವಶದಲ್ಲಿರುವ ಸಾಕ್ಷಿ ದೂರುದಾರ ಚಿನ್ನಯ್ಯರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್ಐಟಿ ಮತ್ತಷ್ಟು ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಇನ್ನೂ ಮೂರು ದಿನಗಳ ಕಸ್ಟಡಿಗೆ ಕೇಳಿಕೊಂಡಿತ್ತು. ಎಸ್ಐಟಿ ಮನವಿಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯವು ಸೆಪ್ಟೆಂಬರ್ 6 ರೈ ವರೆಗೂ ಎಸ್ಐಟಿ ಕಸ್ಟಡಿಗೆ ನೀಡಿದೆ.

ಕಳೆದ ಆ. 23 ರಂದು ಎಸ್.ಐ.ಟಿ ತಂಡ ಚಿನ್ನಯ್ಯ ತಂದಿದ್ದ ಬುರುಡೆಯ ವಿಚಾರದಲ್ಲಿ ಬಂಧಿಸಿದ್ದರು. ಅದೇ ದಿನ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಸೆ.3 ರವರೆಗೆ ಆತನನ್ನು ಎಸ್.ಐ.ಟಿ ವಶಕ್ಕೆ ಒಪ್ಪಿಸಿತ್ತು.

ಇದೀಗಷ್ಟೇ ಇಂದು ಮುಂಜಾನೆ ಸೌಜನ್ಯ ಪ್ರಕರಣದಲ್ಲಿ ಪ್ರಮುಖ ಹೆಸರಾಗಿದ್ದ ಉದಯ್ ಕುಮಾರ್ ಜೈನ್ ಅವರನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ. ಈಗಾಗಲೇ ಉದಯ್ ಕುಮಾರ್ ಜೈನ್ ಗೆ ಸಿಬಿಐ ಮತ್ತು ಪೊಲೀಸ್ ವಿಚಾರಣೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ದರೂ ಮತ್ತೆ ವಿಚಾರಣೆಗೆ ಒಳಪಡಿಸಿದೆ. ಅಷ್ಟೇ ಅಲ್ಲದೆ ಸೌಜನ್ಯಾ ಪ್ರಕರಣದಲ್ಲೂ ನಾನೇ ಪ್ರಮುಖ ಸಾಕ್ಷಿ ಎಂದು ಹೇಳಿಕೊಂಡಿದ್ದ ಚಿನ್ನಯ್ಯ ಈ ಕೇಸಿಗೂ ಪ್ರಮುಖ ಸಾಕ್ಷಿ ಆಗಿರುವ ಹಿನ್ನೆಲೆಯಲ್ಲಿ ಚಿನ್ನಯ್ಯರನ್ನು ಎಸ್ಐಟಿ ಕಸ್ಟಡಿಗೆ ತೆಗೆದುಕೊಂಡಿದೆ.

ಗುಪ್ತ ಕೋಣೆಯಲ್ಲಿ ಆರೋಪಿ ಚಿನ್ನಯ್ಯನನ್ನು ವಿಚಾರಣೆ ನಡೆಸಿದ ಬಳಿಕ, ಮತ್ತೆ ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಮನವಿ ಮಾಡಿದ್ದರು. ಈ ಬೆನ್ನಲ್ಲೇ ನ್ಯಾಯಾಲಯ ಎಸ್ಐಟಿಗೆ ಮತ್ತೆ 4 ದಿನ (ಸೆ.6 ವರೆಗೆ) ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page