Home ಬೆಂಗಳೂರು ಮತ್ತೇರಿಸುವ ಮುತ್ತಿಗೆ ಇನ್ನು ಅಡೆತಡೆ ಇಲ್ಲ ; ಬೆಂಗಳೂರಿಗೆ ಬರ್ತಾ ಇದೆ “ಸ್ಮೂಚ್ ಕ್ಯಾಬ್”!

ಮತ್ತೇರಿಸುವ ಮುತ್ತಿಗೆ ಇನ್ನು ಅಡೆತಡೆ ಇಲ್ಲ ; ಬೆಂಗಳೂರಿಗೆ ಬರ್ತಾ ಇದೆ “ಸ್ಮೂಚ್ ಕ್ಯಾಬ್”!

0

ಇದೀಗ ಜೋಡಿಗಳ ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಮ್ಮ ಸಂಗಾತಿಗೆ ಮುತ್ತಿಡುತ್ತಾ ಸಾಗಲು ಪ್ರಯಾಣದಲ್ಲೇ ಪ್ರಣಯವಾಗಲು ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಹೊಸ ಸ್ಮೂಚ್ ಕ್ಯಾಬ್ ವ್ಯವಸ್ಥೆ ಆರಂಭಿಸಿದೆ. ಹೌದು. ಪ್ರೇಮಿಗಳಿಗೆಂದೇ ಹೇಳಿ ಮಾಡಿಸಿದ ಈ ಕ್ಯಾಬ್ ಫೆಸಿಲಿಟಿ ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಬೀದಿಗಿಳಿಯಲಿದೆ.

ಇನ್ಮೇಲೆ ಯಾರೂ ಸಹ ತಮ್ಮ ಪ್ರಣಯದ ಸಮಯವನ್ನು ಆತ್ಯಾಪ್ತರೊಂದಿಗೆ ಯಾವುದೇ ಅಡತಡೆ ಇಲ್ಲದೆ ಕಳೆಯಲು ಬಯಸುತ್ತಾರೋ ಅವರಿಗೆ ಈ ಕ್ಯಾಬ್ ವ್ಯವಸ್ಥೆ ಜಾರಿಯಾಗಿದೆ. ವಿಶೇಷವಾಗಿ ಈ ಕ್ಯಾಬ್ ಪ್ರೇಮಿಗಳಿಗಾಗಿಯೇ ಹೊಸ ಸ್ಟಾರ್ಟ್ ಅಪ್ ಕಂಪೆನಿ ಶುರು ಮಾಡಿದೆ.

ಸ್ಮೂಚ್ ಕ್ಯಾಬ್ ವಿಶೇಷತೆಗಳು
ಬೆಂಗಳೂರಿನ ರಸ್ತೆಗಳಲ್ಲಿ ಈಗಾಗಲೇ ತಮ್ಮ ಸರ್ವೀಸ್ ಕೊಡ್ತಿರೋ ಓಲಾ, ಉಬರ್, ರ್ಯಾಪಿಡೋ ರೀತಿ ಕ್ಯಾಬ್ ಹತ್ತಿ ಇಷ್ಟು ಸಮಯದೊಳಗೆ ನಿಗದಿತ ಸ್ಥಳ ಅಥವಾ ಹೋಗಬೇಕಿರುವ ಸ್ಥಳಕ್ಕೆ ತಲುಪುವುದು ಈ ಸ್ಮೂಚ್ ಕ್ಯಾಬ್ ಉದ್ದೇಶವಲ್ಲ. ಪ್ರಣಯ ಪಕ್ಷಿಗಳ ಖಾಸಗಿತನಕ್ಕೆ ಹೆಚ್ಚು ಆದ್ಯತೆ ಕೊಡುವುದೇ ಇದರ ಮುಖ್ಯ ಉದ್ದೇಶವಾಗಿರುವುದರಿಂದ ಕ್ಯಾಬ್‌ನಲ್ಲಿ ಗುರಿಗಿಂತ ಜೋಡಿಗಳ ಕಂಫರ್ಟ್ ಮುಖ್ಯ. ಅವರ ಖಾಸಗಿ ಸಮಯ ಮುಖ್ಯ. ಉದಾಹರಣೆಗೆ ಚಂದ್ರಾ ಲೇಔಟ್ ನಿಂದ ವಿಜಯನಗರಕ್ಕೆ 15 ನಿಮಿಷಗಳ ಅಂದಾಜು ಪ್ರಯಾಣ ಆದರೆ, ಈ ಸ್ಮೂಚ್ ಕ್ಯಾಬ್ ನಲ್ಲಿ ಸಮಯದ ಮಿತಿ ಇಲ್ಲ. ಬೆಳಿಗ್ಗೆ ಹತ್ತಿ ಸಂಜೆಗೆ ಬೇಕಾದರೂ ತಲುಪಬೇಕಾದ ಜಾಗ ತಲುಪಬಹುದು. ಆದರೆ ಜೇಬು ಗಟ್ಟಿ ಇರಬೇಕಷ್ಟೇ.

ಈ ಕ್ಯಾಬ್ ಮೂಲಕ ಪ್ರಯಾಣ ಮಾಡುವ ಜೋಡಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕಾರಿನ ವಿಂಡೋ ಒಳಗೆ ಕರ್ಟನ್ ಬಳಸಲಾಗುತ್ತದೆ. ಇನ್ನು ಡ್ರೈವರ್ ಹಾಗೂ ಪ್ರಯಾಣಿಕರ ನಡುವೆ ತಡೆಗೋಡೇ ರೀತಿ ವಿನ್ಯಾಸ ಮಾಡಲಾಗಿರುತ್ತದೆ. ಎಸಿ, ಶಬ್ದಗಳ ಕಿರಿಕಿ ತಪ್ಪಿಸಲು ನಾಯ್ಸಿ ಕ್ಲಿಯರೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕ್ಯಾಬ್‌ನಲ್ಲಿದೆ.

ಎಲ್ಲಾ ಹೊಸ ಪ್ರಯೋಗಗಳಂತೆಯೇ ಈ ಕ್ಯಾಬ್ ಸರ್ವೀಸ್‌ಗೆ ಬಾರಿ ವಿರೋಧವೂ ವ್ಯಕ್ತವಾಗುತ್ತಿದೆ. ಇದರ ದುರ್ಬಳಕೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಲವರು ಎಚ್ಚರಿಸಿದ್ದಾರೆ. ಭಾರಿ ವಿರೋಧ ವ್ಯಕ್ತವಾಗುತ್ತಿದ್ದರೂ ಸ್ಮೂಚ್ ಕ್ಯಾಬ್ ಬುಕಿಂಗ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಬೆಂಗಳೂರಲ್ಲಿ ತನ್ನ ಮೊದಲ ಸರ್ವೀಸ್ ಗೆ ಮುಂದಾಗಿರುವ ಈ ಸ್ಟಾರ್ಟ್ ಅಪ್ ಕಂಪನಿ ಮುಂದೆ ಮುಂಬೈ ಹಾಗೂ ದೆಹಲಿಯಲ್ಲಿ ಈ ಕ್ಯಾಬ್ ಸರ್ವೀಸ್ ವಿಸ್ತರಿಸಲು ಮುಂದಾಗಿದೆ.

You cannot copy content of this page

Exit mobile version