ಬೆಂಗಳೂರು : ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಜಾತಿಗಣತಿ ಸಮೀಕ್ಷೆ (Caste Survey) ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ಈ ಸಮೀಕ್ಷೆಯನ್ನು ಮುಂದೂಡುವಂತೆ ಕೆಲ ಸಚಿವರು (Ministers) ಪಟ್ಟು ಹಿಡಿದ ಪ್ರಸಂಗ ನಡೆಯಿತು.
ಸಮೀಕ್ಷೆ ಸಂಬಂಧ ಸಾಕಷ್ಟು ಗೊಂದಲ ಮೂಡುತ್ತಿದೆ. ತಯಾರಿ ಕೂಡ ಸರಿಯಾಗಿ ಆಗಿಲ್ಲ. ಹಾಗಾಗಿ ಮುಂದೂಡುವಂತೆ ಹೇಳಿರುವ ಕೆಲ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮೀಕ್ಷೆ ಗೊಂದಲ ಸಂಬಂಧ ಸಮಾಲೋಚನೆ ನಡೆಸಿದರು.ತಾಂತ್ರಿಕ ದೋಷ ಸರಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗುವುದು. ನಾಳೆ ಜಿಲ್ಲಾಧಿಕಾರಿಗಳ ಸಭೆ ನಡೆಸಿ ತಾಂತ್ರಿಕ ಸಮಸ್ಯೆ ಸರಿಪಡಿಸಲು ಚರ್ಚೆ ನಡೆಸಲು ಉಸ್ತುವಾರಿ ಸಚಿವರಿಗೆ ಸಿಎಂ ಸೂಚನೆ ನೀಡಿದರು.
ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11.30 ಕ್ಕೆ ಗೃಹ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಜಾತಿಗಣತಿಯನ್ನ ಸ್ವೀಡಪ್ ಮಾಡುವ ದೃಷ್ಟಿಯಲ್ಲಿಯೂ ಸಿಎಂ ಚರ್ಚಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.