ಕ್ರೀಡಾ ದಿನಾಚರಣೆ: ಪ್ರಧಾನಿ ಮೋದಿ ಸೇರಿದಂತೆ ಹಲವು ಕ್ರೀಡಾಪಟುಗಳಿಂದ ಶುಭ ಸಂದೇಶ
P
ಲಿಂಕ್ ನಕಲಿಸಲಾಗಿದೆ ✓
ನವದೆಹಲಿ: ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಮತ್ತು ಕ್ರೀಡಾಪಟುಗಳು ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಶುಭ ಸಂದೇಶ ಕೋರಿದ್ದಾರೆ.
ʼರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು ಮತ್ತು ಮೇಜರ್ ಧ್ಯಾನ್ ಚಂದ್ ಜಿ ಅವರಿಗೆ ಜನ್ಮ ದಿನದ ಗೌರವ ನಮನಗಳು. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗಳು ಉತ್ತಮವಾಗಿವೆ, ಇದೇ ರೀತಿಯ ಗೆಲುವಿನ ಓಟ ಮುಂದುವರೆಯಲಿ, ಕ್ರೀಡೆಯು ಭಾರತದಾದ್ಯಂತ ಜನಪ್ರಿಯತೆ ಗಳಿಸುತ್ತಿರಲಿʼ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭ ಕೋರಿದರು.
ಕ್ರಿಕೆಟ್ ದಿಗ್ಗಜ ಸಚ್ಚಿನ್ ತೆಂಡೂಲ್ಕರ್ ಕಾಮನ್ ವೇಲ್ತ್ ಗೇಮ್ಸ್ನಲ್ಲಿ ʼಲಾನ್ ಬಾಲ್ಸ್ʼ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡುವ ಮೂಲಕ ಕ್ರೀಡಾ ದಿನದ ಶುಭಶಯಗಳನ್ನು ತಿಳಿಸಿದರು.
ಹಾಕಿ ಕ್ರೀಡಾಪಟು ಮೇಜರ್ ಧ್ಯಾನ್ಚಂದ್ ಅವರ ಜನ್ಮದಿನವನ್ನು ʼರಾಷ್ಟ್ರೀಯ ಕ್ರೀಡಾದಿನʼವನ್ನಾಗಿ ಆಚರಿಸಲಾಗುತ್ತದೆ.
P
Peepal Media
Peepal Media · ಕ್ರೀಡೆ ವಿಭಾಗ
ಹಿಂದಿನ ಸುದ್ದಿ