ಬೆಂಗಳೂರು ಏರ್ ಶೋಗೆ ಇಂದು ಅದ್ದೂರಿ ಚಾಲನೆ; ಏಳು ಲಕ್ಷಕ್ಕೂ ಹೆಚ್ಚಿನ ಜನರ ಭೇಟಿ ನಿರೀಕ್ಷೆ
ಲಿಂಕ್ ನಕಲಿಸಲಾಗಿದೆ ✓

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 4 ದಿನಗಳ ಕಾಲ ನಡೆಯಲಿರುವ ‘ಬೆಂಗಳೂರು ಏರ್ ಶೋ’ ಗೆ ಇಂದು ಅದ್ದೂರಿ ಚಾಲನೆ ಸಿಗಲಿದೆ. 4 ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ”ರನ್ವೇ ಟು ಬಿಲಿಯನ್ ಅಪಾರ್ಚುನಿಟಿಸ್” ಎಂಬ ಟ್ಯಾಗ್ ಲೈನ್ ನೀಡಲಾಗಿದೆ.
ಇಂದು ಬೆಳಗ್ಗೆ 9.30ಕ್ಕೆ ಏರ್ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಏರ್ಶೋದಲ್ಲಿ ರಷ್ಯಾ ಮತ್ತು ಅಮೆರಿಕನ್ ಫೈಟ್ ಏರ್ಕ್ರಾಫ್ಟ್ಗಳು ಭಾಗಿ ಆಗಲಿವೆ. 100 ದೇಶಗಳ 900ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿ ಉತ್ಪಾದಕರು ಭಾಗವಹಿಸಲಿದ್ದಾರೆ. ವಿವಿಧ ಕಂಪನಿಗಳ 100 ಸಿಇಒಗಳು, 50 ವಿದೇಶಿ ಒಎಂಎಸ್ ಉಪಸ್ಥಿತರಿರಲಿದ್ದಾರೆ.
ಎಐ, ಸೈಬರ್ ಸೆಕ್ಯುರಿಟಿ, ಡ್ರೋನ್ ಮತ್ತು ಗ್ಲೋಬಲ್ ಏರೋಸ್ಪೇಸ್ ಪ್ರದರ್ಶನ ಕೂಡ ಈ ಬಾರಿ ಇರಲಿದೆ ಎಂದು ಆಯೋಜನೆಯಲ್ಲಿ ತಿಳಿಸಲಾಗಿದೆ. ಆತ್ಮನಿರ್ಭರ ಭಾರತದ ಉತ್ಪನ್ನಗಳು ಏರ್ ಶೋನಲ್ಲಿ ಇರಲಿದ್ದು 10 ಸೆಮಿನಾರ್ಗಳನ್ನು ಆಯೋಜಿಸಲಾಗಿದೆ. ರಕ್ಷಣಾ ವಲಯದಲ್ಲಿ ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯ ಬಗ್ಗೆ ಚರ್ಚೆ ಆಗಲಿದೆ.
ಫೆಬ್ರವರಿ 14ರವರೆಗೆ ಲೋಹದ ಹಕ್ಕಿಗಳು ಚಿತ್ತಾರ ಮೂಡಿಸಲಿವೆ. ಈ ಬಾರಿ 7 ಲಕ್ಷಕ್ಕೂ ಹೆಚ್ಚು ಜನ ಏರ್ಶೋದಲ್ಲಿ ಭಾಗಿ ಆಗೋ ನಿರೀಕ್ಷೆ ಇದೆ. ಉಕ್ಕಿನ ಹಕ್ಕಿಗಳ ಸರ್ಕಸ್ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ.
Peepal Media Desk
Peepal Media · ವಿಶೇಷ ವಿಭಾಗ
