ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ನಾಸ್ತಿಕತೆ ಎಂದರೆ ದೇವರನ್ನು ವಿರೋಧಿಸುವುದಷ್ಟೇ ಅಲ್ಲ, ಅದು ವೈಚಾರಿಕತೆಯ ಒಂದು ರೂಪ – ಡಾ. ಎಚ್ ಆರ್ ಸ್ವಾಮಿ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ಕ್ರೀಡೆ

• 1 ನಿಮಿಷದ ಓದು

ನಾಸ್ತಿಕತೆ ಎಂದರೆ ದೇವರನ್ನು ವಿರೋಧಿಸುವುದಷ್ಟೇ ಅಲ್ಲ, ಅದು ವೈಚಾರಿಕತೆಯ ಒಂದು ರೂಪ – ಡಾ. ಎಚ್ ಆರ್ ಸ್ವಾಮಿ

ಹಾಸನ : ಭಗತ್ ಸಿಂಗ್ ಅವರನ್ನು ಕೇವಲ ಒಬ್ಬ ಕ್ರಾಂತಿಕಾರಿ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ ನೋಡದೆ, ಅವರು ಹೊಂದಿದ್ದ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಡಾ. ಎಚ್ ಆರ್ ಸ್ವಾಮಿ ಅವರು ಅಭಿಪ್ರಾಯಪಟ್ಟರು.ಭಗತ್‌ ಸಿಂಗ್‌ ಹುಟ್ಟುಹಬ್ಬದ ಅಂಗವಾಗಿ ಹಾಸನ ನಗರದಲ್ಲಿ ಹಮ್ಮಿಕೊಂಡಿದ್ದ ‘ನಾನೇಕೆ ನಾಸ್ತಿಕ’ ಕಾರ್ಯಕ್ರಮದ ಅಧ್ಯಕ್ಷೀಯ ನುಡಿಯಲ್ಲಿ ʼನಾಸ್ತಿಕತೆ ಎಂದರೇನು?ʼ ಎಂಬುದರಲ್ಲಿ ನಾಸ್ತಿಕತೆ, ವೈಚಾರಿಕತೆ ಮತ್ತು ಭಗತ್ ಸಿಂಗ್ ಅವರ ವಿಚಾರಧಾರೆಯ ಕುರಿತು ಮಾತನಾಡಿದರು.ಹಾಸನ ಜಿಲ್ಲೆಯಲ್ಲಿ ವೈಚಾರಿಕ ಚಿಂತನೆಗಳನ್ನು ಬೆಳೆಸುವ ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ ಅವರು, 2012ರಲ್ಲಿ ಬೇಲೂರಿನಲ್ಲಿ ನಡೆದ ವೈಚಾರಿಕ ಚಿಂತನೆಯ ಕಾರ್ಯಕ್ರಮಗಳು ಸೇರಿದಂತೆ ಜಿಲ್ಲೆಯಲ್ಲಿ ವೈಚಾರಿಕ ಚಳವಳಿಗೆ ಸಂಬಂಧಿಸಿದಂತೆ ನಡೆದ ವಿವಿಧ ಚಟುವಟಿಕೆಗಳನ್ನು ಅವರು ನೆನಪಿಸಿಕೊಂಡರು.

