Thursday, April 3, 2025

ಸತ್ಯ | ನ್ಯಾಯ |ಧರ್ಮ

ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸುಪಾರಿ; ಪೊಲೀಸರಿಗೆ ಶರಣಾದ ಸೋಮ ಮತ್ತು ಗ್ಯಾಂಗ್

ಸಚಿವ ರಾಜಣ್ಣ ಪುತ್ರ, ವಿಧಾನ ಪರಿಷತ್​ ಸದಸ್ಯ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳು ಬುಧವಾರ ತುಮಕೂರಿನ ಕ್ಯಾತ್ಸಂದ್ರ ಪೊಲೀಸರಿಗೆ ಶರಣಾಗಿದ್ದಾರೆ. ಬುಧವಾರ ಸಂಜೆ ವೇಳೆಗೆ ಸ್ಪೋಟಕ ಆಡಿಯೋದಲ್ಲಿ ಸೂಚಿಸಲಾದ ಸೋಮ ಮತ್ತು ಅಮಿತ್ ಪೊಲೀಸರ ಮುಂದೆ ಶರಣಾಗಿದ್ದಾರೆ.

ಅನಾಮಧೇಯ ಮೂಲಗಳಿಂದ ಸಿಕ್ಕ ಆಡಿಯೋ ಹಾಗೂ ಆಡಿಯೋದಲ್ಲಿ ರಾಜೇಂದ್ರ ಸುಪಾರಿ ಬಗ್ಗೆ ನಡೆಸಿದ್ದ ಮಾತುಕತೆ ಮಾಹಿತಿ ಮೇರೆಗೆ ಸೋಮ,‌ ಭರತ, ಅಮಿತ್, ಗುಂಡ, ಯತೀಶ್ ಕೊಲೆಗೆ ಸಂಚು ರೂಪಿಸಿರುವುದು ಬಹಿರಂಗವಾಗಿದ್ದು, ಈ ಸಂಬಂಧ ಈ ಐವರ ವಿರುದ್ಧ ಕ್ಯಾತ್ಸಂದ್ರ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಚುರುಕುಗೊಳಸಿದ್ದಾರೆ.

ರಾಜ್ಯದಲ್ಲಿ ಹನಿಟ್ರಾಪ್ ಸುದ್ದಿ ಹೆಚ್ಚು ಓಡಾಡುತ್ತಿದ್ದ ಹಂತದಲ್ಲೇ ಎಂಎಲ್ಸಿ ರಾಜೇಂದ್ರ ಹತ್ಯೆ ಸಂಚು ಹೆಚ್ಚು ಮಹತ್ವ ಪಡೆದುಕೊಂಡು ಸುದ್ದಿಯಲ್ಲಿತ್ತು. ಈ ನಡುವೆ ಹತ್ಯೆಗೆ ಸುಪಾರಿ ಯಾರಿಂದ ಬಂದಿದೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿಗಳು ತಾವಾಗಿಯೇ ಶರಣಾಗಿರುವ ಹಿನ್ನೆಲೆಯಲ್ಲಿ ಸುಪಾರಿ ಯಾರು ಕೊಟ್ಟಿದ್ದು ಮತ್ತು ಅದಕ್ಕೆ ಕಾರಣ ಏನು ಎಂಬುದು ಸಧ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜೇಂದ್ರ ಹತ್ಯೆಗೆ 70 ಲಕ್ಷ ರೂ. ಒಟ್ಟಾರೆ ಸುಮಾರಿಗೆ ಮಾತುಕತೆ ಮಾಡಿರುವ ಬಗ್ಗೆ ರಾಜೇಂದ್ರ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ 5 ಲಕ್ಷ ರೂ. ಅಡ್ವಾನ್ಸ್ ಪಡೆದಿರೋ ಸೋಮನನ್ನ ಈಗ ಪೊಲೀಸರು ವಿಚಾರಣೆಗೊಳಡಿಸಲಾಗಿದೆ.

ಪ್ರಕರಣದ ಮತ್ತೊಬ್ಬ ಆರೋಪಿ ಭರತ ಎಂಬವುನನ್ನು ಪೊಲೀಸರು ಬಂಧಿಸಿದ್ದಾರೆ. ಭರತ ವಿರುದ್ಧ ಕೊಲೆಯ ಸ್ಕೆಚ್​ ಬಗ್ಗೆ ಮಾರ್ಗದರ್ಶನ ಮಾಡಿದ್ದ ಎಂಬ ಆರೋಪವಿದೆ. ಪೊಲೀಸರ ದಿಕ್ಕು ತಪ್ಪಿಸುವುದು ಹಾಗೂ ಸಾಕ್ಷ್ಯ ಸಿಗದ್ದಂತೆ ಹತ್ಯೆ ಮಾಡಲು ಸ್ಕೇಚ್ ಹಾಕಿದ್ದನು ಎನ್ನಲಾಗಿದೆ. ಸೋಮನ ಅಣತೆಯಂತೆ ಭರತ ಗ್ಯಾಂಗ್​ ಅನ್ನು ಲೀಡ್ ಮಾಡುತ್ತಿದ್ದನು.

ಭರತ್ ಗ್ಯಾಂಗ್​ ಹಾಗೂ ಸೋಮ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದನು. ಯಾರನ್ನ, ಎಲ್ಲಿ, ಯಾವಾಗ ಭೇಟಿ ಮಾಡ್ಬೇಕು ಅಂತ ಸೂಚನೆ ಕೊಡುತ್ತಿದ್ದನಂತೆ. ರಾಜೇಂದ್ರನ ಚಲನವಲನ ಗಮನಿಸಿ ಸೋಮನಿಗೆ ಭರತ ಮಾಹಿತಿ ನೀಡುತ್ತಿದ್ದನು ಎನ್ನಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page