Friday, July 18, 2025

ಸತ್ಯ | ನ್ಯಾಯ |ಧರ್ಮ

ಸ್ಫೋಟಕ ಬಾಂಬ್ ಬೆದರಿಕೆ : ದುಬೈ ಪ್ರಯಾಣಿಕರು ಕಂಗಾಲು

ಚೆನ್ನೈ: ಚೆನ್ನೈನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿರುವ ಬೆದರಿಕೆ ಬಂದಿರುವ ಹಿನ್ನಲೆ ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಈ ಬೆದರಿಕೆಯ ಕೆಲಸವನ್ನು ಯಾರೋ ಕಿಡಿಗೇಡಿಗಳು ಬೇಕೆಂದಲೇ ಮಾಡಿರುವ ಕೃತ್ಯ ಎಂದು  ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 170 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಜೊತೆ ಮುಂಜಾನೆ 7.20 ಕ್ಕೆ ಇಂಡಿಗೋ ವಿಮಾನ ಚೆನ್ನೈ ನಿಂದ ದುಬೈಗೆ ಹೊರಡಲು ಸಿದ್ಧವಾಗಿ ನಿಂತಿತ್ತು. ಈ ಸಮಯದಲ್ಲಿ ಯಾವುದೋ ಅನಾಮಧೇಯದಿಂದ ವಿಮಾನ ನಿಲ್ದಾಣದ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಬಂದಿತ್ತು. ದುಬೈ ಗೆ ಹೊರಟಿರುವ ವಿಮಾನದಲ್ಲಿ ಸ್ಫೋಟಕ ಬಾಂಬ್ ಇರಿಸಿರುವುದಾಗಿ ಬೆದರಿಕೆಯ ಕರೆಯೊಂದು ಬಂದಿದ್ದ ಕಾರಣ ಅಲ್ಲಿನ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸಿತ್ತು.

ದುಬೈಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರಿಗೆ ಬಾಂಬ್ ಬೆದರಿಕೆಯ ಕಾರಣ ಅವರುಗಳ ಪ್ರಯಾಣ ಸ್ಥಗಿತಗೊಳಿಸಿ ಉಳಿದುಕೊಳ್ಳಲು ಬೇರೆಡೆ ವ್ಯವಸ್ಥೆ ಮಾಡಿದ್ದೇವೆ. ಹಾಗೆಯೇ ಅನಾಮಧೇಯ ಕರೆಯ ಬಗ್ಗೆ ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಇತರ ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page