ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಬ್ಯಾಂಕ್‌ ನೌಕರರೇಕೆ ಸ್ಥಳೀಯ ಭಾಷೆ ಕಲಿಯುತ್ತಿಲ್ಲ?: ನಿರ್ಮಲಾ ಸೀತಾರಾಮನ್‌

PPeepal Media

Peepal Media ವಿಶೇಷ

• 2 ನಿಮಿಷದ ಓದು

ಬ್ಯಾಂಕ್‌ ನೌಕರರೇಕೆ ಸ್ಥಳೀಯ ಭಾಷೆ ಕಲಿಯುತ್ತಿಲ್ಲ?: ನಿರ್ಮಲಾ ಸೀತಾರಾಮನ್‌

ಮುಂಬಯಿ: ಭಾರತದ ಬ್ಯಾಂಕುಗಳಲ್ಲಿ ಒಂದು ನಿರ್ದಿಷ್ಟ ಭಾಷೆ ಬಾರದ ಜನರ ದೇಶಭಕ್ತಿಯನ್ನು ಪ್ರಶ್ನಿಸುವುದು. ಆ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯಿಸುವುದನ್ನು ಸಹಿಸಲಾಗದು ಎಂದು ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮುಂಬಯಿಯಲ್ಲಿ ನಡೆದ ಬ್ಯಾಂಕುಗಳ ಒಕ್ಕೂಟದ ಸಭೆಯಲ್ಲಿ ಎಚ್ಚರಿಸಿದರು.

ಹಿಂದಿ ಬಾರದಿರುವುದು ದೇಶಭಕ್ತಿಯಿಲ್ಲದಿರುವುದರ ದ್ಯೋತಕವೆಂಬಂತೆ ಮಾತನಾಡುವುದನ್ನು ನಿಲ್ಲಿಸುವುದರ ಜೊತೆಗೆ ಬ್ಯಾಂಕ್‌ ಸಿಬ್ಬಂದಿ ಸ್ಥಳೀಯ ಭಾಷೆಯನ್ನು ಕಲಿಯಬೇಕೆಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, “ಸ್ಥಳೀಯ ಭಾಷೆ ಮಾತನಾಡಲು ಬರುವವರನ್ನು ಬ್ಯಾಂಕಿನ ಗ್ರಾಹಕರೊಡನೆ ವ್ಯವಹರಿಸುವ ಸ್ಥಳಗಳಲ್ಲಿ ಕೂರಿಸಲು ಸಾಧ್ಯವಿಲ್ಲದ ಬ್ಯಾಂಕುಗಳು ನೇರವಾಗಿ ಗ್ರಾಹಕ ಸೇವೆ ನೀಡಬೇಕಾದಂತಹ ಸೌಲಭ್ಯಗಳನ್ನು ಒದಗಿಸುವುದನ್ನು ಬಿಟ್ಟುಬಿಡಲಿ,” ಎಂದು ಖಾರವಾಗಿ ಹೇಳಿದ್ದಾರೆ.

ಬ್ಯಾಂಕುಗಳು ತಮ್ಮ ಬ್ರಾಂಚುಗಳಲ್ಲಿ ಕೆಲಸ ಮಾಡುವವರನ್ನು ಮರುಹೊಂದಿಸಿ ಸ್ಥಳೀಯ ಭಾಷೆ ಗೊತ್ತಿರುವವರನ್ನು ಗ್ರಾಹಕರೊಡನೆ ನೇರ ಸಂಪರ್ಕಕ್ಕೆ ಬರುವ ಸ್ಥಳಗಲ್ಲಿ ನೇಮಿಸಬೇಕೆಂದು ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್‌ ನೌಕರರು ದಕ್ಷಿಣ ಭಾರತದ ಜನರಿಗೆ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹಿಸುತ್ತಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಂತ್ರಿಗಳಿಂದ ಈ ಹೇಳಿಕೆ ಬಂದಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ದಕ್ಷಿಣ ಭಾರತೀಯರು ಕಡಿಮೆಯಿರುವುದು, ಅವರು ಐಟಿ ಸೇರಿದಂತೆ ಖಾಸಗಿ ಕೆಲಸಗಳ ಕಡೆ ಗಮನ ಕೊಡುತ್ತಿರುವುದರಿಂದಾಗಿ ಈ ಸಮಸ್ಯೆಯಾಗುತ್ತಿದೆಯೆಂದು ಬ್ಯಾಂಕ್‌ ವಲಯದವರು ಹೇಳುತ್ತಾರೆಯಾದರೂ; ಬ್ಯಾಂಕಿಂಗ್‌ ಪರೀಕ್ಷೆ ವ್ಯವಸ್ಥೆ ಇದಕ್ಕೆ ಮುಖ್ಯ ಕಾರಣ ಎನ್ನುವುದು ದಕ್ಷಿಣ ಭಾರತದ ಹೋರಾಟಗಾರರ ಅಭಿಪ್ರಾಯ.

ಹಣಕಾಸು ಮಂತ್ರಿಯವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರರೂ, ಭಾಷಾ ಕೇಂದ್ರಿತ ಗ್ರಾಹ ಚಳುವಳಿಯಲ್ಲಿ ತೊಡಗಿಸಿಕೊಂಡಿರುವವರೂ ಆಗಿರುವ ಅರುಣ ಜಾವಗಲ್‌ ಅವರು ಈ ಕುರಿತು ಪ್ರತಿಕ್ರಿಯಿಸಿದ್ದ, ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ.

