Thursday, February 5, 2026

ಸತ್ಯ | ನ್ಯಾಯ |ಧರ್ಮ

ಸೋನಾಲಿ ಫೋಗಟ್ ಹತ್ಯೆ ಪ್ರಕರಣ: ಮತ್ತೆ ಇಬ್ಬರ ಬಂಧನ

ನವದೆಹಲಿ: ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್‌ ಹತ್ಯೆ ಪ್ರಕರಣದಲ್ಲಿ, ಮಾದಕ ವಸ್ತು ವ್ಯಾಪಾರಿ ಮತ್ತು ಆಕೆಯ ಸಾವಿನ ಹಿಂದಿನ ರಾತ್ರಿ ಪಾರ್ಟಿ ಮಾಡುತ್ತಿದ್ದ ಗೋವಾ ರೆಸ್ಟೋರೆಂಟ್‌ ಮಾಲೀಕ ಸೇರಿದಂತೆ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ.

ಈ ಮೂಲಕ ಹರಿಯಾಣ ಬಿಜೆಪಿ ನಾಯಕಿಯ ಸಾವಿನ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಆಕೆಯ ಇಬ್ಬರು ಸಹಚರರಾದ ಸುಧೀರ್‌ ಸಾಂಗ್ವಾನ್‌ ಮತ್ತು ಸುಖ್ವಿಂದರ್‌ ಸಿಂಗ್‌ ಅವರನ್ನು ಬಂಧಿಸಿದ ಒಂದು ದಿನದ ನಂತರ ಕರ್ಲೀಸ್‌ ರೆಸ್ಟೋರೆಂಟ್‌ ಮಾಲೀಕ ಎಡ್ವಿನ್‌ ನ್ಯೂನ್‌ ಮತು ಡ್ರಗ್ಸ್‌ ಡೀಲರ್‌ ದತ್ತಪ್ರಸಾದ್‌ ಗಾಂವ್ಕರ್‌ ಅವರ ಬಂಧನಗಳು ನಡೆದಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪಿಟಿಐ ವರದಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page