ಭಗತ್ ಸಿಂಗ್ ಅವರ ‘ನಾನು ನಾಸ್ತಿಕನಾಗಿರುವುದೇಕೆ?’ ಎಂಬ ಬರಹವನ್ನು ಉಲ್ಲೇಖಿಸಿದ ಅವರು, “ನಾಸ್ತಿಕತೆ ಎಂದರೆ ಕೇವಲ ದೇವರನ್ನು ವಿರೋಧಿಸುವುದಲ್ಲ; ದೇವರ ಅಸ್ತಿತ್ವದ ಕುರಿತು ಪ್ರಶ್ನಿಸುವುದು, ಯಾವುದೇ ನಂಬಿಕೆಯನ್ನು ಕುರುಡಾಗಿ ಸ್ವೀಕರಿಸದೆ ಅದರ ಆಧಾರವನ್ನು ಪರಿಶೀಲಿಸುವುದು ಹಾಗೂ ಮನುಷ್ಯನ ಬದುಕಿನ ಸಮಸ್ಯೆಗಳನ್ನು ವೈಚಾರಿಕವಾಗಿ ಅರ್ಥಮಾಡಿಕೊಳ್ಳುವುದು ನಾಸ್ತಿಕ ಚಿಂತನೆಯ ಪ್ರಮುಖ ಅಂಶಗಳಾಗಿವೆ” ಎಂದು ವಿವರಿಸಿದರು.ಭಗತ್ ಸಿಂಗ್ ಅವರು ತಮ್ಮ ಕಾಲದಲ್ಲಿಯೇ ಧರ್ಮ, ದೇವರು, ನಂಬಿಕೆ ಹಾಗೂ ಸಾಮಾಜಿಕ ವ್ಯವಸ್ಥೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. 1928ರ ಅವಧಿಯಲ್ಲಿ ಅವರು ಬರೆದ ಪತ್ರಗಳು ಮತ್ತು ಲೇಖನಗಳಲ್ಲಿ ಅಸ್ಪೃಶ್ಯತೆ, ಧರ್ಮಾಂತರ, ಸಾಮಾಜಿಕ ಅಸಮಾನತೆ ಹಾಗೂ ಮಾನವ ಹಕ್ಕುಗಳಂತಹ ಪ್ರಶ್ನೆಗಳ ಕುರಿತು ಚರ್ಚಿಸುತ್ತಿದ್ದರು” ಎಂದು ಅವರ ನುಡಿಗಳನ್ನು ನೆನಪಿಸಿದರು.

“ನಾಸ್ತಿಕತೆ ಎಂದರೆ ದೇವರನ್ನು ವಿರೋಧಿಸುವುದಷ್ಟೇ ಅಲ್ಲ; ಅದು ವೈಚಾರಿಕತೆಯ ಒಂದು ರೂಪ” ಎಂಬ ಅರ್ಥದಲ್ಲಿ ಅವರು ತಮ್ಮ ವಿಚಾರವನ್ನು ಮಂಡಿಸಿದರು. ಮನುಷ್ಯನಿಗೆ ಎದುರಾಗುವ ಯಾವುದೇ ಸಮಸ್ಯೆಗೆ ಅತೀಂದ್ರಿಯ ಶಕ್ತಿಗಳಲ್ಲಿ ಪರಿಹಾರ ಹುಡುಕುವುದಕ್ಕಿಂತ, ಅದರ ಕಾರಣಗಳನ್ನು ತಿಳಿದುಕೊಂಡು ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.ವೈಚಾರಿಕವಾಗಿರುವವರು ಮತ್ತು ನಾಸ್ತಿಕರು ಸಮಾಜದಲ್ಲಿ ಎದುರಿಸುವ ವಿರೋಧದ ಬಗ್ಗೆಯೂ ಮಾತನಾಡಿದ ಅವರು, “ಪ್ರಶ್ನಿಸುವವರನ್ನು ಮತ್ತು ವೈಜ್ಞಾನಿಕವಾಗಿ ಚಿಂತಿಸುವವರನ್ನು ಸಮಾಜದಲ್ಲಿ ಕೆಲವೊಮ್ಮೆ ಅನುಮಾನದಿಂದ ನೋಡಲಾಗುತ್ತದೆ. ಆದರೆ ಸಾಮಾಜಿಕ ಪ್ರಗತಿಗೆ ಪ್ರಶ್ನಿಸುವ ಮನೋಭಾವ ಅತ್ಯಗತ್ಯ” ಎಂದು ಹೇಳಿದರು.ಧಾರ್ಮಿಕ ನಂಬಿಕೆಗಳ ಕುರಿತು ಮಾತನಾಡುವಾಗ, “ವ್ಯಕ್ತಿಯ ವೈಯಕ್ತಿಕ ನಂಬಿಕೆಯನ್ನು ಮಾತ್ರ ಪ್ರಶ್ನಿಸುವುದಲ್ಲ; ಆ ನಂಬಿಕೆಗಳು ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪರಿಶೀಲಿಸಬೇಕು. ದೇವರು ಎಲ್ಲವನ್ನೂ ಸರಿಪಡಿಸುತ್ತಾನೆ ಎಂಬ ನಂಬಿಕೆಯ ಬದಲು, ಮನುಷ್ಯನೇ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು” ಎಂದು ಹೇಳಿದರು.

ವಿಷಯಗಳು: #karnataka #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಕ್ರೀಡೆ ವಿಭಾಗ

ಸಂಬಂಧಿತ ಸುದ್ದಿಗಳು