ಟಿ-20 ವಿಶ್ವಕಪ್: ಚಾಂಪಿಯನ್ ತಂಡವನ್ನು ಹೊರಹಾಕುತ್ತಾ ಐರ್ಲೆಂಡ್!
ಲಿಂಕ್ ನಕಲಿಸಲಾಗಿದೆ ✓
ಹೋಬರ್ಟ್: ಇಂದು ಟಿ -20 ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳು ಸೇಣಸಾಟ ನೆಡೆಸುತ್ತಿದ್ದು, ಟಿ -20 ವಿಶ್ವಕಪ್ ನಲ್ಲಿ ಎರೆಡುಬಾರಿ ಚಾಂಪಿಯನ್ ಎಂದೆನಿಸಿಕೊಂಡಿರುವ ವೆಸ್ಟ್ ಇಂಡಿಸ್ ತಂಡವನ್ನು ಐರ್ಲೆಂಡ್ ಹೊರಹಾಕುವ ಸಾಧ್ಯತೆ ಇದೆ.
ಶುಕ್ರವಾರ ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ವೆಸ್ಟ್ ಇಂಡೀಸ್ ತಂಡವು, 20 ಓವರ್‌ಗಳಿಗೆ 5 ವಿಕೆಟ್ ನೀಡಿ 146 ರನ್ ಕಲೆಹಾಕಿದೆ. ಮೊದಲು ಬ್ಯಾಟಿಂಗ್ ಮಾಡಲು ಸ್ಕ್ರೀಜ್‌ಗೆ ಇಳಿದ ಕೈಲ್ ಮೇಯರ್ಸ್ ಮತ್ತು ಜಾನ್ಸನ್ ಚಾರ್ಲ್ಸ್ ಐರ್ಲೆಂಡ್ ತಂಡದ ಬೌಲಿಂಗ್ ದಾಳಿಗೆ ರನ್‌ಗಳಿಸಲು ತಡಕಾಡಿದ್ದು, ಉತ್ತಮ ಪ್ರದರ್ಶನ ನೀಡದೆ ಪೆವಿಲಿಯನ್ ಸೇರಿದರು.
ಎವಿನ್ ಲೆವಿಸ್, ರೋವ್ಮನ್ ಪೊವೆಲ್, ನಾಯಕ ನಿಕೋಲಸ್ ಪೂರನ್ ಸೇರಿದಂತೆ ಯಾವೊಬ್ಬ ಆಟಗಾರರು ಭರವಸೆ ಆಟವನ್ನಾಡದೆ ವಿಕೆಟ್ ಒಪ್ಪಿಸಿ ತಂಡ ಸೇರಿದರು, ಆದರೆ ಪಂದ್ಯದಲ್ಲಿ ಬ್ರಾಂಡನ್ ಕಿಂಗ್ವ ಅವರು ಏಕಾಂಗಿಯಾಗಿ ಹೋರಾಟ ನಡೆಸಿ, ಉತ್ತಮ ಆಟವಾಡಿ ತಂಡಕ್ಕೆ ಅಜೇಯರಾಗಿ 62 ರನ್ ಕಲೆಹಾಕಿಕೊಡುವುದರ ಮೂಲಕ ತಂಡಕ್ಕೆ ನೆರವಾದರು.
ನಂತರ ಬ್ಯಾಟಿಂಗ್‌ಗೆ ಕಣಕ್ಕಿಳಿದಿರುವ ಐರ್ಲೆಂಡ್ ತಂಡ ರಭಸದ ಆಟವಾಡುತ್ತಿದ್ದು, ಗೆಲ್ಲುವ ಭರವಸೆ ಹೊಂದಿದೆ.
ಎರಡೂ ತಂಡಗಳಿಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದ್ದು, ಸೋತ ತಂಡ ವಿಶ್ವಕಪ್‌ನಿಂದ ಹೊರಬೀಳಲಿದೆ. ಎರಡು ಬಾರಿ ಚಾಂಪಿಯನ್ ಎಂದೆನಿಕೊಂಡಿರುವ ವೆಸ್ಟ್ ಇಂಡೀಸ್ ತಂಡ, ಈಗಾಗಲೇ ಸ್ಕಾಟ್ಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದ್ದು, ಈ ಪಂದ್ಯದಲ್ಲಿ ಸೋತರೆ ತಂಡಕ್ಕೆ ಇದು ಕಪ್ಪು ಚುಕ್ಕೆಯಾಗಿ ಪರಿಣಾಮ ಬೀರಲಿದೆ.
Peepal Media Desk
Peepal Media · ಕ್ರೀಡೆ ವಿಭಾಗ