“ಬ್ಯಾಂಕಿನಲ್ಲಿ ಹಿಂದಿಯೇತರ ನಾಗರೀಕರಿಗೆ ತೊಂದರೆಯಾಗುತ್ತಿರುವುದು ದೆಹಲಿ ಕೇಂದ್ರಿತ ಹಿಂದಿ ಮೂಲಭೂತವಾದಿ ರಾಜಕಾರಣಿಗಳಿಗೆ ತಿಳಿದಿದೆ. ಬ್ಯಾಂಕಿನ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕು ಅಂತ ಭಾರತ ಒಕ್ಕೂಟ ಸರಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ, ಈ ಬಗ್ಗೆ ಮಾತನಾಡಿದ ಹಾಗೆ ಮಾಡಿ ಸುಮ್ಮನಾಗುತ್ತಾರಾ ಅಥವಾ ರಾಜ್ಯ ಭಾಷೆಯಲ್ಲಿ ಬ್ಯಾಂಕಿಂಗ್ ಸೇವೆ ಸಿಗುವಂತೆ ನಿಯಮಗಳನ್ನು ಮಾಡಿ, RBI ಮೂಲಕ ಜಾರಿಗೆ ತರುತ್ತಾರಾ ನೋಡಬೇಕಿದೆ

ಬ್ಯಾಂಕಿನಲ್ಲಿ ಆಯಾ ರಾಜ್ಯದ ಭಾಷೆಯಲ್ಲಿ ಸೇವೆ ಸಿಗದಿರಲು ಮೂಲ ಕಾರಣ-

  1. IBPS ಪರೀಕ್ಷೆಯ ನಿಯಮಗಳನ್ನು ಸಡಿಸಿಲಿ ಹೊರ ರಾಜ್ಯದವರು ಆಯ್ಕೆಯಾಗಲು ಸಹಾಯವಾಗುವಂತೆ ಮಾಡಿದ್ದು
  2. RBI ಮೂಲಕ ಹಿಂದಿ ಹೆಚ್ಚು ಬಳಸುವ ಬ್ಯಾಂಕಿಗೆ ಬಹುಮಾನ ಕೊಡುವುದು
  3. ಜನರ ಭಾಷೆಯಲ್ಲಿ ಸೇವೆ ಸಿಗುವಂತೆ ಗಟ್ಟಿಯಾಗಿ ಕಾನೂನು/ನಿಯಮ ಮಾಡದೇ RBI ಮೂಲಕ Master circualr on Hindi usgage ಎನ್ನುವಂತಹಾ ಸುತ್ತೋಲೆಗಳನ್ನು ಹೊರಡಿಸಿ ಹೆಚ್ಚು ಹೆಚ್ಚು ಹಿಂದಿ ಬಳಕೆಗೆ ಒತ್ತಡ ಹಾಕಿದ್ದು.

ಬರಿ ಬಾಯಿ ಮಾತಿನಿಂದ ಬ್ಯಾಂಕು/ಬ್ಯಾಂಕಿನ ಸಿಬ್ಬಂದಿ ಬದಲಾಗೊಲ್ಲಾ, Consumer Protection Act -1986 ಗೆ ತಿದ್ದುಪಡಿ ತಂದು, ಗ್ರಾಹಕರ ಭಾಷಾ ಹಕ್ಕನ್ನು ಎತ್ತಿಹಿಡಿಯುವ ಅಂಶಗಳನ್ನು ಸೇರಿಸಬೇಕು. RBI ಮೂಲಕ ಭಾಷಾ ಹಕ್ಕನ್ನು ಎತ್ತಿಹಿಡಿಯುವ ಸುತ್ತೋಲೆಗಳನ್ನು ಹೊರಡಿಸಬೇಕು.”

https://m.facebook.com/story.php?story_fbid=pfbid02RGjXY4KFKsK2ZToR79VXK1t6M4KSE6M7iHLdUM5GnWcYefu5sqkKCMYdiSYu7TkUl&id=100001487623623&eav=AfYueYkkY7g2jkEAIbUFIZESSZkg0AanG4OOvJ4_2ubc8Kz6IWzs9axDKqApG3i8ows&m_entstream_source=timeline&paipv=0

ಈಗೀಗ ಕರ್ನಾಟಕವೂ ಸೇರಿದಂತೆ ಹಿಂದಿ ಹೇರಿಕೆ ವಿರುದ್ಧದ ಹೋರಾಟ ಮತ್ತು ಸ್ಥಳೀಯ ಭಾಷೆಯಲ್ಲಿ ಸೇವೆ ನೀಡಬೇಕೆನ್ನುವ ಕೂಗಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬೆಂಬಲ ಸಿಕ್ಕಿದ್ದ ಬಹುತೇಕ ಕಂಪನಿಗಳು ಗ್ರಾಹಕರಿಗೆ ಕನ್ನಡದಲ್ಲೇ ತಮ್ಮ ಮಾಹಿತಿ ಸೇವೆಗಳನ್ನು ನೀಡುತ್ತಿದ್ದಾರೆ. ಈ ಬದಲಾವಣೆಗಳ ಹಿಂದೆ ಹಲವು ಕನ್ನಡಪರ ಜನರ ಮತ್ತು ಸಂಘಟನೆಗಳ ಪಾತ್ರವಿದೆ. ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತರಾಮನ್‌ ಅವರ ಹೇಳಿಕೆಗೆ ಬಹಳ ಮಹತ್ವವಿದೆ. ಮತ್ತು ಜನರ ಒತ್ತಾಸೆಗೆ ಮಣಿದು ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕಿಂಗ್‌ ಸೇವೆ ತಮ್ಮ ಭಾಷಿಕ ಒರಟುತನವನ್ನ ತೊರೆದು ಇನ್ನೂ ಮುಂದಾದರೂ ಜನರ ಭಾಷೆಯಲ್ಲಿಯೇ ಸೇವೆ ನೀಡುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

PPeepal Media

Peepal Media

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು