Saturday, June 15, 2024

ಸತ್ಯ | ನ್ಯಾಯ |ಧರ್ಮ

ಸ್ಲಂ ಜನಾಂದೋಲನ ಕರ್ನಾಟಕ ವತಿಯಿಂದ ಒಂದು ದಿನದ ʼಸಂವಾದʼ ಕಾರ್ಯಕ್ರಮ

ಬೆಂಗಳೂರು: ನಗರದ ಎಸ್.ಸಿ.ಎಂ ಹೌಸ್‌ನಲ್ಲಿ ಅಕ್ಟೋಬರ್‌ 20 ರಂದು “ಪ್ರಸಕ್ತ ವಿಷಯಗಳು ಮತ್ತು ಸ್ಲಂ ಯುವಜನರು” ಎಂಬ ವಿಷಯದಡಿ ಸ್ಲಂ ಜನಾಂದೋಲನ ಕರ್ನಾಟಕವು ಒಂದು ದಿನದ “ಸಂವಾದ”ವನ್ನು ಹಮ್ಮಿಕೊಂಡಿದೆ.

ಈ ಸಂವಾದವು ಬೆಳಗ್ಗೆ 10:30 ರಿಂದ ಸಂಜೆ 5:00 ಗಂಟೆಯವರೆಗು ನಡೆಯಲಿದ್ದು ಅನೇಕ ಉಪನ್ಯಾಸ ಮತ್ತು ಚರ್ಚೆಗಳು ನಡೆಯಲಿವೆ.

ಬೆಳಗ್ಗೆ 10:30 ರಿಂದ 12:00ರ ವರೆಗೆ ʼಸ್ಲಂ ಯುವಜನರು ಹಾಗು ಫ್ಯಾಸಿಸಂ, ನಿರುದ್ಯೋಗʼದ ಕುರಿತು ಪೀಪಲ್‌ ಮೀಡಿಯಾದ ಸಂಪಾದಕರಾದ ಹರ್ಷಕುಮಾರ್‌ ಕುಗ್ವೆ ಅವರು ಉಪನ್ಯಾಸ ನೀಡಲಿದ್ದಾರೆ. ಇವರ ನಂತರ ಕ್ರಮವಾಗಿ ಸ್ಲಂ ಯುವಜನರು ಹಾಗು ಬೆಲೆ ಏರಿಕೆ ಮುಖಾಮುಖಿ ವಿಷಯದ ಕುರಿತು ಕರ್ನಾಟಕ ಹೈಕೋರ್ಟಿನ ವಕೀಲರಾದ ವಿನಯ್ ಶ್ರೀನಿವಾಸ್‌, ಅರುಣ್, ತಿರುಮಲಯ್ಯ ಮತ್ತು ರಾಜು ತಂಡದವರು ಹೋರಾಟದ ಹಾಡುಗಳನ್ನು ಹಾಡಲಿದ್ದಾರೆ.

ಊಟದ ವಿರಾಮದ ನಂತರ ದೇಶದಲ್ಲಿ ದಲಿತರು, ಮಹಿಳೆಯರು, ಮಕ್ಕಳು ಮತ್ತು ಲೈಂಗಿಕಕಾರ್ಯಕರ್ತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತು ಚರ್ಚೆ ನಡೆಯಲ್ಲಿದ್ದು ಇದರಲ್ಲಿ “ದಲಿತರು” ಎನ್ನುವ ಕುರಿತು ಎ. ನರಸಿಂಹಮೂರ್ತಿ- ಸ್ಲಂ ಜನಾಂದೋಲನ ಕರ್ನಾಟಕ, “ಮಹಿಳೆಯರು” ಎನ್ನುವ ಕುರಿತು ಮಧುಭೂಷಣ್, ಸಿಯಡ್ಸ್ ಬೆಂಗಳೂರು, “ಲೈಂಗಿಕ ಕಾರ್ಯಕರ್ತರು” ಎನ್ನುವ ಕುರಿತು ಗೀತಾ- ಸಾಧನ ಮಹಿಳಾ ಸಂಘ ಬೆಂಗಳೂರು ಹಾಗೂ “ಮಕ್ಕಳು” ಎನ್ನುವ ಕರಿತು ಪೂರ್ಣ- ಪರ್ಯಾಯ ಕಾನೂನು ವೇದಿಕೆ ಬೆಂಗಳೂರು ಇವರು ಮಾತನಾಡಲಿದ್ದಾರೆ

ಈ ಕಾರ್ಯಕ್ರಮವನ್ನು ವಿನುತಾ, ಕೆಂಪರಾಜ್ ಮತ್ತು ತೇಜಸ್ ಕುಮಾರ್ ನಿರ್ವಹಣೆ ಮಾಡಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು