Wednesday, July 30, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ : ಹೆಣ ಹೂತಿಟ್ಟ ಜಾಗಕ್ಕೆ ದೂರುದಾರನನ್ನು ಕರೆತಂದ ಎಸ್ಐಟಿ ತಂಡ; ಉತ್ಖನನ ಶುರು

ಧರ್ಮಸ್ಥಳದಲ್ಲಿ ಹೂತಿಟ್ಟ ಮೃತದೇಹಗಳನ್ನು ತೆಗೆಯುವ ಪ್ರಕ್ರಿಯೆಗೆ ಈಗಷ್ಟೇ ಚಾಲನೆ ಸಿಕ್ಕಿದೆ. ನೇತ್ರಾವತಿ ನದಿ ತಟದಲ್ಲೇ ಇರುವ ಜಾಗದಲ್ಲಿ ಸ್ಥಳೀಯ ಜನರ ಸಹಾಯದಿಂದ ಎಸ್ಐಟಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಮೊದಲ ದಿನದಂದು ಹಲವು ಜಾಗಗಳಲ್ಲಿ ನಾಲ್ಕು ಅಡಿ ಆಳದಲ್ಲಿ ಮಣ್ಣು ತಗೆದರೂ ಯಾವುದೇ ಮೃತದೇಹ ಸಿಗದ ಹಿನ್ನೆಲೆಯಲ್ಲಿ ಎರಡನೇ ದಿನವಾದ ಇಂದು ಮತ್ತೆ ಚಾಲನೆ ಸಿಕ್ಕಿದೆ.

ಈಗಾಗಲೇ 13 ಕಡೆಗಳಲ್ಲಿ ದೂರುದಾರ ವ್ಯಕ್ತಿ ಗುರುತಿಸಿದ ಕಡೆಗಳಲ್ಲಿ ಉತ್ಖನನ ಶುರುವಾಗಿದೆ. 4ಅಡಿ ಆಳದಲ್ಲಿ ಸ್ಥಳೀಯರ ಕೈಯಲ್ಲಿ ಗುಂಡಿಯನ್ನ ತಗಿಸಿದ್ದಾರೆ. ನಂತರ 8 ಅಡಿ ಆಳಕ್ಕೆ ಹಿಟಾಚಿಯಿಂದ ಗುಂಡಿ ತೆಗೆದಿದ್ದಾರೆ. ಆದರೆ ಈವರೆ ಆ ಜಾಗಗಳಲ್ಲಿ ಅಸ್ತಿಪಂಜರ ಕಂಡುಬಂದಿರಲಿಲ್ಲ.

ಸಧ್ಯ ನೇತ್ರಾವತಿ ಸ್ನಾನಘಟ್ಟಕ್ಕೆ ದೂರುದಾರನನ್ಞು ಕರೆತಂದಿರುವ ಎಸ್ಐಟಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಇಂದೂ ಉತ್ಖನನ ಕಾರ್ಯ ಮುಂದುವರೆಸಿದ್ದಾರೆ.

ವಿಶೇಷವೆಂದರೆ ಈ ದಿನ ದೂರುದಾರ ವ್ಯಕ್ತಿಯು ಯಾವ ಜಾಗದಿಂದ ತಲೆಬುರುಡೆ ಹೊರ ತೆಗೆದಿದ್ದರೋ ಅದೇ ಜಾಗದಲ್ಲಿ ಅಗೆಯುವ ಕೆಲಸ ಶುರುವಾಗಿದೆ. ಹೀಗಾಗಿ ಇಂದು ಕೆಲವು ಕಡೆಗಳಲ್ಲಾದರೂ ಮೃತದೇಹದ ಅಸ್ಥಿಪಂಜರ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page