Saturday, June 15, 2024

ಸತ್ಯ | ನ್ಯಾಯ |ಧರ್ಮ

ಕೇಂದ್ರ ಸರಕಾರದಿಂದ ಮೊಬೈಲ್‌ ಬಳಕೆದಾರರಿಗೆ ಕೆಲವು ಸುರಕ್ಷತಾ ಸೂಚನೆಗಳು

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಫೋನ್ ಮೂಲಕ ವಂಚನೆಯೆನ್ನುವುದು ತೀರಾ ಸಾಧಾರಣವೆನ್ನಿಸಿದೆ. ದೇಶದಲ್ಲಿ ಮೊಬೈಲ್‌ ಬಳಕೆ ಹೆಚ್ಚುತ್ತಿರುವಂತೆ ಮೊಬೈಲ್‌ ಮೂಲಕ ಜನರನ್ನು ಮಂಗ ಮಾಡುವಂತಹ ಜಾಣರೂ ಹೆಚ್ಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (The Indian Computer Emergency Response Team)(CERT-In) ನಾಗರಿಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಅಥವಾ ಆನ್‌ಲೈನ್‌ನಲ್ಲಿ ಬ್ರೌಸ್ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತು ಮಾಡಬೇಕಿರುವ ಮತ್ತು ಮಾಡಬಾರದ ಸಂಗತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅವುಗಳೆಂದರೆ:

  • ನಿಮ್ಮ ಮೊಬೈಲಿಗೆ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೊದಲು ಯಾವಾಗಲೂ ಅಪ್ಲಿಕೇಶನ್ ವಿವರಗಳು, ಒಟ್ಟು ಡೌನ್‌ಲೋಡ್‌ಗಳ ಸಂಖ್ಯೆ, ಬಳಕೆದಾರರ ವಿಮರ್ಶೆಗಳು, ಕಾಮೆಂಟುಳು ಮತ್ತು “ಹೆಚ್ಚುವರಿ ಮಾಹಿತಿ” ವಿಭಾಗವನ್ನು ಪರಿಶೀಲಿಸಿ.
  • ನೀವು ಇನ್ಸ್ಟಾಲ್‌ ಮಾಡುತ್ತಿರುವ ಅಪ್ಲಿಕೇಷನ್ ಅದರ ಬಳಕೆಗೆ ಸಂಬಂಧಿಸಿಲ್ಲದ ಅನುಮತಿಗಳನ್ನು ಬೇಡಿದಲ್ಲಿ ಅಂತಹ ಅನುಮತಿಗಳನ್ನು ನೀಡಬೇಡಿ.
  • ಜಾಹೀರಾತುಗಳಲ್ಲಿ ಸೈಡ್‌ ಲೋಡ್‌ ಮಾಡಲಾದ ಅಪ್ಲಿಕೇಷನ್ನುಗಳ ಜಾಹೀರಾತುಗಳನ್ನು ಕ್ಲಿಕ್‌ ಮಾಡಬೇಡಿ.
  • ನಿರಂತರವಾಗಿ ಆಂಡ್ರಾಯ್ಡ್‌ ಸೆಕ್ಯುರಿಟಿ ಮತ್ತು ಪ್ಯಾಚಸ್‌ಗಳನ್ನು ಡಿವೈಸ್‌ ಆಂಡ್ರಾಯ್ಡ್‌ ಪ್ರೊವೈಡರ್‌ ಒದಗಿಸಿದಾಗಲೆಲ್ಲ ಅಪ್ಡೇಟ್‌ ಮಾಡಲು ಮರೆಯದಿರಿ.
  • ನಂಬಿಕೆಗೆ ಅರ್ಹವಲ್ಲದ ವೆಬ್‌ ಸೈಟುಗಳಿಗೆ ಭೇಟಿ ನೀಡದಿರಿ. ನಂಬಿಕರ್ಹವಲ್ಲದ ಮೂಲಗಳಿಂದ SMS/e-mail ಗಳಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ.
  • ನಿಜವಾದ ಫೋನ್‌ ಸಂಖ್ಯೆಗಳಂತೆ ಕಾಣದ ನಂಬರುಗಳ ಕುರಿತು ಎಚ್ಚರವಾಗಿರಿ. ವಂಚಕರು ತಮ್ಮ ಗುರುತನ್ನು ಮರೆಮಾಚುವ ಸಲುವಾಗಿ ತಮ್ಮ ನಿಜವಾದ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸುವುದನ್ನು ತಪ್ಪಿಸಲು ಇಮೇಲ್-ಟು-ಟೆಕ್ಸ್ಟ್ ಸೇವೆಗಳನ್ನು ಬಳಸುವ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾರೆ. ಬ್ಯಾಂಕುಗಳಿಂದ ಬರುವ ಅಸಲಿ SMS ಸಂದೇಶಗಳು ಸಾಮಾನ್ಯವಾಗಿ ಕಳುಹಿಸುವವರ ಮಾಹಿತಿಯ ಸ್ಥಳದಲ್ಲಿ ಫೋನ್ ಸಂಖ್ಯೆಯ ಬದಲಿಗೆ ಕಳುಹಿಸುವವರ ಐಡಿಯನ್ನು (ಬ್ಯಾಂಕಿನ ಸಣ್ಣ ಹೆಸರನ್ನು ಒಳಗೊಂಡಿರುತ್ತದೆ) ಹೊಂದಿರುತ್ತವೆ.
  • ಸಂದೇಶದಲ್ಲಿ ಒದಗಿಸಲಾದ ಲಿಂಕ್ ಕ್ಲಿಕ್ ಮಾಡುವ ಮೊದಲು ವ್ಯಾಪಕವಾದ ರಿಸರ್ಚ್ ಮಾಡಿ. ಫೋನ್ ಸಂಖ್ಯೆಯ ಆಧಾರದ ಮೇಲೆ ಸರ್ಚ್‌ ಮಾಡಲು ಮತ್ತು ಸಂಖ್ಯೆಯು ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸಂಬಂಧಿತ ಮಾಹಿತಿಯನ್ನು ನೋಡಲು ಸಾರ್ವಜನಿಕರಿಗೆ ಅನುಮತಿಸುವ ಅನೇಕ ಜಾಲತಾಣಗಳಿವೆ.
  • ವೆಬ್‌ಸೈಟ್ ವಿಳಾಸವನ್ನು ಸ್ಪಷ್ಟವಾಗಿ ಸೂಚಿಸುವ URLಗಳ ಮೇಲೆ ಮಾತ್ರವೇ ಕ್ಲಿಕ್ ಮಾಡಿ. ಸಂದೇಹವಿದ್ದಾಗ, ಬಳಕೆದಾರರು ತಾವು ಭೇಟಿ ನೀಡಿದ ವೆಬ್ ಸೈಟುಗಳು ನ್ಯಾಯಸಮ್ಮತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಚ್ ಇಂಜಿನ್‌ಗಳನ್ನು ಬಳಸಿಕೊಂಡು ನೇರವಾಗಿ ಸಂಸ್ಥೆಯ ವೆಬ್ ಸೈಟ್ ಹುಡುಕಬಹುದು.
  • ಯಾವಾಗಲೂ ಅಪ್ಡೇಟೆಡ್ ಆಂಟಿವೈರಸ್ ಮತ್ತು ಆಂಟಿಸ್ಪೈವೇರ್ ಸಾಫ್ಟ್ ವೇರ್ ಇನ್ಸ್ಟಾಲ್‌ ಮಾಡಿಕೊಂಡಿರಿ ಮತ್ತು ಅದನ್ನು ನಿರ್ವಹಿಸುತ್ತಿರಿ.
  • ನಿಮ್ಮ ಆಂಟಿವೈರಸ್, ಫೈರ್ ವಾಲ್, ಮತ್ತು ಫಿಲ್ಟರಿಂಗ್ ಸೇವೆಗಳಲ್ಲಿ ಸುರಕ್ಷಿತ ಬ್ರೌಸಿಂಗ್ ಪರಿಕರಗಳು, ಫಿಲ್ಟರಿಂಗ್ ಟೂಲ್‌ಗಳನ್ನು (ಆಂಟಿವೈರಸ್ ಮತ್ತು ವಿಷಯ-ಆಧಾರಿತ ಫಿಲ್ಟರಿಂಗ್) ಬಳಸುವುದನ್ನು ಪರಿಗಣಿಸಿ.
  • bit.ly ಮತ್ತು tinyurl ಒಳಗೊಂಡಿರುವಂತಹ ಸಂಕ್ಷಿಪ್ತ URLಗಳ ಬಗ್ಗೆ ಜಾಗರೂಕರಾಗಿರಿ. ಬಳಕೆದಾರರು ತಾವು ಭೇಟಿ ನೀಡುತ್ತಿರುವ ಪೂರ್ಣ ವೆಬ್ ಸೈಟ್ ಡೊಮೇನ್ ನೋಡಲು ತಮ್ಮ ಕರ್ಸರ್‌ಗಳನ್ನು ಸಂಕ್ಷಿಪ್ತ URLಗಳ ಮೇಲೆ (ಸಾಧ್ಯವಾದರೆ) ಹೋವರ್ ಮಾಡಲು ಅಥವಾ ಬಳಕೆದಾರರು ಸಣ್ಣ URL ನಮೂದಿಸಲು ಮತ್ತು ಪೂರ್ಣ URL ವೀಕ್ಷಿಸಲು ಅನುವು ಮಾಡಿಕೊಡುವ URL ಪರೀಕ್ಷಕವನ್ನು ಬಳಸುವುದು ಒಳ್ಳೆಯದು.
  • ವೈಯಕ್ತಿಕ ವಿವರಗಳು ಅಥವಾ ಖಾತೆ ಲಾಗಿನ್ ವಿವರಗಳಂತಹ ಯಾವುದೇ ಸೂಕ್ಷ್ಮ ಮಾಹಿತಿಯನ್ನು ಒದಗಿಸುವ ಮೊದಲು, ಬ್ರೌಸರಿನ ಅಡ್ರೆಸ್‌ ಬಾರ್‌ನಲ್ಲಿ ಗ್ರೀನ್ ಲಾಕ್ ಪರಿಶೀಲಿಸುವ ಮೂಲಕ ಮಾನ್ಯ ಎನ್‌ಕ್ರಿಪ್ಷನ್ ಪ್ರಮಾಣಪತ್ರಗಳನ್ನು ಗಮನಿಸಿ.
  • ಗ್ರಾಹಕರು ತಮ್ಮ ಖಾತೆಯಲ್ಲಿನ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದಲ್ಲಿ ಮುಂದಿನ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಿತ ವಿವರಗಳೊಂದಿಗೆ ತಕ್ಷಣವೇ ಆಯಾ ಬ್ಯಾಂಕಿಗೆ ವರದಿ ಮಾಡಬೇಕು.

