ಬೆಂಗಳೂರು,ಅಕ್ಟೋಬರ್.16: ಇಸ್ರೇಲ್ ಹಾಗೂ ಪ್ಯಾಲಿಸ್ತೇನಿನ ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಇಸ್ರೇಲಿನ ಸತತ ದಾಳಿ ಪ್ಯಾಲೆಸ್ತೇನಿನ ಜನತೆ ತತ್ತರಿಸಿ ಹೋಗಿದ್ದಾರೆ.
ಪ್ಯಾಲೆಸ್ತೇನ್ ಮೇಲಿನ ಇಸ್ರೇಲ್‌ನ ಆಕ್ರಮಣಕಾರಿ ನಿಲುವನ್ನು ಪ್ರತಿಭಟಿಸಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಇನ್ನೂರಕ್ಕೂ ಅಧಿಕ ಬೆಂಗಳೂರಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಪ್ಯಾಲಿಸ್ತೇನಿನ ಸ್ವಾತಂತ್ರ್ಯದ ಪರ ಬರಹಗಳನ್ನು ಹಿಡಿದು ನಿಂತಿದ್ದ ಇವರನ್ನು ಪೊಲೀಸರು ಬಂಧಿಸಿದ್ದಾರೆ.