ಇಂಟರ್ನೆಟ ಸುರಕ್ಷತೆಯ ವಿಷಯದಲ್ಲಿ ನಾವು ಎಷ್ಟೇ ಅಪ್ಡೇಟ್‌ ಆಗಿದ್ದರೂ ಕಳ್ಳರು ನಮಗಿಂತಲೂ ಹೆಚ್ಚು ಅಲರ್ಟ್‌ ಆಗಿರುತ್ತಾರೆನ್ನುವುದನ್ನು ಗಮನದಲ್ಲಿಟ್ಟುಕೊಂಡು ಸದಾ ಎಚ್ಚರಿಕೆಯಿಂದ ಅಂತರ್ಜಾಲ ಸೇವೆಯನ್ನು ಬಳಸುವುದು ಬಹಳ ಮುಖ್ಯ. ಇಂತಹ ಇನ್ನಷ್ಟು ಲೇಖನಗಳಿಗಾಗಿ ಆಗಾಗ ನಮ್ಮ ಪೀಪಲ್‌ಮೀಡಿಯಾ.ಕಾಮ್‌ಗೆ ಆಗಾಗ ಭೇಟಿ ನೀಡುತ್ತಿರಿ.

(ಆಧಾರ: ಮಿಂಟ್‌ ವೆಬ್‌ಸೈಟ್)

Related Articles

ಇತ್ತೀಚಿನ ಸುದ್ದಿಗಳು